ಮಹಾಶಿವರಾತ್ರಿ: ಅರಮನೆ ಆವರಣದಲ್ಲಿರುವ ದೇವಾಲಯದಲ್ಲಿ ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಅಲಂಕಾರ! ಮಿಸ್ ಮಾಡದೆ ನೋಡಿ

ಈ ಚಿನ್ನದ ಮುಖವಾಡವನ್ನು ಜಯಚಾಮರಾಜೇಂದ್ರ ಒಡೆಯರ್ ಅವರು ಕಾಣಿಕೆಯಾಗಿ ನೀಡಿದ್ದರು. ಇದನ್ನು ವರ್ಷ ಪೂರ್ತಿ ಮುಜರಾಯಿ ಇಲಾಖೆಯ ಖಜಾನೆಯಲ್ಲಿ ಭದ್ರವಾಗಿ ಇಟ್ಟಿರಲಾಗುತ್ತದೆ. ಶಿವರಾತ್ರಿಯ ಹಿಂದಿನ ದಿನ ಚಿನ್ನದ ಈ ಮುಖವಾಡವನ್ನು ದೇವಸ್ಥಾನಕ್ಕೆ ತರಲಾಗುತ್ತದೆ.

Follow us
ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​

Updated on:Mar 07, 2024 | 4:41 PM

ಮಹಾಶಿವರಾತ್ರಿ ಬಂತಂದ್ರೆ ಸಾಕು ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಸರ್ವಾಲಂಕೃತವಾದ ಶಿವನನ್ನು ನೋಡುವುದೇ ಒಂದು ಭಾಗ್ಯ. ಇನ್ನು ಮೈಸೂರಿನ ಅರಮನೆಯಲ್ಲಿರುವ ತ್ರಿನಯನೇಶ್ವರ ದೇವಸ್ಥಾನದಲ್ಲಿ ಶಿವ ಲಿಂಗವನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಯಾಕೆ ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಿ. ಫಳ ಫಳ ಹೊಳೆಯುತ್ತಿರುವ ಶಿವಲಿಂಗದ ಮುಖವಾಡ. ಇದನ್ನು ನೋಡ್ತಾ ಇದ್ರೆ ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸದೆ ಇರಲಾರದು. ಇಂತಹ ಅದ್ಬುತವಾದ ಶಿವಲಿಂಗದ ಮುಖವಾಡವನ್ನು ನೋಡುವ ಸೌಭಾಗ್ಯ ಸಿಗುವುದು ಮೈಸೂರಿನ ಅರಮನೆಯಲ್ಲಿರುವ ತ್ರಿನೇತ್ರೇಶ್ವರ ದೇವಸ್ಥಾನದಲ್ಲಿ ಮಾತ್ರ.

ಅದೂ ವರ್ಷಕ್ಕೆ ಒಮ್ಮೆ ಮಾತ್ರ ಮಹಾಶಿವರಾತ್ರಿ ಹಬ್ಬದಲ್ಲಿ. ಹೌದು ಮಹಾಶಿವರಾತ್ರಿ ಹಬ್ಬದಂದು ಮಾತ್ರ ಈ ಆಕರ್ಷಕವಾದ ಸುಮಾರು 11 ಕೆ.ಜಿ ತೂಕ ಇರುವ ಚಿನ್ನದ ಮುಖವಾಡವನ್ನು ಶಿವಲಿಂಗಕ್ಕೆ ಧಾರಣೆ ಮಾಡಲಾಗುತ್ತದೆ. ಸದ್ಯ ಈ ಚಿನ್ನದ ಮುಖವಾಡವನ್ನು ಅರಮನೆ ಆವರಣದಲ್ಲಿರುವ ತ್ರೀನೇಶ್ವರ ದೇವಾಲಯಕ್ಕೆ ತರಲಾಗಿದೆ.

ಈ ಚಿನ್ನದ ಮುಖವಾಡವನ್ನು ಜಯಚಾಮರಾಜೇಂದ್ರ ಒಡೆಯರ್ ಅವರು ಕಾಣಿಕೆಯಾಗಿ ನೀಡಿದ್ದರು. ಇದನ್ನು ವರ್ಷ ಪೂರ್ತಿ ಮುಜರಾಯಿ ಇಲಾಖೆಯ ಖಜಾನೆಯಲ್ಲಿ ಭದ್ರವಾಗಿ ಇಟ್ಟಿರಲಾಗುತ್ತದೆ. ಶಿವರಾತ್ರಿಯ ಹಿಂದಿನ ದಿನ ಚಿನ್ನದ ಈ ಮುಖವಾಡವನ್ನು ದೇವಸ್ಥಾನಕ್ಕೆ ತರಲಾಗುತ್ತದೆ ಎಂದು ಮುಜರಾಯಿ ಅಧಿಕಾರಿ ಕೃಷ್ಣ ಮಾಹಿತಿ ನೀಡಿದ್ದಾರೆ.

Also Read: ಈ ಬಾರಿ ಮಹಾ ಶಿವರಾತ್ರಿ ಮಾರ್ಚ್ 8 ಅಥವಾ 9? ಶಿವ ಪೂಜೆಯ ಮಂಗಳಕರ ಸಮಯ ತಿಳಿಯಿರಿ

ಜಯಚಾಮರಾಜೇಂದ್ರ ಒಡೆಯರ್ ಅವರು ಕಾಣಿಕೆಯಾಗಿ ನೀಡಿರುವ ಈ ಚಿನ್ನದ ಮುಖವಾಡ ಸದ್ಯ ಮುಜರಾಯಿ ಇಲಾಖೆಯ ವಶದಲ್ಲಿದೆ. ಶಿವರಾತ್ರಿಯ ಹಿಂದಿನ ದಿನ ಪೊಲೀಸ್​ ಭದ್ರತೆಯಲ್ಲಿ ಇದನ್ನು ದೇವಸ್ಥಾನಕ್ಕೆ ತರಲಾಯ್ತು. ಇದನ್ನು ದೇವಸ್ಥಾನದ ಆಗಮಿಕರ ವಶಕ್ಕೆ ನೀಡಲಾಗುತ್ತದೆ. ದೇವಸ್ಥಾನದಲ್ಲಿ ಚಿನ್ನದ ಶಿವನ ಮುಖವಾಡಕ್ಕೆ ಗಂಗೆಯನ್ನು ಜೋಡಿಸಲಾಗುತ್ತದೆ. ಜೊತೆಗೆ ಬೆಳ್ಳಿ ಲೇಪಿತ ಅರ್ಧ ಚಂದ್ರನನ್ನು ಅಳವಡಿಸಲಾಗುತ್ತದೆ.

ನಾಳೆ ಶುಕ್ರವಾರ ಬೆಳಗ್ಗೆ 5 ಗಂಟೆಗೆ ಶಿವಲಿಂಗಕ್ಕೆ ವಿವಿಧ ಅಭಿಷೇಕಗಳನ್ನು ಮಾಡಿದ ನಂತರ ಈ ಚಿನ್ನದ ಮುಖವಾಡವನ್ನು ತೊಡಿಸಲಾಗುತ್ತದೆ. ಚಿನ್ನದ ಲೇಪಿತ ಮುಖವಾಡ ಧಾರಣೆ ಮಾಡಿದ ಶಿವನನ್ನು ನೋಡಲು ಮಹಾಶಿವರಾತ್ರಿ ದಿನ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ ಎನ್ನುತ್ತಾರೆ ಅರ್ಚಕರಾದ ವೆಂಕಟೇಶ್.

Also Read: Maha Shivratri 2024 – ಈ ಬಾರಿ ಮಹಾಶಿವರಾತ್ರಿಯ ದಿನ ಬಡವರಿಗೆ ಈ ನಾಲ್ಕು ವಸ್ತು ದಾನ ಮಾಡಿ

ಮಹಾ ಶಿವರಾತ್ರಿ ಹಬ್ಬ ಮುಗಿದ ನಂತರ ಈ ಚಿನ್ನದ ಮುಖವಾಡವನ್ನು ಮತ್ತೆ ವಾಪಸ್ಸು ಮುಜರಾಯಿ ಇಲಾಖೆಗೆ ಒಪ್ಪಿಸಲಾಗುತ್ತದೆ. ಮತ್ತೆ ಇದರ ದರ್ಶನ ಪಡೆಯಲು ಮುಂದಿನ ಮಹಾಶಿವರಾತ್ರಿಯವರೆಗೂ ಕಾಯಬೇಕಾಗುತ್ತದೆ. ಈ ಬಾರಿ ಶಿವರಾತ್ರಿ ಜೊತೆಗೆ ಮಾರನೇ ದಿನ ಅಂದರೆ ಶನಿವಾರ ಭಾನುವಾರ ಸಹಾ ಚನ್ನದ ಮುಖವಾಡದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನೀವು ಸಹಾ ನಾಳೆ ಮಹಾಶಿವರಾತ್ರಿ‌ಯ ದಿನ ಚಿನ್ನದ ಮುಖವಾಡ ಹೊತ್ತಿರುವ ಶಿವನನ್ನು ನೋಡಬೇಕು ಅಂತಾ ಇದ್ರೆ ಅರಮನೆಗೆ ಬನ್ನಿ. ಫಳ ಫಳ ಹೊಳೆಯುವ ಚಿನ್ನ ಲೇಪಿತ ಶಿವ ಲಿಂಗದ ದರ್ಶನ ಪಡೆದು ಪುನೀತರಾಗಿ ಅನ್ನೋದೆ ನಮ್ಮ ಆಶಯ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:34 pm, Thu, 7 March 24

ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ