AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ನಂ.1 ಸ್ಥಾನ, ದೇಶಕ್ಕೆ 4ನೆಯ ಸ್ಥಾನ ಪಡೆದಿರುವ ಮೈಸೂರಿನ ಪೊಲೀಸ್ ಶ್ವಾನ ಅರ್ಜುನನ ಸಾಧನೆ ನೋಡುವ ಬನ್ನೀ

Karnataka Police Dog Squad Arjuna: ರಾಜ್ಯದಲ್ಲಿ ನಾರ್ಕೊಟಿಕ್ಸ್ ವಿಭಾಗದಲ್ಲಿ ಮಾದಕ ವಸ್ತುಗಳನ್ನು ಭೇದಿಸುವಲ್ಲಿ ನಂ.1 ಸ್ಥಾನ ಪಡೆದಿದ್ದಾನೆ‌. ಮೈಸೂರಿನ ಪೊಲೀಸ್ ಇಲಾಖೆಯ ಶ್ವಾನದಳದ ಈ ಅರ್ಜುನ, ಲಕ್ನೋದಲ್ಲಿ ನಡೆದ ಆಲ್ ಇಂಡಿಯಾ ಡ್ಯೂಟಿ ಮೀಟ್ ನಲ್ಲಿ ನಾಲ್ಕನೇ ಸ್ಥಾನ ಗೆದ್ದು ಕರುನಾಡಿಗೆ ಕೀರ್ತಿ ತಂದಿದ್ದಾನೆ ಎಂದು ಎದೆಯುಬ್ಬಿಸಿ ಹೇಳಿದವರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್.

ಕರ್ನಾಟಕದಲ್ಲಿ ನಂ.1 ಸ್ಥಾನ, ದೇಶಕ್ಕೆ 4ನೆಯ ಸ್ಥಾನ ಪಡೆದಿರುವ ಮೈಸೂರಿನ ಪೊಲೀಸ್ ಶ್ವಾನ ಅರ್ಜುನನ ಸಾಧನೆ ನೋಡುವ ಬನ್ನೀ
ಕರ್ನಾಟಕದಲ್ಲಿ ನಂ.1 ಸ್ಥಾನ, ದೇಶಕ್ಕೆ 4ನೆಯ ಸ್ಥಾನ ಪಡೆದ ಪೊಲೀಸ್ ಶ್ವಾನ
ದಿಲೀಪ್​, ಚೌಡಹಳ್ಳಿ
| Edited By: ಸಾಧು ಶ್ರೀನಾಥ್​|

Updated on:Mar 06, 2024 | 4:39 PM

Share

ಆತ ನೋಡೋಕೆ ಫುಲ್ ಸಾಫ್ಟ್, ಸಕತ್ ಫ್ರೆಂಡ್ಲಿ, ಆದ್ರೆ ಡ್ಯೂಟಿ ವಿಚಾರದಲ್ಲಿ ಮಾತ್ರ ರಫ್​​ ಅಂಡ್ ಟಫ್​. ಅಖಾಡಕ್ಕೆ ಇಳಿದ್ರೆ ಪ್ರಕರಣವನ್ನ ಭೇದಿಸದೆ ಇರೋದಿಲ್ಲ. ಇದೀಗಾ ಆತನ ಚಾಣಾಕ್ಷತನಕ್ಕೆ ರಾಜ್ಯಕ್ಕೆ ಪ್ರಥಮ ಎನಿಸಿಕೊಂಡು ಗೋಲ್ಡ್ ಮೆಡಲ್ ಪಡೆದ್ರೆ, ಆಲ್ ಇಂಡಿಯಾ ರೇಂಜ್ ನಲ್ಲಿ ಪದಕಗಳಿಸಿ ಮೈಸೂರಿಗಷ್ಟೆ ಅಲ್ಲದೆ ರಾಜ್ಯಕ್ಕೆ ಹೆಮ್ಮೆ ತಂದಿದ್ದಾನೆ (Police Dog). ಅಷ್ಟಕ್ಕೂ ಯಾರೀತ ಅನ್ನೋ ಕುತೂಹಲ ನಿಮಗಿದ್ಯಾ? ಹಾಗಿದ್ರೆ ಈ ಸ್ಟೋರಿ ನೋಡಿ. ಕುತ್ತಿಗೆಯಲ್ಲಿ ಗೋಲ್ಡ್ ಮೆಡಲ್.. ವರ್ಕ್ ಮೂಡ್ ಬಂದಾಗ ಫುಲ್ ಎಪಿಷಿಯಂಟ್… ಅಂದಹಾಗೆ ನಾವು ಹೇಳ್ತಾ ಇರೋದು ಇವನ ಬಗ್ಗೆಯೇ.‌ ಯಸ್ ಈತನೇ ಅರ್ಜುನ, ಮಾದಕ ವಸ್ತುಗಳನ್ನ ಭೇದಿಸೋ ರಣಬೇಟೆಗಾರ. ಅಂಬಾರಿ ಹೊತ್ತ ಅರ್ಜುನನ ನೆನಪು ಮಾಸುವ ಮುನ್ನವೇ ಈ ಅರ್ಜುನ ಹೆಸರಿನ ಪೊಲೀಸ್ ಶ್ವಾನ (Karnataka Police Dog Squad) ಇದೀಗ ಮೈಸೂರು ಪೊಲೀಸ್ ಇಲಾಖೆಗೆ ಹೆಮ್ಮೆ ತಂದಿದ್ದಾನೆ.

ರಾಜ್ಯದಲ್ಲಿ ನಾರ್ಕೊಟಿಕ್ಸ್ ವಿಭಾಗದಲ್ಲಿ ಮಾದಕ ವಸ್ತುಗಳನ್ನು ಭೇದಿಸುವಲ್ಲಿ ನಂ.1 ಸ್ಥಾನ ಪಡೆದಿದ್ದಾನೆ‌. ಮೈಸೂರಿನ ಪೊಲೀಸ್ ಇಲಾಖೆ ಶ್ವಾನದಳದ ಈ ಅರ್ಜುನ, ಲಕ್ನೋದಲ್ಲಿ ನಡೆದ ಆಲ್ ಇಂಡಿಯಾ ಡ್ಯೂಟಿ ಮೀಟ್ ನಲ್ಲಿ ನಾಲ್ಕನೇ ಸ್ಥಾನ ಗೆದ್ದು ಕರುನಾಡಿಗೆ ಕೀರ್ತಿ ತಂದಿದ್ದಾನೆ ಎಂದು ಎದೆಯುಬ್ಬಿಸಿ ಹೇಳಿದವರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್.

ಇನ್ನು, ಈ ಅರ್ಜುನಿಗೆ ಈಗಿನ್ನೂ 3 ವರ್ಷ ವಯಸ್ಸು. ಕೇವಲ‌ 6 ತಿಂಗಳ ಮರಿ ಇದ್ದಾಗ ಪೊಲೀಸ್ ಇಲಾಖೆಯು ರಾಜ್ ಕುಮಲ್ ಕೆನಲ್ ಮೂಲಕ ಖರೀದಿ ಮಾಡಿತ್ತು. ಕಳೆದ 3 ವರ್ಷಗಳಿಂದಲೂ ನಾರ್ಕೋಟಿಕ್ ವಿಭಾಗದಲ್ಲಿ ಸಕ್ರಿಯನಾಗಿರೋ ಈ ಅರ್ಜುನನ ಮೇಲೆ ಪೊಲೀಸ್ ಇಲಾಖೆಗೆ ಹೆಚ್ಚು ಭರವಸೆ. ನಾರ್ಕೋಟಿಕ್ಸ್ ವಿಭಾಗದಲ್ಲಿ ಕಳೆದ 3 ವರ್ಷಗಳಿಂದಲೂ ಕೆಲಸ ನಿರ್ವಹಣೆ ಮಾಡ್ತಾ ಇರೋ ಈ ಅರ್ಜುನ ಹಲವು ಕೇಸ್ ಗಳನ್ನು ಭೇದಿಸಿದ್ದಾನೆ.

Also Read: ಚಿಕ್ಕಬಳ್ಳಾಪುರ -ಡೆಬಿಟ್ ಕಾರ್ಡ್ ಹಣದ ಲಿಮಿಟ್ ಹೆಚ್ಚಿಸುವುದಾಗಿ ನಂಬಿಸಿ ಉಪನ್ಯಾಸಕನಿಗೆ ಪಂಗನಾಮ

ಮಾದಕ ವಸ್ತುಗಳ ಜಾಲವನ್ನು ಬಗ್ಗು ಬಡಿಯೋದ್ರಲ್ಲಿ ಪೊಲೀಸ್ ಇಲಾಖೆಗೆ ಸಾಥ್ ಕೊಡ್ತೀರೋ ಈ ಅರ್ಜುನ ದಸರಾ ಅಂಬಾರಿ ಆನೆ ಅರ್ಜುನನಂತೆಯೇ ಚಾಣಕ್ಯ ಕೂಡ. ಒಟ್ಟಿನಲ್ಲಿ ತನ್ನ ಕಾರ್ಯಕ್ಷಮತೆ ಮೂಲಕ ಹೆಸರು ಪಡೆದಿರೋ ಈ ಅರ್ಜುನ, ಅಂಬಾರಿ ಆನೆ ಅರ್ಜುನನಂತೆ ನಾಡಿಗೆಲ್ಲ ತನ್ನ ಹೆಸರು ಪಸರಿಸಲಿ ಅನ್ನೋದು ಎಲ್ಲರ ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Wed, 6 March 24

Follow Us
Dileep CP
Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More