ಚಿಕ್ಕಬಳ್ಳಾಪುರ: ಡೆಬಿಟ್ ಕಾರ್ಡ್ ಹಣದ ಲಿಮಿಟ್ ಹೆಚ್ಚಿಸುವುದಾಗಿ ನಂಬಿಸಿ ಉಪನ್ಯಾಸಕನಿಗೆ ಪಂಗನಾಮ

ಚಿಕ್ಕಬಳ್ಳಾಪುರದ ಬ್ಯಾಂಕ್ ಅಧಿಕಾರಿ ಎಂದು ಕರೆ ಮಾಡಿ ಡೆಬಿಟ್ ಕಾರ್ಡ್​ನ ಡ್ರಾ ಲಿಮಿಟ್ ಹೆಚ್ಚುಸುವುದಾಗಿ ಹೇಳಿ ಒಟಿಪಿ ಪಡೆದು ವಂಚನೆ ಮಾಡಲಾಗಿದೆ. 65 ಸಾವಿರ ಹಣ ಕಳೆದುಕೊಂಡ ಉಪನ್ಯಾಸಕ ಚಿಕ್ಕಬಳ್ಳಾಪುರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಾಗೂ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ: ಡೆಬಿಟ್ ಕಾರ್ಡ್ ಹಣದ ಲಿಮಿಟ್ ಹೆಚ್ಚಿಸುವುದಾಗಿ ನಂಬಿಸಿ ಉಪನ್ಯಾಸಕನಿಗೆ ಪಂಗನಾಮ
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Mar 06, 2024 | 1:29 PM

ಚಿಕ್ಕಬಳ್ಳಾಪುರ, ಮಾರ್ಚ್​.06: ನಿಮ್ಮ ಬಳಿ ಇರುವ ಎಟಿಎಂ ಕಾರ್ಡ್​ನ (ATM Card) ಹಣ ಡ್ರಾ ಲಿಮಿಟನ್ನು ಹೆಚ್ಚಿಸಿಕೊಡುವುದಾಗಿ ನಂಬಿಸಿ ಉಪನ್ಯಾಸಕರೊಬ್ಬರಿಗೆ 65,000/- ರೂಪಾಯಿಗಳ ಪಂಗನಾಮ (Fraud) ಹಾಕಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಹಣ ಕಳೆದುಕೊಂಡ ಉಪನ್ಯಾಸಕ ಕಂಗಾಲಾಗಿದ್ದಾರೆ. ಘಟನೆ ಸಂಬಂಧ ಚಿಕ್ಕಬಳ್ಳಾಪುರದ ಸಿಇಎನ್ ಪೊಲೀಸ್ ಠಾಣೆಯಲ್ಲಿ (Chikkaballapur CEN Police Station) ಪ್ರಕರಣ ದಾಖಲಾಗಿದೆ.

ತಾವು ಚಿಕ್ಕಬಳ್ಳಾಪುರದ ಎಸ್‍ಬಿಐ ಬ್ಯಾಂಕ್‍ನ ಅಧಿಕಾರಿ ವಿಜಯಕುಮಾರ್ ಎಂದು ಹೇಳಿ ಪರಿಚಯವಾದ ವ್ಯಕ್ತಿ, ಚಿಕ್ಕಬಳ್ಳಾಪುರ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿರುವ ಶ್ರೀನಿವಾಸಮೂರ್ತಿ ಎನ್ನುವವರಿಗೆ ಕರೆ ಮಾಡಿ ಅವರಿಂದ ಒಟಿಪಿ ಪಡೆದು ರೂ. 65,000/- ಹಣವನ್ನು ಲಪಟಾಯಿಸಿದ್ದಾರೆ. ಹಣ ಕಳೆದುಕೊಂಡು ಉಪನ್ಯಾಸಕ ಶ್ರೀನಿವಾಸಮೂರ್ತಿ ಬ್ಯಾಂಕ್ ಬಳಿ ಬಂದು ವಿಚಾರಿಸಿದಾಗ ಸೈಬರ್ ವಂಚನೆ ಎಂದು ತಿಳಿದು ತಲೆ ಮೇಲೆ ಕೈಹೊತ್ತಿದ್ದಾರೆ. ನ್ಯಾಯ ಕೊಡಿಸುವಂತೆ ಮನವಿ ಮಾಡಿ, ಚಿಕ್ಕಬಳ್ಳಾಪುರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ಗೌರಿಬಿದನೂರು: ವಾಹನ ಸಾಲ ವಸೂಲಾತಿಗೆ ಬಂದ ಹೆಚ್‍ಡಿಎಫ್‍ಸಿ ಏಜೆಂಟ್‍ಗೆ ಮಚ್ಚಿನಿಂದ ಹಲ್ಲೆಗೆ ಯತ್ನ!

ಗ್ರಾಹಕರ ಖಾತೆಗಳಿಗೆ ಖನ್ನ ಹಾಕಿದ ಬ್ಯಾಂಕ್ ಸಿಬ್ಬಂದಿ

ಬ್ಯಾಂಕ್‍ನ್ನು ನಂಬಿ ಗ್ರಾಹಕರು ತಮ್ಮ ಬಳಿ ಇರುವ ನಗದು ಹಣ ಸೇರಿ ಚಿನ್ನಾಭರಣಗಳನ್ನು ಲಾಕರ್‍ನಲ್ಲಿ ಭದ್ರವಾಗಿ ಇಡುತ್ತಾರೆ. ಆದರೆ ಗ್ರಾಹಕರ ಖಾತೆಯಲ್ಲಿರುವ ಹಣವನ್ನು ರಕ್ಷಣೆ ಮಾಡಬೇಕಾದ ಸ್ವತಃ ಸರ್ಕಾರಿ ಸ್ವಾಮ್ಯದ ಖ್ಯಾತ ಬ್ಯಾಂಕಿನ ಮಹಿಳಾ ಸಿಬ್ಬಂದಿಯೊಬ್ಬರು ಗ್ರಾಹಕರುಗಳ ಖಾತೆಯಲ್ಲಿದ್ದ ರೂ.27,69,470/- ಹಣವನ್ನು ತಮ್ಮ ಸಂಬಂಧಿಕರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ ನಗರದ ಬಿ.ಬಿ.ರಸ್ತೆಯ ಆರ್‍ವಿವಿ ಕಾಂಪ್ಲೆಕ್ಸ್ ಶಾಖೆಯ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಶಾಖೆಯ ಗ್ರಾಹಕರ ಖಾತೆಯ ಹಣಕ್ಕೆ ಖನ್ನ ಬಿದ್ದಿದೆ. ಬ್ಯಾಂಕಿನ ಬಿ.ಜಿ.ಎಲ್.ಪಾರ್ಕಿಂಗ್ ಖಾತೆಗಳು, ಸಾಲದ ಖಾತೆಗಳು ಸೇರಿದಂತೆ ಇತರೆ ಖಾತೆದಾರರ ಖಾತೆಗಳಿಂದ ಅಕ್ರಮವಾಗಿ ರೂ.27,69,470/- ಹಣವನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು