ವರುಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ, ಯತೀಂದ್ರ ಸಿದ್ದರಾಮಯ್ಯಗೆ ಬಿಸಿ ತಾಕಿಸಿದ ಮುದ್ದಬೀರನಹುಂಡಿ ಗ್ರಾಮಸ್ಥರು!

ವರುಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ, ಯತೀಂದ್ರ ಸಿದ್ದರಾಮಯ್ಯಗೆ ಬಿಸಿ ತಾಕಿಸಿದ ಮುದ್ದಬೀರನಹುಂಡಿ ಗ್ರಾಮಸ್ಥರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 08, 2024 | 11:36 AM

ಇವತ್ತು ಯತೀಂದ್ರ ಗ್ರಾಮಕ್ಕೆ ಭೇಟಿ ನೀಡುವ ವಿಷಯ ಅವರಿಗೆ ಗೊತ್ತಾದಾಗ ಅಲ್ಲಿನ ನಿವಾಸಿಗಳು ತಮ್ಮ ಕೋಪ ಅಸಮಾಧಾನವನ್ನು ಹೀಗೆ ಹೊರಹಾಕಿದರು. ಯತೀಂದ್ರ ಮತ್ತು ಪೊಲೀಸರು ಸಮಾಧಾನಪಡಿಸಲು ಯತ್ನಿಸಿದರೂ ಜನ ಕೇಳಲು ತಯಾರಿರಲಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಜನ ಹೀಗೆ ಪ್ರಜ್ಞಾವಂತಿಕೆ ಮೆರೆದರೆ ನಮ್ಮ ಪ್ರತಿನಿಧಿಗಳು ಸರಿದಾರಿಗೆ ಬಂದಾರು.

ಮೈಸೂರು: ಇಂಥದೊಂದು ಬೆಳವಣಿಗೆಯನ್ನು ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಬ್ಬರೂ ನಿರೀಕ್ಷಿಸಿರಲಾರರು. ಯಾಕೆಂದರೆ ಇದು ಜರುಗಿದ್ದು ಇಬ್ಬರೂ ಸ್ಫರ್ಧಿಸಿರುವ ವರುಣಾ ಕ್ಷೇತ್ರದಲ್ಲಿ (Varuna constituency). ವಿಷಯವೇನೆಂದರೆ, ವರುಣಾ ಕ್ಷೇತ್ರದ ಮುದ್ದಬೀರನಹುಂಡಿ ಗ್ರಾಮದ ಜನ ಕ್ಷೇತ್ರದ ಮಾಜಿ ಶಾಸಕ ಯತೀಂದ್ರ ಅವರನ್ನು ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಘೇರಾವ್ ಮಾಡಿ ಗ್ರಾಮದೊಳಗೆ ಬರದಂತೆ ತಡೆದರು. ಅವರ ತಗಾದೆ ಏನೆಂದರೆ, ಗ್ರಾಮದ ರಸ್ತೆ ಅಭಿವೃಧ್ಧಿ ಕಾಮಗಾರಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಮತ್ತು ತಂದೆ ಹಾಗೂ ಮಗ ಇಬ್ಬರ ಅಧಿಕಾರಾವಧಿಯಲ್ಲೂ ಅದು ಪೂರ್ಣಗೊಂಡಿಲ್ಲ. ಸಿದ್ದರಾಮಯ್ಯ ಮತ್ತು ಯತೀಂದ್ರ ಅವರ ಪ್ರತಿಬಾರಿಯ ನೀರಸ ಪ್ರತಿಕ್ರಿಯೆಯಿಂದ ಜನ ಆಕ್ರೋಶಗೊಂಡಿದ್ದರು. ಇವತ್ತು ಯತೀಂದ್ರ ಗ್ರಾಮಕ್ಕೆ ಭೇಟಿ ನೀಡುವ ವಿಷಯ ಅವರಿಗೆ ಗೊತ್ತಾದಾಗ ಅಲ್ಲಿನ ನಿವಾಸಿಗಳು ತಮ್ಮ ಕೋಪ ಅಸಮಾಧಾನವನ್ನು ಹೀಗೆ ಹೊರಹಾಕಿದರು. ಯತೀಂದ್ರ ಮತ್ತು ಪೊಲೀಸರು ಸಮಾಧಾನಪಡಿಸಲು ಯತ್ನಿಸಿದರೂ ಜನ ಕೇಳಲು ತಯಾರಿರಲಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಜನ ಹೀಗೆ ಪ್ರಜ್ಞಾವಂತಿಕೆ ಮೆರೆದರೆ ನಮ್ಮ ಜನ ಪ್ರತಿನಿಧಿಗಳು ಸರಿದಾರಿಗೆ ಬಂದಾರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಾಮರಾಜನಗರ: ಕನಕ ಜಯಂತಿ: ಯತೀಂದ್ರ ಸಿದ್ದರಾಮಯ್ಯಗೆ ಯುವಕನಿಂದ ನಿಂದನೆ, ಪರಾರಿ