ರಾಮಮಂದಿರ ಕಟ್ಟುವುದಕ್ಕಿಂತ ರಾಮರಾಜ್ಯ ನಿರ್ಮಾಣ ಆಗಬೇಕು- ಯತೀಂದ್ರ ಸಿದ್ದರಾಮಯ್ಯ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ‘ರಾಮಮಂದಿರ ಕಟ್ಟುವುದಕ್ಕಿಂತ ರಾಮರಾಜ್ಯ ನಿರ್ಮಾಣ ಆಗಬೇಕು ಎಂದಿದ್ದಾರೆ.
ಚಾಮರಾಜನಗರ, ಜ.27: ರಾಮಮಂದಿರ ಕಟ್ಟುವುದಕ್ಕಿಂತ ರಾಮರಾಜ್ಯ ನಿರ್ಮಾಣ ಆಗಬೇಕು ಎಂದು ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಹೇಳಿದ್ದಾರೆ. ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಾವ ಭರವಸೆ ಈಡೇರಿಸಿಲ್ಲ. ಆದರೂ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ, ರಾಮಮಂದಿರ ಮಾಡುವುದು ಗ್ಯಾರಂಟೀನಾ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರಿಗೆ ರಕ್ಷಣೆ ಸಿಕ್ಕಾಗ ರಾಮರಾಜ್ಯ ಆಗುತ್ತೆ-ಯತೀಂದ್ರ
ಸಮಾಜದಲ್ಲಿ ಸಮಾನತೆ ಆದಾಗ, ಹಸಿವು ಮುಕ್ತ ಆದಾಗ ಹಾಗೂ ಯುವಕರಿಗೆ ಸರಿಯಾದ ಶಿಕ್ಷಣ ಉದ್ಯೋಗ ಜೊತೆಗೆ ಮಹಿಳೆಯರಿಗೆ ರಕ್ಷಣೆ ಸಿಕ್ಕಾಗ ರಾಮರಾಜ್ಯ ಆಗುತ್ತದೆ. ದೇವರು ಸಾಕ್ಷಾತ್ಕಾರ ಆಗಬೇಕಾದ್ರೆ ದೊಡ್ಡ ದೊಡ್ಡ ಭವ್ಯವಾದ ದೇವಸ್ಥಾನ ಕಟ್ಟಬೇಕಿಲ್ಲ. ಸಾವಿರಾರು ವರ್ಷಗಳಿಂದ ಹಿಂದೂ ಧರ್ಮ ಇದೆ, ನೂರಾರು ದೇವಸ್ಥಾನಗಳಿವೆ. ಆದ್ರೆ, ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಹೋಗಿಲ್ಲ ಎಂದು ಕಿಡಿಕಾರಿದರು.
ಯತೀಂದ್ರ ಸಿದ್ದರಾಮಯ್ಯಗೆ ಯುವಕನಿಂದ ನಿಂದನೆ; ಅರೆಸ್ಟ್
ಇನ್ನು ಕನಕ ಜಯಂತಿ ಕಾರ್ಯಕ್ರಮದ ವೇಳೆ ಫುಲ್ ಹೈಡ್ರಾಮ ನಡೆದಿದೆ. ಯತೀಂದ್ರ ಸಿದ್ದರಾಮಯ್ಯಗೆ ಬೈಕ್ನಲ್ಲಿ ಬಂದಿದ್ದ ಯುವಕನೊಬ್ಬ ಅವಾಚ್ಯ ಶಬ್ದದಿಂದ ನಿಂಧಿಸಿ ಪರಾರಿಯಾದ ಘಟನೆ ನಡೆದಿದ್ದು, ಆತನನ್ನು ಬಂಧಿಸಲಾಗಿದೆ. ರಂಜಿತ್ ಬಂಧಿತ ಆರೋಪಿ. ಯತೀಂದ್ರ ಸಿದ್ದರಾಮಯ್ಯ ಭಾಷಣ ಮಾಡುವಾಗ ಕೇಂದ್ರ ಸರ್ಕಾರ ಹಾಗೂ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುವಾಗ ಅವಾಚ್ಯ ಶಬ್ದದಿಂದ ನಿಂದಿಸಿ ಹೋಗಿದ್ದವ ಪುನಃ ಮೈದಾನಕ್ಕೆ ಬಂದಾಗ ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 pm, Sat, 27 January 24