ಸ್ನೇಹ ನಿರಾಕರಿಸಿದ 11ನೇ ತರಗತಿ ಹುಡುಗಿಯ ಗಂಟಲು ಸೀಳಿದ ಹುಡುಗ; ಪರಾರಿಯಾಗಿದ್ದವ ಅರೆಸ್ಟ್

| Updated By: Lakshmi Hegde

Updated on: Nov 25, 2021 | 1:07 PM

ಈ ಹುಡುಗ ಮತ್ತು ಹುಡುಗಿ ಇಬ್ಬರೂ ಮಾರ್ವಾರ್​ ಜಂಕ್ಷನ್​​ನ ಬಿಥೋರಾ ಕರಣ್​ ಗ್ರಾಮದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ.

ಸ್ನೇಹ ನಿರಾಕರಿಸಿದ 11ನೇ ತರಗತಿ ಹುಡುಗಿಯ ಗಂಟಲು ಸೀಳಿದ ಹುಡುಗ; ಪರಾರಿಯಾಗಿದ್ದವ ಅರೆಸ್ಟ್
ಸಾಂಕೇತಿಕ ಚಿತ್ರ
Follow us on

11ನೇ ತರಗತಿಯ ಬಾಲಕಿಗೆ 12ನೇ ತರಗತಿ ಬಾಲಕನೊಬ್ಬ ಕತ್ತು ಕೊಯ್ದು ಶಾಕಿಂಗ್ ಘಟನೆ ರಾಜಸ್ಥಾನದ ಪಾಲಿ ಎಂಬಲ್ಲಿ ನಡೆದಿದೆ. ಈ ಹುಡುಗಿ ತನ್ನ ಸ್ನೇಹವನ್ನು ಒಪ್ಪಿಕೊಳ್ಳಲಿಲ್ಲ ಎಂಬ ಒಂದು ಕ್ಷುಲ್ಲಕ ಕಾರಣಕ್ಕೆ ಇಂಥ ಕೃತ್ಯಕ್ಕೆ ಆತ ಮುಂದಾಗಿದ್ದಾನೆ. ಆಕೆ ತನ್ನ ಶಾಲೆಯಲ್ಲಿ ಮಧ್ಯಾಹ್ನ ಊಟ ಮಾಡುತ್ತಿದ್ದಾಗ ಸೀದಾ ಅಲ್ಲಿಗೆ ಹೋಗಿ ಗಂಟಲು ಸೀಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಹುಡುಗಿಯ ಗಂಟಲಿಗೆ 20 ಹೊಲಿಗೆ ಹಾಕಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆಕೆಗೆ ಈಗ ಮಾತನಾಡಲೂ ಆಗುತ್ತಿಲ್ಲ. 

ಆರೋಪಿ ಹುಡುಗ ಆಕೆಯ ಕತ್ತು ಸೀಳಿ ಬಳಿಕ ಪರಾರಿಯಾಗಿದ್ದ. ಆದರೆ ಪೊಲೀಸರು ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.  ಈ ಹುಡುಗ ಮತ್ತು ಹುಡುಗಿ ಇಬ್ಬರೂ ಮಾರ್ವಾರ್​ ಜಂಕ್ಷನ್​​ನ ಬಿಥೋರಾ ಕರಣ್​ ಗ್ರಾಮದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. ಆದರೆ ಹುಡುಗ ಆಕೆಯನ್ನು ಪ್ರೀತಿಸುತ್ತಿದ್ದ. ಹಾಗೇ, ತನ್ನ ಬಳಿ ಆತ್ಮೀಯತೆಯಿಂದ ಇರುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಆದರೆ ಹುಡುಗಿಗೆ ಆತನನ್ನು ಕಂಡರೆ ಇಷ್ಟವಾಗುತ್ತಿರಲಿಲ್ಲ. ಇದೇ ಸಿಟ್ಟಿನಲ್ಲಿ ಆಕೆಯ ಗಂಟಲು ಸೀಳಿ ಓಡಿಹೋಗಿದ್ದಾನೆ.  ನಂತರ ಶಾಲೆಯ ಶಿಕ್ಷಕರೇ ಗಾಯಾಳು ಹುಡುಗಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಂತರ ಪಾಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್​ ವೇಳೆ ಈ 4 ಕ್ಲೇಮ್​ಗಳ ಬಗ್ಗೆ ಗಮನ ನೀಡದಿದ್ದರೆ ನುಕ್ಸಾನ್ ಆದೀತು ಎಚ್ಚರ