ರಾಷ್ಟ್ರಧ್ವಜ ಬಳಸಿ ಚಿಕನ್ ಕ್ಲೀನ್ ಮಾಡುತ್ತಿರುವ ವಿಡಿಯೊ ವೈರಲ್; ಸಿಲ್ವಾಸ್ಸಾದ ವ್ಯಕ್ತಿಯ ಬಂಧನ

|

Updated on: Apr 22, 2023 | 8:47 PM

ವ್ಯಕ್ತಿ ತಾನು ಕೆಲಸ ಮಾಡುತ್ತಿದ್ದ ಕೋಳಿ ಅಂಗಡಿಯಲ್ಲಿ ಕೋಳಿಯನ್ನು ಸ್ವಚ್ಛಗೊಳಿಸಲು ಬಟ್ಟೆಯ ತುಂಡು ಬದಲು ರಾಷ್ಟ್ರಧ್ವಜವನ್ನು ಬಳಸಿ ಅಪಮಾನ ಮಾಡುತ್ತಿರುವುದು ಕಂಡುಬಂದಿದೆ.

ರಾಷ್ಟ್ರಧ್ವಜ ಬಳಸಿ ಚಿಕನ್ ಕ್ಲೀನ್ ಮಾಡುತ್ತಿರುವ ವಿಡಿಯೊ ವೈರಲ್; ಸಿಲ್ವಾಸ್ಸಾದ ವ್ಯಕ್ತಿಯ ಬಂಧನ
ರಾಷ್ಟ್ರಧ್ವಜದಲ್ಲಿ ಚಿಕನ್ ಕ್ಲೀನ್ ಮಾಡಿದ ವ್ಯಕ್ತಿ
Follow us on

ಸಿಲ್ವಾಸ್ಸಾ, ದಾದ್ರಾ ಮತ್ತು ನಗರ ಹವೇಲಿ: ಕೇಂದ್ರಾಡಳಿತ ಪ್ರದೇಶವಾದ ದಾದರ್ ಮತ್ತು ನಗರ್ ಹವೇಲಿಯ (Dadra and Nagar Haveli) ಸಿಲ್ವಾಸ್ಸಾದ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜದಿಂದ (National Flag) ಕೋಳಿಯನ್ನು ಶುಚಿಗೊಳಿಸುತ್ತಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral video) ಆದ ನಂತರ ಆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಸಿಲ್ವಾಸ್ಸಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ವ್ಯಕ್ತಿ ತಾನು ಕೆಲಸ ಮಾಡುತ್ತಿದ್ದ ಕೋಳಿ ಅಂಗಡಿಯಲ್ಲಿ ಕೋಳಿಯನ್ನು ಸ್ವಚ್ಛಗೊಳಿಸಲು ಬಟ್ಟೆಯ ತುಂಡು ಬದಲು ರಾಷ್ಟ್ರಧ್ವಜವನ್ನು ಬಳಸಿ ಅಪಮಾನ ಮಾಡುತ್ತಿರುವುದು ಕಂಡುಬಂದಿದೆ ಎಂದು ಹೇಳಿದರು. ದೂರಿನ ಆಧಾರದ ಮೇಲೆ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದು ರಾಷ್ಟ್ರದ ಗೌರವಕ್ಕೆ ಅವಮಾನ ತಡೆ ಕಾಯಿದೆ, 1971 ರ ಸೆಕ್ಷನ್ 2 ರ ಅಡಿಯಲ್ಲಿ ಅವರನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವ್ಯಕ್ತಿಯನ್ನು ಗುರುವಾರ ಬಂಧಿಸಲಾಗಿದ್ದು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಅಥವಾ ಯಾವುದೇ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಸುಡುವುದು, ವಿರೂಪಗೊಳಿಸುವುದು, ಅಪವಿತ್ರಗೊಳಿಸುವುದು, ನಾಶಪಡಿಸುವುದು ಅಥವಾ ತುಳಿಯುವುದು ಮೊದಲಾದ ಕೃತ್ಯದ ಆರೋಪದಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆಯ ಸೆಕ್ಷನ್ 2 ರ ಅಡಿಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ನ್ಯಾಯಾಧೀಶರ ನೇಮಕಾತಿ ವ್ಯವಸ್ಥೆ ವಿವಾದ: ಕೊಲಿಜಿಯಂ ಮೈಂಡ್ ಗೇಮ್ ಎಂದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು

ತಪ್ಪಿತಸ್ಥರೆಂದು ಸಾಬೀತಾದರೆ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.