ಕೇಂದ್ರ-ರೈತರ ಒಕ್ಕೂಟದ ಮಾತುಕತೆ ವಿಫಲವಾಗಿದ್ದಕ್ಕೆ ಭಗವಂತ್ ಮಾನ್ ಕಾರಣ: ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನೀಲ್ ಜಾಖರ್

|

Updated on: Feb 21, 2024 | 1:48 PM

ಭಗವಂತ್ ಮಾನ್ ರೈತರ ಪರವಾಗಿರುವ ಎಲ್ಲಾ ಜನರೊಂದಿಗಿನ ಈ ಮಾತುಕತೆಗಳು ವಿಫಲಗೊಳ್ಳಲು ಉದ್ದೇಶಿಸಿದ್ದರು. ಏಕೆಂದರೆ ಈ ಮಾತುಕತೆ ವಿಫಲವಾದರೆ ಸಿಎಂ ಮಾನ್ ಅವರು ಎಲ್ಲವನ್ನೂ ಪಡೆಯುತ್ತಾರೆ.ಹೀಗೆ ಮಾಡಿದಾಗ ಅವರಿಗೆ (ಮಾನ್ ) ಕೇಂದ್ರ ಸರ್ಕಾರವನ್ನು ಕೆಟ್ಟದಾಗಿ ತೋರಿಸಲು ಸಾಧ್ಯವಾಗುತ್ತದೆ. ಈ ಮೂಲಕ ಆರಂಭದಲ್ಲಿ ಚಂಡೀಗಢಕ್ಕೆ ಮೆರವಣಿಗೆ ಮಾಡಲು ಬಯಸಿದ್ದ ರೈತರನ್ನು ದೆಹಲಿಗೆ ಮರುನಿರ್ದೇಶಿಸಬಹುದು ಎಂದು ಸುನೀಲ್ ಜಾಖರ್ ದೂಷಿಸಿದ್ದಾರೆ.

ಕೇಂದ್ರ-ರೈತರ ಒಕ್ಕೂಟದ ಮಾತುಕತೆ ವಿಫಲವಾಗಿದ್ದಕ್ಕೆ ಭಗವಂತ್ ಮಾನ್ ಕಾರಣ: ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನೀಲ್ ಜಾಖರ್
ಸುನೀಲ್ ಜಾಖರ್
Follow us on

ಚಂಡೀಗಢ, ಫೆಬ್ರವರಿ 21 : ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಮಾತುಕತೆ ವಿಫಲವಾಗಿರುವುದಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಕಾರಣ ಎಂದು ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನೀಲ್ ಜಾಖರ್ (Sunil Jakhar) ಮಂಗಳವಾರ ಹೇಳಿದ್ದಾರೆ. “ಭಗವಂತ್ ಮಾನ್  ರೈತರ ಪರವಾಗಿರುವ ಎಲ್ಲಾ ಜನರೊಂದಿಗಿನ ಈ ಮಾತುಕತೆಗಳು ವಿಫಲಗೊಳ್ಳಲು ಉದ್ದೇಶಿಸಿದ್ದರು. ಏಕೆಂದರೆ ಈ ಮಾತುಕತೆ ವಿಫಲವಾದರೆ ಸಿಎಂ ಮಾನ್ ಅವರು ಎಲ್ಲವನ್ನೂ ಪಡೆಯುತ್ತಾರೆ” ಎಂದು ಜಾಖರ್ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಬರೆದಿದ್ದಾರೆ.

ಹೀಗೆ ಮಾಡಿದಾಗ ಅವರಿಗೆ (ಮಾನ್ ) ಕೇಂದ್ರ ಸರ್ಕಾರವನ್ನು ಕೆಟ್ಟದಾಗಿ ತೋರಿಸಲು ಸಾಧ್ಯವಾಗುತ್ತದೆ. ಈ ಮೂಲಕ ಆರಂಭದಲ್ಲಿ ಚಂಡೀಗಢಕ್ಕೆ ಮೆರವಣಿಗೆ ಮಾಡಲು ಬಯಸಿದ್ದ ರೈತರನ್ನು ದೆಹಲಿಗೆ ಮರುನಿರ್ದೇಶಿಸಬಹುದು. ಪರಿಹಾರ ಕಂಡುಹಿಡಿಯಲು ರೈತರು ಮತ್ತು ಕೇಂದ್ರ ಸಚಿವರ ತಂಡದ ಪ್ರಾಮಾಣಿಕ ಪ್ರಯತ್ನಗಳಿಗೆ ಧಕ್ಕೆ ತರುವ ಮೂಲಕ ಮಾನ್ ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಾಖರ್ ದೂಷಿಸಿದ್ದಾರೆ.

ಜಾಖರ್ ಟ್ವೀಟ್


“ಅಂತಹ ವ್ಯಕ್ತಿಗೆ ರೈತರನ್ನು ಪ್ರತಿನಿಧಿಸಲು ಅಧಿಕಾರ ನೀಡಿದವರು ಯಾರು ಎಂದು ಪಂಜಾಬ್​​ನವರು ಚಿಂತಿಸುತ್ತಿದ್ದಾರೆ. ಅವರು ತಮ್ಮ ಸರ್ಕಾರ ರಚನೆಯಾದ ಐದು ನಿಮಿಷಗಳಲ್ಲಿ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ನೀಡುವ ಭರವಸೆಯಿಂದ ಹಿಂದೆ ಸರಿದು ಮೋಸ ಮಾಡಿದರು. ಅದೇ ರೀತಿ ಪ್ರವಾಹದಿಂದಾದ ಹಾನಿಗೆ ಪರಿಹಾರ ನೀಡದೆ ಪಂಜಾಬ್ ರೈತರನ್ನು ವಂಚಿಸಿದರು ಎಂದು ಹೇಳಿದ್ದಾರೆ.

ಬಿಜೆಪಿ ಹಿರಿಯ ನಾಯಕ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು ಈ ಬಗ್ಗೆ ಎಕ್ಸ್ ನಲ್ಲಿ ಬರೆದಿದ್ದಾರೆ. ರೈತರಿಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಪಂಜಾಬ್‌ಗೆ ಸಂಬಂಧಿಸಿದ ವ್ಯಾಪಕ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿವರವಾಗಿ ಚರ್ಚೆ ಮಾಡಿರುವುದಾಗಿ ಕ್ಯಾಪ್ಟನ್ ಅಮರಿಂದರ್ ಹೇಳಿದ್ದು, ಎಲ್ಲರ ಮನಸೂರೆಗೊಳ್ಳುವಂತೆ ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ಯಾಪ್ಟನ್ ಅಮರಿಂದರ್ ಅವರು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿರುವ ತಮ್ಮ ಪುತ್ರಿ ಜೈ ಇಂದರ್ ಕೌರ್ ಜೊತೆಗಿದ್ದರು.

ಇದನ್ನೂ ಓದಿ: Delhi Chalo March: ಎಂಎಸ್‌ಪಿ ಗ್ಯಾರಂಟಿ ಕುರಿತು ಕಾನೂನನ್ನು ಘೋಷಿಸುವಂತೆ ಪ್ರಧಾನಿ ಮೋದಿಗೆ ರೈತರ ಒತ್ತಾಯ

ಒಂದು ದಿನ ಮುಂಚಿತವಾಗಿ, ಹತ್ತಿ ಮತ್ತು ಮೆಕ್ಕೆಜೋಳವನ್ನು ಹೊರತುಪಡಿಸಿ ಮೂರು ಬೇಳೆಕಾಳುಗಳನ್ನು ಎಂಎಸ್‌ಪಿಯಲ್ಲಿ ಖರೀದಿಸುವ ಕೇಂದ್ರದ ಪ್ರಸ್ತಾಪವನ್ನು ರೈತ ಸಂಘಗಳು ತಿರಸ್ಕರಿಸಿದವು. ಕೇಂದ್ರ ಸರ್ಕಾರ ಜತೆಗಿನ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಫೆಬ್ರವರಿ 21 ರಂದು ಬೆಳಿಗ್ಗೆ 11 ಗಂಟೆಗೆ ‘ದಿಲ್ಲಿ ಚಲೋ’ ಮೆರವಣಿಗೆ ಪುನಾರಂಭವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ