ದೆಹಲಿಯಲ್ಲಿಂದು ಮೋದಿ ಜೊತೆ ಸಿಎಂ ಮೀಟಿಂಗ್‌! ಸಭೆಯ ಹಿಂದಿದೆ 3 ಟಾರ್ಗೆಟ್

|

Updated on: Sep 18, 2020 | 7:23 AM

ದೆಹಲಿ: ಸಂಪುಟ ವಿಸ್ತರಣೆಯೋ..? ಸಂಪುಟ ಪುನಾರಚನೆಯೋ..? ಆಕಾಂಕ್ಷಿಗಳ ದಂಡಂತೂ ಮಾರುದ್ದ ಸಾಲಲ್ಲಿ ನಿಂತಿದ್ದಾರೆ. ಇದೇ ಕಾರಣಕ್ಕೆ ಗೊಂದಲದಲ್ಲಿರುವ ಸಿಎಂ ಬಿಎಸ್‌ವೈ, ಹೈಕಮಾಂಡ್‌ ಭೇಟಿಗೂ ಮುನ್ನ ನಿನ್ನೆ ರಾತ್ರಿ ಕೊನೇ ಕಸರತ್ತು ಮಾಡಿದ್ರು. ರಾತ್ರಿ ದೆಹಲಿಯ ಕರ್ನಾಟಕ ಭವನದಲ್ಲಿ ಬಿ.ಎಲ್‌. ಸಂತೋಷ್‌ ಜೊತೆ ಚರ್ಚಿಸಿದ್ರು. ಬಿ.ಎಲ್‌ ಸಂತೋಷ್‌ ಜೊತೆ 45 ನಿಮಿಷ ಮಾತುಕತೆ! ದೆಹಲಿಯಲ್ಲಿ ಸಿಎಂ ವಾಸ್ತವ್ಯ ಹೂಡಿರುವ ಕರ್ನಾಟಕ ಭವನಕ್ಕೆ ಬಿಜೆಪಿ ನಾಯಕ ಬಿ.ಎಲ್. ಸಂತೋಷ್‌ ಆಗಮಿಸಿದ್ರು. ಈ ವೇಳೆ, ಯಡಿಯೂರಪ್ಪನವ್ರ ಜೊತೆಗೆ ಸುಮಾರು 45 ನಿಮಿಷ […]

ದೆಹಲಿಯಲ್ಲಿಂದು ಮೋದಿ ಜೊತೆ ಸಿಎಂ ಮೀಟಿಂಗ್‌! ಸಭೆಯ ಹಿಂದಿದೆ 3 ಟಾರ್ಗೆಟ್
Follow us on

ದೆಹಲಿ: ಸಂಪುಟ ವಿಸ್ತರಣೆಯೋ..? ಸಂಪುಟ ಪುನಾರಚನೆಯೋ..? ಆಕಾಂಕ್ಷಿಗಳ ದಂಡಂತೂ ಮಾರುದ್ದ ಸಾಲಲ್ಲಿ ನಿಂತಿದ್ದಾರೆ. ಇದೇ ಕಾರಣಕ್ಕೆ ಗೊಂದಲದಲ್ಲಿರುವ ಸಿಎಂ ಬಿಎಸ್‌ವೈ, ಹೈಕಮಾಂಡ್‌ ಭೇಟಿಗೂ ಮುನ್ನ ನಿನ್ನೆ ರಾತ್ರಿ ಕೊನೇ ಕಸರತ್ತು ಮಾಡಿದ್ರು. ರಾತ್ರಿ ದೆಹಲಿಯ ಕರ್ನಾಟಕ ಭವನದಲ್ಲಿ ಬಿ.ಎಲ್‌. ಸಂತೋಷ್‌ ಜೊತೆ ಚರ್ಚಿಸಿದ್ರು.

ಬಿ.ಎಲ್‌ ಸಂತೋಷ್‌ ಜೊತೆ 45 ನಿಮಿಷ ಮಾತುಕತೆ!
ದೆಹಲಿಯಲ್ಲಿ ಸಿಎಂ ವಾಸ್ತವ್ಯ ಹೂಡಿರುವ ಕರ್ನಾಟಕ ಭವನಕ್ಕೆ ಬಿಜೆಪಿ ನಾಯಕ ಬಿ.ಎಲ್. ಸಂತೋಷ್‌ ಆಗಮಿಸಿದ್ರು. ಈ ವೇಳೆ, ಯಡಿಯೂರಪ್ಪನವ್ರ ಜೊತೆಗೆ ಸುಮಾರು 45 ನಿಮಿಷ ಚರ್ಚೆ ನಡೆಸಿದ್ರು. ಆದ್ರೆ, ಒಳಗೆ ಏನೆಲ್ಲಾ ಚರ್ಚೆ ಆಯ್ತು ಅನ್ನೋ ಗುಟ್ಟು ಬಿಟ್ಟುಕೊಟ್ಟಿಲ್ಲ.

ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡ್ತಾರಾ ಬಿಎಸ್‌ವೈ?
ಇವತ್ತು ಬೆಳ್ಳಂಬೆಳಗ್ಗೆ 9ಗಂಟೆಗೆ ಪ್ರಧಾನಿ ಮೋದಿ ಭೇಟಿಗೆ ಸಿಎಂ ಬಿಎಸ್‌ವೈಗೆ ಸಮಯ ನಿಗದಿಯಾಗಿದೆ. ಈ ವೇಳೆ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಇದಾದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆಗೂ ಯಡಿಯೂರಪ್ಪ ಚರ್ಚಿಸಲಿದ್ದಾರೆ. ಆದ್ರೆ, ಈ ಮೀಟಿಂಗ್‌ಗಳಲ್ಲಿ ಯಾವ ವಿಷಯ ಚರ್ಚೆಯಾಗುತ್ತೆ ಅನ್ನೋ ಕುತೂಹಲವೇ ಹೆಚ್ಚಾಗಿದೆ.

ಸಂಪುಟ ವಿಸ್ತರಣೆನಾ, ಪುನರಾಚನೆನಾ..?
ಅಂದಹಾಗೆ ವರಿಷ್ಠರ ಭೇಟಿ ವೇಳೆ ಚರ್ಚೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತ್ರ ಸೀಮಿತವಾಗುವುದು ಬಹುತೇಕ ಪಕ್ಕಾ. ಯಾಕೆಂದರೆ ಈಗಿನ ಪ್ಲಾನ್ ಪ್ರಕಾರ ಯಡಿಯೂರಪ್ಪ ಭೇಟಿ ಮಾಡುತ್ತಿರುವುದು ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮಾತ್ರ. ಆದರೆ ಪ್ರಧಾನಿ ಮೋದಿ ಜೊತೆ ಸಂಪುಟ ವಿಸ್ತರಣೆ ಚರ್ಚೆ ನಡೆಯುವುದು ಅನುಮಾನ. ‌ಒಂದು ವೇಳೆ ಬಿಎಸ್​ವೈನೇ ಪ್ರಸ್ತಾಪ ಮಾಡಿದರೂ ನೀವು ನಡ್ಡಾ ಜೊತೆಯೇ ಮಾತನಾಡಿ ಎಂದು ಮೋದಿ ಹೇಳುವ ಸಾಧ್ಯತೆಯೇ ಹೆಚ್ಚು.‌ ಮತ್ತೊಂದು ಕಡೆ ನಡ್ಡಾ ಜೊತೆ ಮಾತುಕತೆ ನಡೆಸಿದರೂ ಕ್ಲಿಯರ್ ಕಟ್ ಡಿಸಿಷನ್ ಹೊರಬೀಳೋದಿಲ್ಲ. ಯಾಕೆಂದರೆ ಯಡಿಯೂರಪ್ಪ ಸಿಎಂ ಆದ ಸಂಧರ್ಭ ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ಪೂರ್ಣವಾದ ನಿರ್ಧಾರ ತೆಗೆದುಕೊಂಡಿದ್ದು, ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ.‌ ಹೀಗಾಗಿ ನಡ್ಡಾ ಕೂಡಾ ಅಮಿತ್ ಷಾ ಜೊತೆ ಚರ್ಚೆ ನಡೆಸದೇ ಯಡಿಯೂರಪ್ಪ ಅವರಿಗೆ ಸಹಮತ ವ್ಯಕ್ತಪಡಿಸುವ ಬಗ್ಗೆ ಪೂರ್ಣ ವಿಶ್ವಾಸ ಇಲ್ಲ.

ಆದ್ರೆ, ಅನಾರೋಗ್ಯಕ್ಕೆ ತುತ್ತಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರ್ರಚನೆಗೆ ಜೆ.ಪಿ. ನಡ್ಡಾ ಅವರೇ ಗ್ರೀನ್ ಸಿಗ್ನಲ್ ನೀಡಬೇಕಿದೆ. ಆದ್ರೆ, ಜೆ.ಪಿ. ನಡ್ಡಾ ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.