ಕರ್ನಾಟಕ ಭವನ ಶಿಲಾನ್ಯಾಸ: ಹೆಸರಿಲ್ಲ ಅಂತಾ ಆಕ್ರೋಶಗೊಂಡ ಕೇಂದ್ರ ಸಚಿವ ಜೋಶಿ

ಕರ್ನಾಟಕ ಭವನ ಶಿಲಾನ್ಯಾಸ: ಹೆಸರಿಲ್ಲ ಅಂತಾ ಆಕ್ರೋಶಗೊಂಡ ಕೇಂದ್ರ ಸಚಿವ ಜೋಶಿ

ದೆಹಲಿ: ಸಿಎಂ ಬಿಎಸ್ ಯಡಿಯೂರಪ್ಪ ಕರ್ನಾಟಕ ಭವನದ ಭೂಮಿ ಪೂಜೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶಗೊಂಡಿರುವ ಪ್ರಸಂಗ ನಡೆದಿದೆ. ದೆಹಲಿಯ ಚಾಣಕ್ಯ ಪುರಿಯಲ್ಲಿ ಕರ್ನಾಟಕ ಭವನದ ಭೂಮಿ ಪೂಜೆ ನೆರವೇರಿದೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜೋಶಿ ಆಕ್ರೋಶಗೊಂಡಿದ್ದಾರೆ. ಕಾರ್ಯಕ್ರಮದಿಂದ ವಾಪಸ್ ಹೋಗುವುದಾಗಿ ಕಾರು ಹತ್ತಿ ಕುಳಿತ್ರು. ನನಗೆ ಆಹ್ವಾನ ಕೊಟ್ಟಿಲ್ಲ ಎಂದು ಪ್ರಹ್ಲಾದ್ ಜೋಶಿ ಗಲಾಟೆ ಮಾಡಿದ್ರು. ಈ ವೇಳೆ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಕ್ಷಮೆ ಕೇಳಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ರು. ಪ್ರಹ್ಲಾದ್ […]

Ayesha Banu

|

Sep 18, 2020 | 9:08 AM

ದೆಹಲಿ: ಸಿಎಂ ಬಿಎಸ್ ಯಡಿಯೂರಪ್ಪ ಕರ್ನಾಟಕ ಭವನದ ಭೂಮಿ ಪೂಜೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶಗೊಂಡಿರುವ ಪ್ರಸಂಗ ನಡೆದಿದೆ.

ದೆಹಲಿಯ ಚಾಣಕ್ಯ ಪುರಿಯಲ್ಲಿ ಕರ್ನಾಟಕ ಭವನದ ಭೂಮಿ ಪೂಜೆ ನೆರವೇರಿದೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜೋಶಿ ಆಕ್ರೋಶಗೊಂಡಿದ್ದಾರೆ. ಕಾರ್ಯಕ್ರಮದಿಂದ ವಾಪಸ್ ಹೋಗುವುದಾಗಿ ಕಾರು ಹತ್ತಿ ಕುಳಿತ್ರು. ನನಗೆ ಆಹ್ವಾನ ಕೊಟ್ಟಿಲ್ಲ ಎಂದು ಪ್ರಹ್ಲಾದ್ ಜೋಶಿ ಗಲಾಟೆ ಮಾಡಿದ್ರು. ಈ ವೇಳೆ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಕ್ಷಮೆ ಕೇಳಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ರು. ಪ್ರಹ್ಲಾದ್ ಜೋಶಿ ಮನವೊಲಿಸಿದ್ರು. ಬಳಿಕ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾದ್ರು.

Follow us on

Related Stories

Most Read Stories

Click on your DTH Provider to Add TV9 Kannada