ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕೊಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ಪ್ರತಿಭಟನೆಯ ಕಾವು ಬಂಗಾಳದ ಮುಖ್ಯಮಂತ್ರಿ ಕುರ್ಚಿಯನ್ನೇ ಅಲುಗಾಡಿಸುತ್ತಿದೆ. ಇಂದು ಪ್ರತಿಭಟನಾ ನಿರತ ವೈದ್ಯರನ್ನು ಭೇಟಿಯಾಗಲು ಬಂದಿದ್ದ ಮಮತಾ ಬ್ಯಾನರ್ಜಿ, ಕೊಲೆಯಾದ ವೈದ್ಯರಿಗೆ ನ್ಯಾಯ ಕೊಡಿಸಲು ನಾನು ಸಿಎಂ ಪದವಿಯನ್ನು ತ್ಯಜಿಸಲು ಕೂಡ ಸಿದ್ಧಳಿದ್ದೇನೆ ಎಂದು ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನನ್ನ ರಾಜೀನಾಮೆಯಿಂದ ಸಾಮಾನ್ಯ ಜನರಿಗೆ ನ್ಯಾಯ ಸಿಗುತ್ತದೆ ಎಂದರೆ ನಾನು ಅದಕ್ಕೂ ಸಿದ್ಧಳಿದ್ದೇನೆ. ಆದರೆ, ಪ್ರತಿಭಟನಾನಿರತರಿಗೆ ನ್ಯಾಯ ಬೇಕಾಗಿಲ್ಲ, ಬದಲಾಗಿ ನನ್ನ ಕುರ್ಚಿಯಷ್ಟೇ ಬೇಕಾಗಿದೆ ಎಂದಿದ್ದಾರೆ.
ಪ್ರತಿಭಟನಾನಿರತ ವೈದ್ಯರನ್ನು ಭೇಟಿ ಮಾಡಲು ರಾಜ್ಯ ಸಚಿವಾಲಯದಲ್ಲಿ 2 ಗಂಟೆಗಳ ಕಾಲ ಕಾದಿದ್ದೇನೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ.
RG Kar Medical College and Hospital rape-murder case | West Bengal CM Mamata Banerjee says “I am ready to resign from the Chief Minister of West Bengal. I am not concerned about the post. I want justice, I am only concerned about justice getting served.” pic.twitter.com/tPoZnTVU3z
— ANI (@ANI) September 12, 2024
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರ್‌ಜಿ ಕರ್ ಆಸ್ಪತ್ರೆ ವೈದ್ಯರ ಕೊಲೆ ಪ್ರಕರಣದಲ್ಲಿ ಜನರಿಗೆ ಅನುಕೂಲವಾಗುವುದಾದರೆ ಮತ್ತು ನ್ಯಾಯ ಸಿಗುತ್ತದೆ ಎಂದಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಂತ್ರಸ್ತೆಯ ಕುಟುಂಬಕ್ಕೆ ನಾನು ಎಂದೂ ಹಣ ನೀಡಿಲ್ಲ, ಇದು ಅಪಪ್ರಚಾರ: ಮಮತಾ ಬ್ಯಾನರ್ಜಿ
“ಆರ್‌ಜಿ ಕರ್ ಆಸ್ಪತ್ರೆಯ ಬಿಕ್ಕಟ್ಟಿಗೆ ಇಂದು ಅಂತ್ಯವನ್ನು ನಿರೀಕ್ಷಿಸಿದ್ದ ಪಶ್ಚಿಮ ಬಂಗಾಳದ ಜನರಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ. ಪ್ರತಿಭಟನಾನಿರತ ವೈದ್ಯರು ನಬಣ್ಣನ ಬಳಿಗೆ ಬಂದರು. ಆದರೆ ಸಭೆಗೆ ಕುಳಿತುಕೊಳ್ಳಲಿಲ್ಲ. ಕೆಲಸಕ್ಕೆ ಹಿಂತಿರುಗಲು ನಾನು ಅವರನ್ನು ವಿನಂತಿಸುತ್ತೇನೆ” ಎಂದು ಮಮತಾ ಬ್ಯಾನರ್ಜಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
Kolkata, West Bengal: CM Mamata Banerjee says, “I respect the movement. I’m even willing to step down for the sake of justice for the common people. But they don’t seek justice they only want power. I’m ready to quit for justice” pic.twitter.com/KoGMlQsgMe
— IANS (@ians_india) September 12, 2024
“ಕಳೆದ 3 ದಿನಗಳಲ್ಲಿ ನನ್ನ ಉತ್ತಮ ಉದ್ದೇಶ ಮತ್ತು ಪ್ರಯತ್ನಗಳ ಹೊರತಾಗಿಯೂ ವೈದ್ಯಾಧಿಕಾರಿಗಳು ಮಾತುಕತೆ ನಡೆಸಲು ನಿರಾಕರಿಸಿದ್ದರಿಂದ ನಾನು ಜನರ ಹಿತದೃಷ್ಟಿಯಿಂದ ರಾಜೀನಾಮೆ ನೀಡಲು ಸಿದ್ಧನಿದ್ದೇನೆ” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:14 pm, Thu, 12 September 24