ಸಂಗಮದ ನೀರು ಸ್ನಾನ, ಕುಡಿಯಲು ಯೋಗ್ಯ; ಮಲ ಬ್ಯಾಕ್ಟೀರಿಯಾ ಇದೆಯೆಂಬ ಆರೋಪ ತಳ್ಳಿಹಾಕಿದ ಯೋಗಿ ಆದಿತ್ಯನಾಥ್

ಮಹಾಕುಂಭದ ತ್ರಿವೇಣಿ ಸಂಗಮದ ನೀರು ಸ್ನಾನಕ್ಕೆ ಯೋಗ್ಯವಾಗಿದೆ. ಸಂಗಮದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಇದೆಯೆಂಬ ವರದಿಯ ಮೂಲಕ ಮಹಾಕುಂಭವನ್ನು ಅಪಖ್ಯಾತಿಗೊಳಿಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಸಂಗಮದ ನೀರು ಸ್ನಾನಕ್ಕೆ ಯೋಗ್ಯವಾಗಿದೆ ಎಂದು ಹೇಳಿದರು ಮತ್ತು ಮಹಾಕುಂಭವನ್ನು ಅಪಖ್ಯಾತಿಗೊಳಿಸಲು ಇದು ಪ್ರಚಾರವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸಂಗಮದ ನೀರು ಸ್ನಾನ, ಕುಡಿಯಲು ಯೋಗ್ಯ; ಮಲ ಬ್ಯಾಕ್ಟೀರಿಯಾ ಇದೆಯೆಂಬ ಆರೋಪ ತಳ್ಳಿಹಾಕಿದ ಯೋಗಿ ಆದಿತ್ಯನಾಥ್
Up Cm Yogi Adityanath

Updated on: Feb 19, 2025 | 3:42 PM

ನವದೆಹಲಿ: ಪ್ರಯಾಗರಾಜ್​ನಲ್ಲಿ ನಡೆಯುವ ಮಹಾಕುಂಭ ಮೇಳದಲ್ಲಿ ಅನೇಕ ಸ್ಥಳಗಳಲ್ಲಿ ನೀರಿನಲ್ಲಿ ಮಲ ಬ್ಯಾಕ್ಟೀರಿಯಾಗಳಿವೆ. ಈ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂಬ ವರದಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರಾಕರಿಸಿದ್ದಾರೆ. ಸಂಗಮದ ನೀರು ಸ್ನಾನ ಮಾಡಲು ಮಾತ್ರವಲ್ಲ ಕುಡಿಯಲು ಕೂಡ ಯೋಗ್ಯವಾಗಿದೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ತ್ರಿವೇಣಿ ಸಂಗಮದಲ್ಲಿನ ನೀರು ಪೌರಾಣಿಕ ಸರಸ್ವತಿಯೊಂದಿಗೆ ಗಂಗಾ ಹಾಗೂ ಯಮುನಾ ನದಿ ಸೇರುವ ಸ್ಥಳ. ಇದು “ಕುಡಿಯಲು ಕೂಡ ಯೋಗ್ಯವಾಗಿದೆ” ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ಕೋಟ್ಯಂತರ ಜನರು ಪವಿತ್ರ ಸ್ನಾನ ಮಾಡಿದ್ದಾರೆ. ಪ್ರಯಾಗರಾಜ್‌ನಲ್ಲಿ ಗಂಗಾ ಮತ್ತು ಯಮುನಾ ನದಿಗಳಲ್ಲಿ ಸಂಸ್ಕರಿಸದ ಕೊಳಚೆ ನೀರನ್ನು ಬಿಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತಾದ ವಿಚಾರಣೆಯ ಸಂದರ್ಭದಲ್ಲಿ ಮಹಾಕುಂಭ ಮೇಳದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಮಟ್ಟದ ಮಲದ ಬ್ಯಾಕ್ಟೀರಿಯಾ ಮತ್ತು ಒಟ್ಟು ಕೋಲಿಫಾರ್ಮ್ ಕಂಡುಬಂದಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಸೋಮವಾರ ಹೇಳಿತ್ತು.


ಇದನ್ನೂ ಓದಿ: ಮಹಾಕುಂಭದಲ್ಲಿ ಕುಟುಂಬಸ್ಥರೊಂದಿಗೆ ಪವಿತ್ರಸ್ನಾನ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಉತ್ತರ ಪ್ರದೇಶದ ವಿಧಾನಸಭೆ ಕಲಾಪವನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, “ಸನಾತನ ಧರ್ಮ, ಗಂಗಾ ಮಾತೆ ಮತ್ತು ಭಾರತ”ದ ವಿರುದ್ಧ ತಪ್ಪು ಮಾಹಿತಿ ಹರಡುವ ಜನರನ್ನು ಖಂಡಿಸಿದ್ದಾರೆ. “ನಾವು ಇಲ್ಲಿ ಚರ್ಚೆಯಲ್ಲಿ ಭಾಗವಹಿಸುತ್ತಿರುವಾಗ 56.25 ಕೋಟಿಗೂ ಹೆಚ್ಚು ಭಕ್ತರು ಈಗಾಗಲೇ ಪ್ರಯಾಗ್‌ರಾಜ್‌ನಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ನಾವು ಸನಾತನ ಧರ್ಮ, ಗಂಗಾ ಮಾತೆ, ಭಾರತ ಅಥವಾ ಮಹಾ ಕುಂಭದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದು ಅಥವಾ ನಕಲಿ ವೀಡಿಯೊಗಳನ್ನು ಹರಡುವುದು ಈ 56 ಕೋಟಿ ಜನರ ನಂಬಿಕೆಯೊಂದಿಗೆ ಆಟವಾಡಿದಂತೆ” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ