ವಿಮಾನದಲ್ಲಿ ಸಹಪ್ರಯಾಣಿಕ ಅಸ್ವಸ್ಥ; ತಕ್ಷಣವೇ ಚಿಕಿತ್ಸೆ ನೀಡಿ ಜೀವ ಉಳಿಸಿದ ತೆಲಂಗಾಣ ಗವರ್ನರ್

ಶುಕ್ರವಾರ ರಾತ್ರಿ ಐಪಿಎಸ್ ಅಧಿಕಾರಿ ವಿಮಾನ ಪ್ರಯಾಣದ ನಡುವೆ ಅಸ್ವಸ್ಥರಾದಾಗ ವೃತ್ತಿಯಲ್ಲಿ ವೈದ್ಯೆಯಾಗಿರುವ ಗವರ್ನರ್ ತಮಿಳಿಸೈ ಸಹಾಯಕ್ಕೆ ಧಾವಿಸಿದ್ದಾರೆ. ಮೇಡಂ ಗವರ್ನರ್ ಚೆಕ್ ಮಾಡಿದಾಗ ನನ್ನ ಹಾರ್ಟ್ ರೇಟ್ ಕೇವಲ 39 ಆಗಿತ್ತು

ವಿಮಾನದಲ್ಲಿ ಸಹಪ್ರಯಾಣಿಕ ಅಸ್ವಸ್ಥ; ತಕ್ಷಣವೇ ಚಿಕಿತ್ಸೆ ನೀಡಿ ಜೀವ ಉಳಿಸಿದ ತೆಲಂಗಾಣ ಗವರ್ನರ್
ವಿಮಾನದಲ್ಲಿ ಸಹಪ್ರಯಾಣಿಕರಿಗೆ ಚಿಕಿತ್ಸೆ ನೀಡುತ್ತಿರುವ ಗನರ್ನರ್
Edited By:

Updated on: Jul 24, 2022 | 3:36 PM

ಅಮರಾವತಿ: ದೆಹಲಿಯಿಂದ ಹೈದರಾಬಾದ್​​ಗೆ ಹೋಗುತ್ತಿದ್ದ ಇಂಡಿಗೊ ವಿಮಾನದಲ್ಲಿ ಐಪಿಎಸ್ ಶ್ರೇಣಿಯ ಎಡಿಜಿಪಿ ಅಸ್ವಸ್ಥರಾದಾಗ ಅದೇ ವಿಮಾನದಲ್ಲಿದ್ದ ತೆಲಂಗಾಣ ಗವರ್ನರ್ (Telangana Governor) ತಮಿಳಿಸೈ ಸೌಂದರರಾಜನ್ (Tamilisai Soundararajan) ತಕ್ಷಣವೇ ಚಿಕಿತ್ಸೆ ನೀಡಿ ಆ ಅಧಿಕಾರಿಯ ಪ್ರಾಣ ಉಳಿಸಿದ್ದಾರೆ.  1994ರ ಐಪಿಎಸ್ ಅಧಿಕಾರಿಯಾಗಿರುವ ಕೃಪಾನಂದ ತ್ರಿಪಾಠಿ ಉಜೇಲಾ ಅವರ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಹೈದರಾಬಾದ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇಡಂ ಗವರ್ನರ್ ನನ್ನ ಜೀವ ಉಳಿಸಿದರು. ಅಮ್ಮನಂತೆ ಅವರು ನನಗೆ ಸಹಾಯ ಮಾಡಿದರು. ಇಲ್ಲದೇ ಇರುತ್ತಿದ್ದರೆ ನಾನು ಆಸ್ಪತ್ರೆಗೂ ತಲುಪುತ್ತಿರಲಿಲ್ಲ ಎಂದು ಹೈದರಾಬಾದ್ ನಿಂದ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಉಜೇಲಾ ಹೇಳಿದ್ದಾರೆ. ಆಂಧ್ರಪ್ರದೇಶ ಕೇಡರ್​​ನ ಉಜೇಲಾ ಅವರು ರಸ್ತೆ ಸುರಕ್ಷಾ ವಿಭಾಗದಲ್ಲಿ ಹೆಚ್ಚುವರಿ ಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶುಕ್ರವಾರ ರಾತ್ರಿ ಐಪಿಎಸ್ ಅಧಿಕಾರಿ ವಿಮಾನ ಪ್ರಯಾಣದ ನಡುವೆ ಅಸ್ವಸ್ಥರಾದಾಗ ವೃತ್ತಿಯಲ್ಲಿ ವೈದ್ಯೆಯಾಗಿರುವ ಗವರ್ನರ್ ತಮಿಳಿಸೈ ಸಹಾಯಕ್ಕೆ ಧಾವಿಸಿದ್ದಾರೆ. ಮೇಡಂ ಗವರ್ನರ್ ಚೆಕ್ ಮಾಡಿದಾಗ ನನ್ನ ಹಾರ್ಟ್ ರೇಟ್ ಕೇವಲ 39 ಆಗಿತ್ತು. ಮುಂದಕ್ಕೆ ಬಾಗುವಂತೆ ಅವರು ನನಗೆ ಸಲಹೆ ನೀಡಿ, ಆರಾಮವಾಗುವಂತೆ ಅವರು ಮಾಡಿದರು. ಈ ಮೂಲಕ ನನ್ನ ಉಸಿರಾಟ ಸರಿಯಾಯಿತು ಎಂದು ಉಜೇಲಾ ಹೇಳಿದ್ದಾರೆ.


ಹೈದರಾಬಾದ್ ನಲ್ಲಿ ವಿಮಾನ ಲ್ಯಾಂಡ್ ಆದ ಕೂಡಲೇ ಆಸ್ಪತ್ರೆ ದಾಖಲಾಗಿದ್ದು ಅಲ್ಲಿ ಹಲವು ಪರೀಕ್ಷೆಗೊಳಪಡಿಸಲಾಗಿದೆ. ಅಧಿಕಾರಿಗೆ ಡೆಂಗ್ಯೂ ಇದ್ದು, ಅವರ ಪ್ಲೇಟ್ ಲೆಟ್ ಸಂಖ್ಯೆ 14,000ಕ್ಕೆ ಇಳಿದಿತ್ತು
ಮೇಡಂ ಗವರ್ನರ್ ವಿಮಾನದಲ್ಲಿ ಇಲ್ಲದೇ ಇರುತ್ತಿದ್ದರೆ ನಾನು ಈಗ ಹೀಗೆ ಇರುತ್ತಿರಲಿಲ್ಲ. ಅವರು ನಮಗೆ ಹೊಸ ಬದುಕನ್ನು ಕೊಟ್ಟರಕು ಎಂದು ತಮಿಳಿಸೈ ಅವರಿಗೆ ಧನ್ಯವಾದ ಸಲ್ಲಿಸಿದ ಉಜೇಲಾ ಹೇಳಿದ್ದಾರೆ.