5 ರೂಪಾಯಿಯ ಪೇಪರ್​ ಲೋಟಕ್ಕಾಗಿ 11 ಸಾವಿರ ರೂ. ದಂಡ ತೆತ್ತ ಬರಿಸ್ಟಾ ಕಾಫಿ

|

Updated on: Dec 26, 2023 | 3:58 PM

ಬರಿಸ್ಟಾ ಕಾಫಿ ಕಂಪನಿಯು 5 ರೂ. ಪೇಪರ್​ ಲೋಟಕ್ಕಾಗಿ 11 ಸಾವಿರ ರೂ. ದಂಡ ತೆತ್ತಿರುವ ಘಟನೆ ವರದಿಯಾಗಿದೆ. ಮೊಹಾಲಿಯ ಪ್ಯಾನ್ಸಿ ಸಿಂಗ್ ಸೋನಿ 2020ರ ಡಿಸೆಂಬರ್ 18ರಂದು ಚಂಡೀಗಢದಲ್ಲಿ ಬರಿಸ್ಟಾ ಕಾಫಿ ಅಂಗಡಿಗೆ ಹೋಗಿದ್ದರು.

5 ರೂಪಾಯಿಯ ಪೇಪರ್​ ಲೋಟಕ್ಕಾಗಿ 11 ಸಾವಿರ ರೂ. ದಂಡ ತೆತ್ತ ಬರಿಸ್ಟಾ ಕಾಫಿ
ಕಾಫಿ
Follow us on

ಬರಿಸ್ಟಾ ಕಾಫಿ ಕಂಪನಿಯು 5 ರೂಪಾಯಿ ಪೇಪರ್​ ಲೋಟಕ್ಕಾಗಿ 11 ಸಾವಿರ ರೂ. ದಂಡ ತೆತ್ತಿರುವ ಘಟನೆ ವರದಿಯಾಗಿದೆ. ಮೊಹಾಲಿಯ ಪ್ಯಾನ್ಸಿ ಸಿಂಗ್ ಸೋನಿ 2020ರ ಡಿಸೆಂಬರ್ 18ರಂದು ಚಂಡೀಗಢದಲ್ಲಿ ಬರಿಸ್ಟಾ ಕಾಫಿ ಅಂಗಡಿಗೆ ಹೋಗಿದ್ದರು.

ಬಿಸಿ ಚಾಕೊಲೇಟ್​ಗೆ ಆರ್ಡರ್ ಮಾಡಿ 230 ರೂ. ಬಿಲ್​ ಪಡೆದಿದ್ದಾರೆ. ಬಿಲ್​ನಲ್ಲಿ ಅಂಗಡಿಯು ಬರಿಸ್ಟಾ ಎಂದು ಬರೆದಿರುವ ಕಾಗದದ ಕಪ್​ಗೆ 5 ರೂ. ವಿಧಿಸಿದ್ದರು. ಪೇಪರ್​ ಲೋಟಕ್ಕೆ 5 ರೂ. ವಿಧಿಸಿದ್ದಕ್ಕೆ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ದೂರುದಾರರು ಪ್ರತಿಭಟನೆ ನಡೆಸಿದ್ದಾರೆ.

ಆದರೆ ಅಂಗಡಿಯವರು ಆ ಕಡೆ ಕಿಂಚಿತ್ತೂ ಗಮನಹರಿಸಿಲ್ಲ. ಹೀಗಾಗಿ ಅವರು ಚಂಡೀಗಢದ ಗ್ರಾಹಕ ಆಯೋಗದಲ್ಲಿ ದೂರು ದಾಖಲಿಸಿದ್ದರು. ಬರಿಸ್ಟಾ ಕಾಫಿ ಕಂಪನಿ ಲಿಮಿಟೆಡ್ ಪ್ಯಾಕೇಜಿಂಗ್ ಶುಲ್ಕಗಳನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಹಣವನ್ನು ಸುಲಿಗೆ ಮಾಡುವ ಉದ್ದೇಶದಿಂದ ಸುಳ್ಳು ಹೇಳಿ ಒಳಸಂಚು ನಡೆಸುತ್ತಿದ್ದಾರೆ ಎಂದು ವಾದಿಸಿದ್ದಾರೆ. ಬಡರೋಗಿಗಳ ನಿಧಿಗೆ 10 ಸಾವಿರ ರೂ ಹಾಗೂ ದೂರುದಾರರಿಗೆ 1 ಸಾವಿರ ರೂ. ಪಾವತಿಸಲು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ