ಕಾರಿನಲ್ಲಿ ಮಹಿಳೆ ಕಿರುಚಾಟ, ನಡೆದಿತ್ತಾ ಅಪಹರಣ, ಪೊಲೀಸರು ಹೇಳಿದ್ದೇನು?

ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಹಿಳೆಯ ಅಪಹರಣ(Kidnap) ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಆದರೆ ಅದು ಅಪಹರಣವಲ್ಲ  ಪತಿ, ಪತ್ನಿ ನಡುವೆ ನಡೆದ ಎಂಬುದು ತಿಳಿದುಬಂದಿದೆ.  ರಾತ್ರಿ ಕಾರಿನಲ್ಲಿ ಮಹಿಳೆಯೊಬ್ಬರು ಕಿರುಚಾಟ ಶಬ್ದ ಕೇಳಿ, ಕೂಡಲೇ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಯಾವುದೇ ಮಹಿಳೆಯನ್ನು ಅಪಹರಿಸಲಾಗಿದೆ ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಬಿಳಿ ಬಣ್ಣದ ಕಾರೊಂದು ವಸತಿ ಪ್ರದೇಶದಲ್ಲಿ ಸ್ವಲ್ಪ ಹೊತ್ತು ನಿಂತಿರುವುದನ್ನು ಹಾಗೂ ಮಹಿಳೆಯ ಕಿರುಚಾಟ ಕೇಳಿದ ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಹೊರಟು ಹೋಗುವುದನ್ನು ಕಾಣಬಹುದು

ಕಾರಿನಲ್ಲಿ ಮಹಿಳೆ ಕಿರುಚಾಟ, ನಡೆದಿತ್ತಾ ಅಪಹರಣ, ಪೊಲೀಸರು ಹೇಳಿದ್ದೇನು?
ಕಾರು

Updated on: Nov 10, 2025 | 9:45 AM

ಚೆನ್ನೈ, ನವೆಂಬರ್ 10: ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಹಿಳೆಯ ಅಪಹರಣ(Kidnap) ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಆದರೆ ಅದು ಅಪಹರಣವಲ್ಲ  ಪತಿ, ಪತ್ನಿ ನಡುವೆ ನಡೆದ ಎಂಬುದು ತಿಳಿದುಬಂದಿದೆ.  ರಾತ್ರಿ ಕಾರಿನಲ್ಲಿ ಮಹಿಳೆಯೊಬ್ಬರು ಕಿರುಚಾಟ ಶಬ್ದ ಕೇಳಿ, ಕೂಡಲೇ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಯಾವುದೇ ಮಹಿಳೆಯನ್ನು ಅಪಹರಿಸಲಾಗಿದೆ ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಬಿಳಿ ಬಣ್ಣದ ಕಾರೊಂದು ವಸತಿ ಪ್ರದೇಶದಲ್ಲಿ ಸ್ವಲ್ಪ ಹೊತ್ತು ನಿಂತಿರುವುದನ್ನು ಹಾಗೂ ಮಹಿಳೆಯ ಕಿರುಚಾಟ ಕೇಳಿದ ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಹೊರಟು ಹೋಗುವುದನ್ನು ಕಾಣಬಹುದು.

ಸುಲೂರು ಪ್ರದೇಶದ ಬೇಕರಿಯ ಬಳಿ ಕಾರು ಭಾಗಶಃ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಮಹಿಳೆಯ ಯಾವುದೇ ಸುಳಿವು ಕಂಡುಬಂದಿರಲಿಲ್ಲ ಎಂದು ಕೊಯಮತ್ತೂರು ಪೊಲೀಸ್ ಆಯುಕ್ತ ಎ ಸರವಣ ಸುಂದರ್ ಶುಕ್ರವಾರ ಎನ್‌ಡಿಟಿವಿಗೆ ತಿಳಿಸಿದ್ದಾರೆ.ಕಾರಿನ ನಂಬರ್ ಪ್ಲೇಟ್ ಕೂಡ ಕಾಣಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಕ್ತಿಯೊಬ್ಬರು ಕಾಣೆಯಾದ ಬಗ್ಗೆ ಪೊಲೀಸರಿಗೆ ಯಾವುದೇ ದೂರು ಅಥವಾ ಕರೆ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿಜವಾಗಿಯೂ ನಡೆದಿದ್ದೇನು?

ಕೊಯಮತ್ತೂರು ಜಿಲ್ಲೆಯ ಇರುಗೂರು ಬಳಿಯ ಪವರ್ ಹೌಸ್‌ನಲ್ಲಿ ಅಪರಿಚಿತ ಮಹಿಳೆಯನ್ನು ಕಾರಿನಲ್ಲಿ ಅಪಹರಿಸಲಾಗಿದೆ ಎಂದು ಹೇಳಲಾಗಿತ್ತು. ಒಂಡಿಪುದೂರಿನ ವಸತಿ ಪ್ರದೇಶದ 51 ವರ್ಷದ ವ್ಯಕ್ತಿ ಮತ್ತು ಅವರ 48 ವರ್ಷದ ಪತ್ನಿಯ ನಡುವಿನ ಜಗಳ ಇದಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ದಂಪತಿಗಳು ಮುಂದಿನ ಸೀಟಿನಲ್ಲಿ ಕುಳಿತಿದ್ದರು ಮತ್ತು ಅವರ 15 ವರ್ಷದ ಮಗ ಹಿಂದೆ ಕುಳಿತಿದ್ದರು.

ಮತ್ತಷ್ಟು ಓದಿ: 5 ವರ್ಷ ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಮಕ್ಕಳು ನಾಪತ್ತೆ! ಹೆಣ್ಣು ಮಕ್ಕಳೇ ಹೆಚ್ಚು

ಪೊಲೀಸರ ಪ್ರಕಾರ, ಕುಟುಂಬವು ಗುರುವಾರ ತಡರಾತ್ರಿ ಆಹಾರ ಸಾಮಗ್ರಿಗಳನ್ನು ಖರೀದಿಸಲು ಸುಲೂರಿಗೆ ಹೋಗಿತ್ತು. ಹಿಂತಿರುಗುವಾಗ ದಂಪತಿಗಳು ಜಗಳವಾಡಿದರು, ನಂತರ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಲಾಯಿತು. ಮಹಿಳೆಯನ್ನು ಪತಿ ತಡೆದಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಮಹಿಳೆಯ ಅಪಹರಣ ಎಂದು ಪ್ರಸಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಪೊಲೀಸರು ಕುಟುಂಬದ ಕಾರನ್ನು ಪತ್ತೆಹಚ್ಚಿ, ಇದು ಕೌಟುಂಬಿಕ ಕಲಹ ಎಂದು ಮಹಿಳೆ ಹೇಳಿದ್ದರ ವೀಡಿಯೊ ಹೇಳಿಕೆಯನ್ನು ದಾಖಲಿಸಿಕೊಂಡರು. ದಾರಿಹೋಕ ಮಹಿಳೆಯೊಬ್ಬರು ಇದು ಅಪಹರಣದ ಪ್ರಕರಣ ಎಂದು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದರು.

ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂದೆ ಕಾರಿನಲ್ಲಿ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಕೆಲವೇ ದಿನಗಳ ನಂತರ ಈ ಘಟನೆ ನಡೆದಿದೆ. ಈ ಘಟನೆಯು ಆಕ್ರೋಶಕ್ಕೆ ಕಾರಣವಾಗಿದ್ದು, ಮೂವರು ಶಂಕಿತರ ಬಂಧನಕ್ಕೆ ಕಾರಣವಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ