ಕೊಯಮತ್ತೂರು: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನಗೆ ಸೂಪರ್ ಪವರ್ ಇದೆ ಮತ್ತು ತಾನು ಹಾರಬಲ್ಲೆ ಎಂದು ನಂಬಿಕೊಂಡು ಹಾಸ್ಟೆಲ್‌ನ ನಾಲ್ಕನೇ ಮಹಡಿಯಿಂದ ಜಿಗಿದ ಘಟನೆ ಕೊಯಮತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಬಿಟೆಕ್ ವಿದ್ಯಾರ್ಥಿ ತನಗೆ ಸೂಪರ್ ಪವರ್ ಇದೆ, ತಾನು ಹಾರಬಲ್ಲೆ ಎಂದು ನಂಬಿಕೊಂಡು ಹಾಸ್ಟೆಲ್‌ನಿಂದ ಜಿಗಿದಿದ್ದಾನೆ.
ಕೊಯಮತ್ತೂರಿನ ಮೈಲೇರಿಪಾಳ್ಯಂನಲ್ಲಿ ವರದಿಯಾದ ಆಘಾತಕಾರಿ ಘಟನೆಯಲ್ಲಿ, 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ತನ್ನ ಹಾಸ್ಟೆಲ್‌ನ ನಾಲ್ಕನೇ ಮಹಡಿಯಿಂದ ಜಿಗಿದಿದ್ದಾನೆ. ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಳ್ಳಲು ಈ ರೀತಿ ಮಾಡಿಲ್ಲ. ಬದಲಾಗಿ ಅವನು ತನ್ನಲ್ಲಿ ಸೂಪರ್ ಪವರ್ ಇದೆ, ನಾನು ಆಕಾಶದಲ್ಲಿ ಹಾರಬಲ್ಲೆ ಎಂದು ಬಲವಾಗಿ ನಂಬಿದ್ದ. ಇದರಿಂದ ಆತ ಕೆಳಗೆ ಹಾರಿದ್ದಾನೆ ಎನ್ನಲಾಗಿದೆ.
A 19-year-old https://t.co/AkKdax9j1e student in #Coimbatore jumped from the 4th floor of his college hostel, believing he had superpowers that would protect him. He suffered fractures in his arms, legs, and a head injury, and was admitted to a private hospital.
The student,… pic.twitter.com/jdRCOyhNY5
— South First (@TheSouthfirst) October 29, 2024
ಇದನ್ನೂ ಓದಿ: ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ಕೊಯಮತ್ತೂರು ಬಳಿಯ ಖಾಸಗಿ ಕಾಲೇಜೊಂದರ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಎ. ಪ್ರಭು ಅಕ್ಟೋಬರ್ 28ರಂದು ತನ್ನ ಹಾಸ್ಟೆಲ್ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿರುವ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಮೆಕ್ಕೂರು ಗ್ರಾಮದ ಪ್ರಭು ಮೂರನೇ ವರ್ಷದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸ್ ವಿದ್ಯಾರ್ಥಿಯಾಗಿದ್ದಾನೆ. ಅವನ ಕಾಲು, ತೋಳುಗಳಿಗೆ ತೀವ್ರ ಗಾಯಗಳಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ