ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರ ಪೋಸ್ಟರ್ ಹರಿದಿದ್ದಕ್ಕೆ ನಾಯಿಯ ವಿರುದ್ಧ ದೂರು ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತೆಲುಗು ದೇಶಂ ಬೆಂಬಲಿಗರಾದ ದಾಸರಿ ಉದಯಶ್ರೀ ಅವರು ವಿಜಯವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಡಿಯೋದಲ್ಲಿ ನಾಯಿಯೊಂದು ಬೀದಿಯ ಗೋಡೆಯ ಮೇಲೆ ಅಂಟಿಸಲಾಗಿದ್ದ ಪೋಸ್ಟರ್ ಅನ್ನು ಕಿತ್ತು ಹಾಕಿದ್ದನ್ನು ಕಾಣಬಹುದು.
ಇದು ಸಿಎಂ ಜಗನ್ಮೋಹನ್ ರೆಡ್ಡಿ ಅವರಿಗೆ ಮಾಡಿರುವ ಅವಮಾನವಾಗಿದೆ, ನಾಯಿಗೆ ಪ್ರಚೋದನೆ ನೀಡಿದವರು ಹಾಗೂ ಈ ವೈರಲ್ ಆಗಿರುವ ವಿಡಿಯೋ ತುಣಕನ್ನು ಪ್ರಸಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉದಯಶ್ರೀ ತಿಳಿಸಿದ್ದಾರೆ.
ಮತ್ತಷ್ಟು ಓದಿ: Andhra Capital- ವಿಶಾಖಪಟ್ಟಣಂ ಆಂಧ್ರ ರಾಜಧಾನಿಯಾಗಲಿದೆ: ಸಿಎಂ ಜಗನ್ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ ಬಗ್ಗೆ ನಮಗೆ ಗೌರವವಿದೆ ಯಾವುದೋ ನಾಯಿ ಅವರಿಗೆ ಅವಮಾನ ಮಾಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಪೋಸ್ಟರ್ ಮುಖ್ಯಮಂತ್ರಿಯವರ ಇತ್ತೀಚಿನ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ