ಪುಣೆ: ಆಟೋಮೊಬೈಲ್ ಸಂಸ್ಥೆಗೆ ಪೂರೈಕೆಯಾಗಿದ್ದ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ, ಕಲ್ಲುಗಳು ಪತ್ತೆ

ಪುಣೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ಪ್ರಮುಖ ಆಟೋಮೊಬೈಲ್ ಸಂಸ್ಥೆಗೆ ಪೂರೈಕೆಯಾಗಿದ್ದ ಸಮೋಸಾಗಳಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳು ಪತ್ತೆಯಾಗಿವೆ. ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಮೋಸಾಗಳನ್ನು ಸರಬರಾಜು ಮಾಡಿದವರು ಹಾಗೂ ಉಪಗುತ್ತಿಗೆ ಪಡೆದವರು, ಇಬ್ಬರು ಕಾರ್ಮಿಕರು ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪುಣೆ: ಆಟೋಮೊಬೈಲ್ ಸಂಸ್ಥೆಗೆ ಪೂರೈಕೆಯಾಗಿದ್ದ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ, ಕಲ್ಲುಗಳು ಪತ್ತೆ
ಸಮೋಸಾ
Follow us
ನಯನಾ ರಾಜೀವ್
|

Updated on: Apr 09, 2024 | 11:04 AM

ಪುಣೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ಪ್ರಮುಖ ಆಟೋಮೊಬೈಲ್ ಸಂಸ್ಥೆಗೆ ಪೂರೈಕೆಯಾಗಿದ್ದ ಸಮೋಸಾಗಳಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳು ಪತ್ತೆಯಾಗಿವೆ. ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಮೋಸಾಗಳನ್ನು ಸರಬರಾಜು ಮಾಡಿದವರು ಹಾಗೂ ಉಪಗುತ್ತಿಗೆ ಪಡೆದವರು, ಇಬ್ಬರು ಕಾರ್ಮಿಕರು ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕ್ಯಾಟಲಿಸ್ಟ್ ಸರ್ವೀಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಆಟೋಮೊಬೈಲ್ ಸಂಸ್ಥೆಯ ಕ್ಯಾಂಟೀನ್‌ಗೆ ಆಹಾರ ಪದಾರ್ಥಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಸಂಸ್ಥೆಯು ಮನೋಹರ್ ಎಂಟರ್‌ಪ್ರೈಸಸ್ ಎಂಬ ಮತ್ತೊಂದು ಉಪಗುತ್ತಿಗೆ ಸಂಸ್ಥೆಗೆ ಸಮೋಸಾ ನೀಡುವ ಗುತ್ತಿಗೆಯನ್ನು ನೀಡಿತ್ತು.

ಶನಿವಾರ, ಆಟೋಮೊಬೈಲ್ ಸಂಸ್ಥೆಯ ಕೆಲವು ಉದ್ಯೋಗಿಗಳಿಗೆ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ ಸಿಕ್ಕಿತ್ತು. ಘಟನೆಯ ಕುರಿತು ಮನೋಹರ್ ಎಂಟರ್‌ಪ್ರೈಸಸ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಖ್ ಎಂದು ಗುರುತಿಸಲಾದ ಇಬ್ಬರು ಕಾರ್ಮಿಕರು ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳನ್ನು ಸಮೋಸಾಗಳಲ್ಲಿ ತುಂಬಿದ್ದರು ಎಂಬುದು ತಿಳಿದುಬಂದಿದೆ.

ಮತ್ತಷ್ಟು ಓದಿ: ಕಾಂಡೋಮ್ ಕಂಪನಿಯಿಂದ ಹಿಡಿದು ಡೈಮಂಡ್ ಪವರ್​ವರೆಗೆ 6 ತಿಂಗಳಲ್ಲಿ ಭರ್ಜರಿ ಲಾಭ ತಂದ 7 ಮಲ್ಟಿಬ್ಯಾಗರ್ ಸ್ಟಾಕ್​ಗಳು

ಇಬ್ಬರು ಆರೋಪಿಗಳು ತಾವು ಎಸ್‌ಆರ್‌ಎ ಎಂಟರ್‌ಪ್ರೈಸಸ್‌ನ ಉದ್ಯೋಗಿಗಳೆಂದು ನಮಗೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳನ್ನು ರಹೀಮ್ ಶೇಖ್, ಅಜರ್ ಶೇಖ್ ಮತ್ತು ಮಜರ್ ಶೇಖ್ ಎಂದು ಗುರುತಿಸಲಾಗಿದೆ, ಮನೋಹರ್ ಎಂಟರ್‌ಪ್ರೈಸಸ್‌ನ ಮಾರುಕಟ್ಟೆ ಖ್ಯಾತಿಗೆ ಮಸಿ ಬಳಿಯಲು ಬಯಸಿದ್ದರು ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ