Congress Files: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಹಗರಣಗಳ ಕುರಿತು ಬಿಜೆಪಿಯಿಂದ ‘ಕಾಂಗ್ರೆಸ್ ಫೈಲ್ಸ್’ ಸರಣಿ ಶುರು

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಮತ್ತು ಹಗರಣಗಳ ಬಗ್ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ವಿರುದ್ಧ  ಕಾಂಗ್ರೆಸ್ ಫೈಲ್ಸ್ ಎಂಬ ಸರಣಿಯನ್ನು ಪ್ರಾರಂಭಿಸಿದೆ.

Congress Files: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಹಗರಣಗಳ ಕುರಿತು ಬಿಜೆಪಿಯಿಂದ ‘ಕಾಂಗ್ರೆಸ್ ಫೈಲ್ಸ್’ ಸರಣಿ ಶುರು
ಕಾಂಗ್ರೆಸ್ ಫೈಲ್ಸ್

Updated on: Apr 02, 2023 | 3:05 PM

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಮತ್ತು ಹಗರಣಗಳ ಬಗ್ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ವಿರುದ್ಧ  ಕಾಂಗ್ರೆಸ್ ಫೈಲ್ಸ್ ಎಂಬ ಸರಣಿಯನ್ನು ಪ್ರಾರಂಭಿಸಿದೆ, ಅದರ ಮೊದಲ ಸಂಚಿಕೆಯಲ್ಲಿ ಕಾಂಗ್ರೆಸ್ ಆಡಳಿತದ ಭ್ರಷ್ಟಾಚಾರ ಮತ್ತು ಹಗರಣಗಳ ಬಗ್ಗೆ ಉಲ್ಲೇಖಿಸಲಾಗಿದೆ. 2ಜಿ ಪ್ರಕರಣ, ಕಲ್ಲಿದ್ದಲು ಹಗರಣ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಸಾಲು ಸೇರಿದಂತೆ ವಿವಿಧ ಹಗರಣಗಳಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿ “ಕಾಂಗ್ರೆಸ್ ಫೈಲ್ಸ್” ಎಂಬ ವಿಡಿಯೋ ಸರಣಿಯ ಮೊದಲ ಸಂಚಿಕೆಯನ್ನು ಪಕ್ಷವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.

ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರಿರುವ ಮೂರು ನಿಮಿಷಗಳ ವೀಡಿಯೊ ಕ್ಲಿಪ್, ಯುಪಿಎ ಅವಧಿಯಲ್ಲಿ ನಡೆದಿದೆ ಎನ್ನಲಾದ 48,20,69,00,00,000 ರೂ. ಮೌಲ್ಯದ ಹಗರಣಗಳನ್ನು ಪಟ್ಟಿಮಾಡಿದೆ .

ಈ ಮೊತ್ತದಲ್ಲಿ 24 INS ವಿಕ್ರಾಂತ್ , 300 ರಫೇಲ್ ವಿಮಾನಗಳು ಮತ್ತು 1000 ಮಂಗಳಯಾನ ಯೋಜನೆಗಳನ್ನು ಪ್ರಾರಂಭಿಸಬಹುದು ಎಂದು ಹೇಳಲಾಗಿದೆ. ಕಾಂಗ್ರೆಸ್‌ನ ಹಗರಣ, ಭ್ರಷ್ಟಾಚಾರಕ್ಕೆ ದೇಶ ಬೆಲೆ ತೆರಬೇಕಾಗಿದ್ದು, ಕಾಂಗ್ರೆಸ್‌ನಿಂದಾಗಿ ನಮ್ಮ ದೇಶ ಪ್ರಗತಿ ಮತ್ತು ಅಭಿವೃದ್ಧಿ ಪಥದಲ್ಲಿ ಹಿಂದೆ ಬಿದ್ದಿದೆ ಎಂದು ಬಿಜೆಪಿ ಹೇಳಿದೆ.

ಕಳೆದ 10 ವರ್ಷಗಳ ಕಾಂಗ್ರೆಸ್ ಸರ್ಕಾರದ ಅವಧಿಯನ್ನು ಉಲ್ಲೇಖಿಸಿದ ಬಿಜೆಪಿ, ಅಗಸ್ಟಾ ವೆಸ್ಟ್‌ಲ್ಯಾಂಡ್ ಸಿಇಒ ಲಂಚ ನೀಡಿದ್ದಾರೆ ಎಂದು ಆರೋಪ, ವಿವಿಐಪಿ ಹೆಲಿಕಾಪ್ಟರ್ ಖರೀದಿಯಲ್ಲಿ 350 ಕೋಟಿ ಲಂಚ, ಒಂದು ಲಕ್ಷದ 86 ಸಾವಿರ ಕೋಟಿ ಕಲ್ಲಿದ್ದಲು ಹಗರಣ, ಒಂದು ಲಕ್ಷದ 86 ಸಾವಿರ ಕೋಟಿ ಹಗರಣವನ್ನು ಉಲ್ಲೇಖಿಸಿ, ಸುಮಾರು 10 ಸಾವಿರ ಕೋಟಿಯ ಎಂಎನ್‌ಆರ್‌ಇಜಿಎ ಹಗರಣ, 70 ಸಾವಿರ ಕೋಟಿ ಕಾಮನ್‌ವೆಲ್ತ್ ಹಗರಣ ಮತ್ತು ಇಟಲಿಯಿಂದ ಹೆಲಿಕಾಪ್ಟರ್ ಡೀಲ್‌ನಲ್ಲಿ 362 ಕೋಟಿ ಲಂಚ ಪಡೆದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮತ್ತು ಹಗರಣಗಳ ಸರ್ಕಾರವಾಗಿದೆ ಎಂದು ಹೇಳಿದರು.

ವಿಡಿಯೋದ ಕೊನೆಯಲ್ಲಿ, ಇದು ಕೇವಲ ಕಾಂಗ್ರೆಸ್ ಹಗರಣಗಳ ಟ್ರೇಲರ್​ ಅಷ್ಟೇ, ಚಿತ್ರ ಇನ್ನೂ ಬಾಕಿ ಇದೆ ಎಂದು ಹೇಳಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 3:04 pm, Sun, 2 April 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us