ದೆಹಲಿ ಆಗಸ್ಟ್ 05: ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ (Jagdish Tytler) ದೆಹಲಿಯ ಗುರುದ್ವಾರ ಪುಲ್ ಬಂಗಾಶ್ (Gurudwara Pul Bangash )ಬಳಿ ಸಿಖ್ಖರನ್ನು ಕೊಲ್ಲಲು ಗುಂಪನ್ನು ಪ್ರಚೋದಿಸಿದ್ದಾರೆ ಎಂದು ಕೇಂದ್ರ ತನಿಖಾ ದಳ (CBI) ತನ್ನ ಚಾರ್ಜ್ಶೀಟ್ನಲ್ಲಿ ತಿಳಿಸಿದೆ. 1984 ರ ಸಿಖ್ ದಂಗೆ ಪ್ರಕರಣದಲ್ಲಿ ಟೈಟ್ಲರ್ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಟೈಟ್ಲರ್ ಸಿಖ್ಖರನ್ನು ಕೊಲ್ಲಲು ಜನರನ್ನು ಪ್ರಚೋದಿಸಿದರು, ಇದರ ಪರಿಣಾಮವಾಗಿ 1.11.1984 ರಂದು ಜನರ ಗುಂಪು ಗುರುದ್ವಾರ ಪುಲ್ ಬಂಗಾಶ್ ಅನ್ನು ಸುಟ್ಟುಹಾಕಿತು. ಈ ವೇಳೆ ಸಿಖ್ ಸಮುದಾಯಕ್ಕೆ ಸೇರಿದ ಮೂವರ ಹತ್ಯೆಯಾಗಿದೆ ಎಂದು ಸಿಬಿಐ ಶನಿವಾರ ತಮ್ಮ ಆರೋಪಪಟ್ಟಿಯಲ್ಲಿ ಹೇಳಿದೆ. ಗುರುದ್ವಾರ ಪುಲ್ ಬಂಗಾಶ್ಗೆ ಬೆಂಕಿ ಹಚ್ಚಿ ಠಾಕೂರ್ ಸಿಂಗ್ ಮತ್ತು ಬಾದಲ್ ಸಿಂಗ್ ಎಂಬವರನ್ನು ಹತ್ಯೆ ಮಾಡಿದ್ದರು.
ಕಾಂಗ್ರೆಸ್ ನಾಯಕ ತನ್ನ ಕಾರಿನಿಂದ ಇಳಿದು ಗುಂಪನ್ನು ಪ್ರಚೋದಿಸುವುದನ್ನು ತಾನು ನೋಡಿದ್ದೇನೆ ಎಂದು ಸಾಕ್ಷಿಯೊಬ್ಬರು ಹೇಳಿರುವುದಾಗಿ ಸಿಬಿಐ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಜನರು ಅಂಗಡಿಯನ್ನು ಲೂಟಿ ಮಾಡುವುದನ್ನು ಆಕೆ ನೋಡಿದ್ದಳು. ಆದರೆ ಅವಳು ಸಾಧ್ಯವಾದಷ್ಟು ಬೇಗ ಹಿಂತಿರುಗಲು ನಿರ್ಧರಿಸಿದ್ದಳು. . ಹಿಂತಿರುಗುವಾಗ, ಗುರುದ್ವಾರ ಪುಲ್ ಬಂಗಾಶ್‌ನ ಮುಖ್ಯ ರಸ್ತೆಯಲ್ಲಿ, ಅವಳು ಬಿಳಿ ಅಂಬಾಸಿಡರ್ ಕಾರನ್ನು ನೋಡಿದಳು. ಅದರಿಂದ ಆರೋಪಿ ಜಗದೀಶ್ ಟೈಟ್ಲರ್ ಹೊರಬಂದರು. ಆರೋಪಿ ಜಗದೀಶ್ ಟೈಟ್ಲರ್ ಮೊದಲು ಸಿಖ್ಖರನ್ನು ಕೊಂದು ನಂತರ ಲೂಟಿ ಮಾಡಲು ಜನಸಮೂಹವನ್ನು ಪ್ರಚೋದಿಸಿದರು. ಇದನ್ನು ನೋಡಿದ ನಂತರ, ಅವಳು ತನ್ನ ಮನೆಗೆ ಹಿಂದಿರುಗಿದಳು. ನಂತರ ತನ್ನ ನೆರೆಹೊರೆಯವರ ಮನೆಯಲ್ಲಿ ಆಶ್ರಯ ಪಡೆದಳು. ಇದಾದ ನಂತರ ಅವಳು ಬಾದೆಲ್ ಸಿಂಗ್ ಮತ್ತು ಗೋರ್ಚರಣ್ ಸಿಂಗ್ (31.10. .1984 ರ ರಾತ್ರಿ ತನ್ನ ಮನೆಯಲ್ಲಿ ತಂಗಿದ್ದ ತನ್ನ ಗಂಡನ ಉದ್ಯೋಗಿ) ಅವರ ಶವಗಳನ್ನು ನೋಡಿದ್ದಾಳೆ. ಪಕ್ಕದ ಮನೆಯ ಮೇಲ್ಛಾವಣಿಯಿಂದ ಎಸೆದು ನಂತರ ಟೈರ್‌ಗಳ ಜೊತೆಗೆ ಮರದ ಗಾಡಿಯಲ್ಲಿ ಸಾಗಿಸಲಾಯಿತು. ನಂತರ ಈ ದೇಹಗಳನ್ನು ಟೈರ್ ಬಳಸಿ ಸುಡಲಾಯಿತು. ಗುರುದ್ವಾರ ಪುಲ್ ಬಂಗಾಶ್ ಅನ್ನು ಜನಸಮೂಹವು ಸುಲಿಗೆ ಮಾಡುವುದನ್ನು ಆಕೆ ನೋಡಿದ್ದಾಳೆ ಎಂದು ಚಾರ್ಜ್ಶೀಟ್ನಲ್ಲಿ ಹೇಳಿದೆ.
ಇದನ್ನೂ ಓದಿ: ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಕಪಿಲ್ ಮಿಶ್ರಾ ನೇಮಕ
ಜನರು ಪೆಟ್ರೋಲ್ ಡಬ್ಬಿಗಳು, ಕೋಲುಗಳು, ಕತ್ತಿಗಳು ಮತ್ತು ರಾಡ್‌ಗಳನ್ನು ಹೊತ್ತೊಯ್ಯುತ್ತಿರುವುದನ್ನು ನೋಡಿದ ಇನ್ನೊಬ್ಬ ಸಾಕ್ಷಿಯ ಹೇಳಿಕೆಯೂ ಚಾರ್ಜ್ಶೀಟ್ನಲ್ಲಿದೆ. ಸಂಸದರಾಗಿದ್ದ ಜಗದೀಶ್ ಟೈಟ್ಲರ್ ಕೂಡ ಗುರುದ್ವಾರ ಪುಲ್ ಬಂಗಾಶ್ ಮುಂದೆ ಹಾಜರಾಗಿದ್ದರು, ಕಾಂಗ್ರೆಸ್ ನಾಯಕ ಗುರುದ್ವಾರದ ಮೇಲೆ ದಾಳಿ ಮಾಡಲು ಗುಂಪನ್ನು ಪ್ರಚೋದಿಸುತ್ತಿದ್ದರು ಎಂದು ಈ ಸಾಕ್ಷಿಯೂ ಹೇಳಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ