ಪ್ರಧಾನಿ ನರೇಂದ್ರ ಮೋದಿ (Narendra Modi) ವಿದೇಶ ಪ್ರವಾಸದಿಂದ ವಾಪಸ್ ಆಗುತ್ತಿದ್ದಂತೆ, ಪ್ರಧಾನಿಯವರೇ ಭಾರತದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ನಿಮಗೆ ತಿಳಿಯಬೇಕಿತ್ತು ತಾನೇ? ಹಾಗಾದರೆ ತಿಳಿದುಕೊಳ್ಳಿ ಇಂಡಿಯಾ ಮೇ ಫಾಗ್ ಚಲ್ ರಹಾ ಹೈ ಎಂದು ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera). ಭಾರತದಲ್ಲಿ ಏನಾಗುತ್ತಿದೆ ಎಂದು ತಿಳಿಯಬೇಕಾದರೆ ಮಧ್ಯಪ್ರದೇಶದ ಚುನಾವಣಾ ಪ್ರವಾಸದ ಬದಲು ಮಣಿಪುರಕ್ಕೆ(Manipur) ಹೋಗಿ ಎಂದು ಪವನ್ ಖೇರಾ ವಿಡಿಯೊದಲ್ಲಿ ಹೇಳಿದ್ದಾರೆ.
ಮಣಿಪುರ ಹೊತ್ತಿ ಉರಿಯುತ್ತಿದೆ. ಬಾಲಸೋರ್ ರೈಲು ಅಪಘಾತದ ಹೊಣೆಯನ್ನು ಮುಸ್ಲಿಂ ಸಮುದಾಯದ ಮೇಲೆ ಹೊರಿಸಲು ನಿಮ್ಮ ಐಟಿ ಸೆಲ್ ಪ್ರಯತ್ನಿಸುತ್ತಿದೆ. ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಅವರು ನಿಮ್ಮಲ್ಲಿ ಪ್ರಶ್ನೆ ಕೇಳಿದ ನಂತರ ಅವರನ್ನು ಟ್ರೋಲ್ ಮಾಡಿದವರನ್ನು ಶ್ವೇತಭವನ ಖಂಡಿಸಿದೆ ಎಂದು ಖೇರಾ ಹೇಳಿದ್ದಾರೆ.
ಸೋಮವಾರ, ಪ್ರಧಾನಿ ಮೋದಿ ತಮ್ಮ ಆರು ದಿನಗಳ ಅಮೆರಿಕ ಮತ್ತು ಈಜಿಪ್ಟ್ ಪ್ರವಾಸವನ್ನು ಮುಗಿಸಿ ಭಾರತಕ್ಕೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತು ಇತರ ಬಿಜೆಪಿ ನಾಯಕರು ಬರಮಾಡಿಕೊಂಡರು. ವರದಿಗಳ ಪ್ರಕಾರ, ಭಾರತದಲ್ಲಿ ಏನಾಗುತ್ತಿದೆ ಎಂದು ಪ್ರಧಾನಿ ಮೋದಿ ನಡ್ಡಾ ಅವರನ್ನು ವಿಚಾರಿಸಿದ್ದಾರೆ.
प्रधान मंत्री जी आप जानना चाहते हैं ना कि ‘इंडिया में क्या चल रहा है’।
तो प्रधान मंत्री जी, समझ लीजिए कि ‘इंडिया में फ़ौग चल रहा है…..’ pic.twitter.com/uT1QhlHViR
— Pawan Khera ?? (@Pawankhera) June 27, 2023
ಇಲ್ಲಿ ಏನು ನಡೆಯುತ್ತಿದೆ ಎಂದು ಅವರು ನಡ್ಡಾ ಜಿ ಅವರನ್ನು ಕೇಳಿದರು. ಅದಕ್ಕೆ ನಡ್ಡಾ ಅವರು, ತಮ್ಮ ಒಂಬತ್ತು ವರ್ಷಗಳ ಸರ್ಕಾರದ ವರದಿ ಕಾರ್ಡ್‌ನೊಂದಿಗೆ ಪಕ್ಷದ ನಾಯಕರು ಜನರನ್ನು ತಲುಪುತ್ತಿದ್ದಾರೆ. ದೇಶವು ಸಂತೋಷವಾಗಿದೆ ಎಂದು ಹೇಳಿದ್ದಾರೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಸುದ್ದಿಗಾರರಿಗೆ ತಿಳಿಸಿದರು.
ಮಂಗಳವಾರ ಬೆಳಗ್ಗೆ, ಪ್ರಧಾನಿ ಮೋದಿ ಅವರು ಭೋಪಾಲ್‌ನ ಕಮಲಾಪತಿ ರೈಲು ನಿಲ್ದಾಣವನ್ನು ತಲುಪಿದ್ದು ಅಲ್ಲಿಂದ ಅವರು ಐದು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Tue, 27 June 23