- Kannada News Photo gallery Viral News: UP farmers dressed up as a bear to prevent monkeys from destroying crops; Checkout photos here
Viral News: ಬೆಳೆ ರಕ್ಷಣೆಗೆ ಕರಡಿ ವೇಷ ತೊಟ್ಟು ಹೊಲದಲ್ಲಿ ಕೂತ ರೈತ; ಫೋಟೋ ವೈರಲ್
ಗ್ರಾಮದಲ್ಲಿ ಪ್ರತೀ ದಿನ ಸುಮಾರು 40 ರಿಂದ 45 ಮಂಗಗಳು ಬೆಳೆಯನ್ನು ಹಾನಿಗೊಳಿಸುತ್ತಿವೆ. ಈ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿದರೂ ಗಮನಹರಿಸಿಲ್ಲ ಎಂದು ರೈತ ಗಜೇಂದ್ರ ಎಎನ್‌ಐಗೆ ತಿಳಿಸಿದ್ದಾರೆ.
Updated on:Jun 27, 2023 | 1:18 PM

ಉತ್ತರ ಪ್ರದೇಶದ ರೈತನೊಬ್ಬ ತಾನು ಬೆಳೆದ ಬೆಳೆಗಳ ರಕ್ಷಣೆಗೆ ಹೊಸ ಪ್ಲಾನ್ ಒಂದನ್ನು ಮಾಡಿದ್ದು, ಈತನ ಪ್ಲಾನ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ಲಖೀಂಪುರ ಖೇರಿಯ ಜಹಾನ್ ನಗರ ಗ್ರಾಮದ ರೈತ ಗಜೇಂದ್ರ ಸಿಂಗ್ ಹೊಲದಲ್ಲಿ ಕರಡಿ ವೇಷ ತೊಟ್ಟು ಕೂತ ರೈತ.

ಗ್ರಾಮದಲ್ಲಿ ಪ್ರತೀ ದಿನ ಸುಮಾರು 40-45 ಮಂಗಗಳು ಬೆಳೆಯನ್ನು ಹಾನಿಗೊಳಿಸುತ್ತಿವೆ. ಈ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿದರೂ ಗಮನಹರಿಸಿಲ್ಲ ಎಂದು ರೈತ ಗಜೇಂದ್ರ ಎಎನ್‌ಐಗೆ ತಿಳಿಸಿದ್ದಾರೆ.

ಮಂಗಗಳು ಬೆಳೆಗಳಿಗೆ ಹಾನಿ ಮಾಡುವುದನ್ನು ತಡೆಯಲು 4,000 ರೂ.ಗಳಿಗೆ ಈ ವೇಷಭೂಷಣವನ್ನು ಖರೀದಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಇದೀಗಾ ರೈತ ಹೊಲದಲ್ಲಿ ಕರಡಿ ವೇಷ ತೊಟ್ಟು ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಇದೀಗಾ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯ ಡಿ ಎಫ್ಒ ಸಂಜಯ್ ಬಿಸ್ವಾಲ್ ಮಂಗಗಳು ಬೆಳೆ ಹಾನಿ ಮಾಡದಂತೆ ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
Published On - 1:17 pm, Tue, 27 June 23



















