ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಜೂನ್ 27) ಧಾರವಾಡ-ಬೆಂಗಳೂರು ವಂದೇ ಭಾರತ್ ಸೇರಿದಂತೆ ಒಟ್ಟು 5 ವಂದೇ ಭಾರತ್ ರೈಲುಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದರು. ಇತ್ತ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರೈಲಿಗೆ ಚಾಲನೆ ಹಸಿರು ನಿಶಾನೆ ತೋರಿದ್ದು, ರಾಜ್ಯದೊಳಗೆ ಸಂಚರಿಸಲಿರುವ ಮೊದಲ ವಂದೇ ಭಾರತ್ ರೈಲು ಇದಾಗಿದೆ. ಇನ್ನು ರೈಲಿನ ವೇಳಾಪಟ್ಟಿ, ರೈಲಿನ ವಿಶೇಷತೆಗಳೇನು? ರೈಲಿನ ಟಿಕೆಟ್ ದರವೇಷ್ಟು? ಹಾಗೂ ಎಲ್ಲೆಲ್ಲಿ ನಿಲುಗಡೆಯಾಗಲಿದೆ? ಎನ್ನುವ ವಿವರ ಇಲ್ಲಿದೆ.
ಬಹುನಿರೀಕ್ಷಿತ ಧಾರವಾಡ-ಬೆಂಗಳೂರು ಎಕ್ಸ್ಪ್ರೆಸ್ ರೈಲಿಗೆ ಇಂದು ಚಾಲನೆ ಸಿಕ್ಕಿದೆ.
1 / 9
ಮಧ್ಯಪ್ರದೇಶದ ಭೋಪಾಲ್ನ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಿಂದ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು.
2 / 9
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇಂಜಿನ್ ಇರುವುದಿಲ್ಲ. ಮೆಟ್ರೋ ಅಥವಾ ಬುಲೆಟ್ ಟ್ರೈನ್ ರೀತಿ ಎಂಜಿನ್ ಹೊಂದಿದೆ.
3 / 9
ರಾಜ್ಯದೊಳಗೆ ಸಂಚರಿಸಲಿರುವ ಮೊದಲ ವಂದೇ ಭಾರತ್ ರೈಲು ಆಗಿದ್ದು, ಇದು ಧಾರವಾಡ-ಬೆಂಗಳೂರು ಮಧ್ಯೆ ವಾರದಲ್ಲಿ 6 ದಿನ ಸಂಚರಿಸಲಿದೆ.
4 / 9
ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲು 489 ಕಿಮಿ ಮಾರ್ಗವನ್ನು ಗಂಟೆಗೆ 110 ಕಿಮಿ ವೇಗದಲ್ಲಿ ಚಲಿಸುತ್ತದೆ.
5 / 9
2 ಮೋಟಾರ್ ಕಾರ್ ಬೋಗಿಯಲ್ಲಿ ತಲಾ 44 ಆಸನಗಳು ಇದ್ದು, ಎಕ್ಸಿಕ್ಯೂಟಿವ್ ಬೋಗಿಯಲ್ಲಿ 52 ಆಸನಗಳು, ಸಾಮಾನ್ಯ ಬೋಗಿಯಲ್ಲಿ 78 ಆಸನಗಳು ಇವೆ.
6 / 9
ವಂದೇ ಭಾರತ್ ರೈಲು ಶತಾಬ್ದಿಗಿಂತಲೂ ವೇಗವಾಗಿ ಸಾಗಲಿದೆ. ಇನ್ನು ರೈಲಿನ ಮತ್ತೊಂದು ವಿಶೇಷ ಅಂದ್ರೆ ರೈಲಿನಲ್ಲಿ ವೈ ಫೈ ಸೌಲಭ್ಯ ಇದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಅಥವಾ ಟ್ಯಾಬ್ ನಲ್ಲಿ ವೈ ಫೈ ಪಡೆಯಬಹುದು. ಸೆಮಿ-ಹೈ ಸ್ಪೀಡ್ ಆಗಿರುವ ಕಾರಣ, ರೈಲಿನಲ್ಲಿ ಊಟದ ದರವನ್ನು ಟಿಕೆಟ್ ದರದಲ್ಲಿ ಸೇರಿಸಲಾಗಿದೆ
7 / 9
ಬೆಂಗಳೂರಿನಿಂದ ಧಾರವಾಡಕ್ಕೆ ಓರ್ವ ಪ್ರಯಾಣಿಕನ ಟಿಕೆಟ್ ದರ 1165 ರೂ. (ಎಸಿ) ನಿಗದಿ ಮಾಡಲಾಗಿದ್ದು, ಎಕ್ಸ್ಕ್ಯೂಟಿವ್ ಕ್ಲಾಸ್ ಟಿಕೆಟ್ ದರ 2010 ರೂ.