- Kannada News Photo gallery Cricket photos Rinku Singh is expected to receive a maiden call-up for IND vs WI T20Is
Rinku Singh: ಐಪಿಎಲ್ನಲ್ಲಿ 5 ಬಾಲ್ಗೆ 5 ಸಿಕ್ಸರ್ ಸಿಡಿಸಿದ ರಿಂಕು ಸಿಂಗ್ ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ?
IND vs WI Series: ಐಪಿಎಲ್ 2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಸ್ಫೋಟಕ ಆಟವಾಡಿ ಫಿನಿಶರ್ ಆಗಿ ಗುರಿತಿಸಿಕೊಂಡ ರಿಂಕು ಸಿಂಗ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗಲಿದ್ದಾರೆ ಎಂದು ಹೇಳಲಾಗಿದೆ.
Updated on: Jun 27, 2023 | 11:27 AM

ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಆದರೆ, ಕೊನೆಯದಾಗಿ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ತಂಡವನ್ನು ಹೆಸರಿಸಿಲ್ಲ.

ಸದ್ಯದಲ್ಲೇ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗಲಿದೆ. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದ್ದು, ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಇದರ ಜೊತೆಗೆ ಐಪಿಎಲ್ 2023 ರಲ್ಲಿ ಮಿಂಚಿದ ಸ್ಫೋಟಕ ಬ್ಯಾಟರ್ ಆಯ್ಕೆ ಆಗಲಿದ್ದಾರಂತೆ.

ಐಪಿಎಲ್ 2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಸ್ಫೋಟಕ ಆಟವಾಡಿ ಫಿನಿಶರ್ ಆಗಿ ಗುರಿತಿಸಿಕೊಂಡ ರಿಂಕು ಸಿಂಗ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗಲಿದ್ದಾರೆ ಎಂದು ಹೇಳಲಾಗಿದೆ.

ಭಾರತ ಕ್ರಿಕೆಟ್ ತಂಡ ಸದ್ಯ ಉತ್ತಮ ಫಿನಿಶರ್ ಹುಡುಕಾಟದಲ್ಲಿದೆ. ಈ ಹಿಂದೆ ದಿನೇಶ್ ಕಾರ್ತಿಕ್ಗೆ ಮತ್ತೊಮ್ಮೆ ಫಿನಿಶರ್ ಅವಕಾಶ ಕಲ್ಪಿಸಿ ಕೈಸುಟ್ಟುಕೊಂಡಿತ್ತು. ರಿಷಭ್ ಪಂತ್ ಇಂಜುರಿಯಲ್ಲಿದ್ದಾರೆ. ಹೀಗಾಗಿ ಟೀಮ್ ಇಂಡಿಯಾಕ್ಕೆ ಯುವ ಫಿನಿಶರ್ನ ಅಗತ್ಯವಿದೆ.

ಇದೀಗ ಬಿಸಿಸಿಐ ಐಪಿಎಲ್ 2023 ರಲ್ಲಿ ಸತತ 5 ಸಿಕ್ಸರ್ ಸಿಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ ಫಿನಿಶರ್ ರಿಂಕು ಸಿಂಗ್ ಅವರನ್ನು ತಂಡಕ್ಕೆ ಕರೆತರುವ ಬಗ್ಗೆ ಮಾತುಕತೆ ನಡೆಯುತ್ತದೆಯಂತೆ.

ಇನ್ನು ವಿಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿರುವ ಮೊಹಮ್ಮದ್ ಶಮಿ ಟಿ20 ಸರಣಿಗೆ ಆಯ್ಕೆ ಆಗುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ ನಾಯಕವಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಮೊದಲ ಟಿ20 ಆಗಸ್ಟ್ 3 ರಂದು ಬ್ರಿಯನ್ ಲಾರಾ ಸ್ಟೇಡಿಯಂನಲ್ಲೇ ನಡೆಯಲಿದೆ. ದ್ವಿತೀಯ ಟಿ20 ಆ. 6 ರಂದು ಹಾಗೂ ತೃತೀಯ ಟಿ20 ಆ. 8 ರಂದು ಆಯೋಜಿಸಲಾಗಿದೆ. ನಾಲ್ಕನೇ ಮತ್ತು ಕೊನೆಯ ಐದನೇ ಟಿ20 ಪಂದ್ಯ ಆ. 12 ಮತ್ತು 13 ರಂದು ನಡೆಯಲಿದೆ. ಈ ಎಲ್ಲ ಐದು ಟಿ20 ಪಂದ್ಯಗಳು ಭಾರತೀಯ ಕಾಲ ಮಾನದ ಪ್ರಕಾರ ರಾತ್ರಿ 8 ಗಂಟೆಗೆ ಶುರುವಾಗಲಿದೆ.
