Netherlands: 374 ರನ್​ ಚೇಸ್ ಮಾಡಿ, ಸೂಪರ್ ಓವರ್​ನಲ್ಲಿ ವೆಸ್ಟ್ ಇಂಡೀಸ್​ನ ಬಗ್ಗು ಬಡಿದ ನೆದರ್​ಲ್ಯಾಂಡ್ಸ್​

ICC World Cup Qualifiers 2023: ಕೊನೆಯ 2 ಓವರ್​ಗಳಲ್ಲಿ 30 ರನ್​ಗಳ ಅವಶ್ಯಕತೆಯಿತ್ತು. ಆರ್ಯನ್ ದತ್ ಹಾಗೂ ಲೋಗನ್ ಜೊತೆಗೂಡಿ 21 ರನ್​ ಕಲೆಹಾಕಿದರು.

TV9 Web
| Updated By: ಝಾಹಿರ್ ಯೂಸುಫ್

Updated on: Jun 26, 2023 | 10:24 PM

ICC World Cup Qualifiers 2023: ಹರಾರೆಯ ತಕಾಶಿಂಗಾ ಸ್ಪೋರ್ಟ್ಸ್​ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನೆದರ್​ಲ್ಯಾಂಡ್ಸ್​ ಸೂಪರ್ ಓವರ್ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್​ಲ್ಯಾಂಡ್ಸ್​ ತಂಡವು ಬೌಲಿಂಗ್ ಆಯ್ದುಕೊಂಡಿತು.

1 / 11
ಇನ್ನು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಬ್ರೆಂಡನ್ ಕಿಂಗ್ (76) ಹಾಗೂ ಜಾನ್ಸನ್ ಚಾರ್ಲ್ಸ್​ (54) ಭರ್ಜರಿ ಆರಂಭ ಒದಗಿಸಿದ್ದರು. ಇವರಿಬ್ಬರ ನಿರ್ಗಮನದ ಬಳಿಕ ಜೊತೆಯಾದ ಶಾಯ್ ಹೋಪ್ ಹಾಗೂ ನಿಕೋಲಸ್ ಪೂರನ್ ಇನಿಂಗ್ಸ್ ಕಟ್ಟಿದರು.

2 / 11
ಇದರ ನಡುವೆ 47 ರನ್ ಬಾರಿಸಿದ್ದ ಶಾಯ್ ಹೋಪ್ ವಿಕೆಟ್ ಒಪ್ಪಿಸಿದ್ದರು. ಆದರೆ ಮತ್ತೊಂದೆಡೆ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ ನಿಕೋಲಸ್ ಪೂರನ್ ನೆದರ್​ಲ್ಯಾಂಡ್ಸ್ ಬೌಲರ್​ಗಳ ಬೆಂಡೆತ್ತಿದರು.

3 / 11
ಪರಿಣಾಮ ನಿಕೋಲಸ್ ಪೂರನ್​ ಬ್ಯಾಟ್​ನಿಂದ ಕೇವಲ 63 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ನೊಂದಿಗೆ ಶತಕ ಮೂಡಿಬಂತು. ಅಲ್ಲದೆ ಅಂತಿಮವಾಗಿ 65 ಎಸೆತಗಳಲ್ಲಿ ಅಜೇಯ 104 ರನ್ ಬಾರಿಸಿದರು. ಇದರೊಂದಿಗೆ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ ವೆಸ್ಟ್ ಇಂಡೀಸ್ ತಂಡವು 374 ರನ್​ ಕಲೆಹಾಕಿತು.

4 / 11
375 ರನ್​ಗಳ ಕಠಿಣ ಗುರಿ ಪಡೆದ ನೆದರ್​ಲ್ಯಾಂಡ್ಸ್​ ತಂಡವು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ವೆಸ್ಟ್ ಇಂಡೀಸ್ ಬೌಲರ್​ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ನೆದರ್​ಲ್ಯಾಂಡ್ಸ್​ 30ನೇ ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 170 ರನ್​ ಕಲೆಹಾಕಿತು.

5 / 11
ಈ ಹಂತದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತೀಯ ಮೂಲದ ತೇಜ ನಿಡಮನೂರು ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದರು. ವಿಂಡೀಸ್ ದಾಳಿಗೆ ಬ್ಯಾಟ್ ಮೂಲಕವೇ ಪ್ರತಿ ದಾಳಿ ನಡೆಸಿದ ತೇಜ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಅಲ್ಲದೆ ಕೇವಲ 68 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರು.

6 / 11
ತೇಜ ನಿಡಮನೂರು ಅವರ ಭರ್ಜರಿ ಬ್ಯಾಟಿಂಗ್​ ಪರಿಣಾಮ ನೆದರ್​ಲ್ಯಾಂಡ್ಸ್​ ತಂಡಕ್ಕೆ ಕೊನೆಯ 5 ಓವರ್​ಗಳಲ್ಲಿ 53 ರನ್​ಗಳ ಅವಶ್ಯಕತೆಯಿತ್ತು. ಆದರೆ ಈ ಹಂತದಲ್ಲಿ 76 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 11 ಫೋರ್​ ಬಾರಿಸಿದ್ದ ತೇಜ (111) ಜೇಸನ್ ಹೋಲ್ಡರ್​ಗೆ ವಿಕೆಟ್ ಒಪ್ಪಿಸಿದರು.

7 / 11
ಇದಾಗ್ಯೂ ಲೋಗನ್ ವ್ಯಾನ್ ಬೀಕ್ ಹೋರಾಟ ಮುಂದುವರೆಸಿದರು. ಕೊನೆಯ 2 ಓವರ್​ಗಳಲ್ಲಿ 30 ರನ್​ಗಳ ಅವಶ್ಯಕತೆಯಿತ್ತು. ಆರ್ಯನ್ ದತ್ ಹಾಗೂ ಲೋಗನ್ ಜೊತೆಗೂಡಿ 21 ರನ್​ ಚಚ್ಚಿದರು. ಅದರಂತೆ ಕೊನೆಯ ಓವರ್​ನಲ್ಲಿ 9 ರನ್​ಗಳ ಅಗತ್ಯತೆಯಿತ್ತು.

8 / 11
ಅಲ್ಝಾರಿ ಜೋಸೆಫ್ ಎಸೆದ ಅಂತಿಮ ಓವರ್​ನಲ್ಲಿ ನೆದರ್​ಲ್ಯಾಂಡ್ಸ್ ತಂಡವು 8 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಉಭಯ ತಂಡಗಳ ಸ್ಕೋರ್ 374 ಸಮಬಲದೊಂದಿಗೆ ಪಂದ್ಯವು ಟೈ ಆಯಿತು. ಅಲ್ಲದೆ ಪಂದ್ಯವು ಸೂಪರ್ ಓವರ್​ನತ್ತ ಸಾಗಿತು.

9 / 11
ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್​ಲ್ಯಾಂಡ್ಸ್ ಲೋಗನ್ ವ್ಯಾನ್ ಬೀಕ್ ಹಾಗೂ ಎಡ್ವರ್ಡ್ಸ್​ ಕಣಕ್ಕಿಳಿದರು. ಜೇಸನ್ ಹೋಲ್ಡರ್ ಎಸೆದ ಈ ಓವರ್​ನ ಮೊದಲ ಎಸೆತದಲ್ಲಿ ಫೋರ್, 2ನೇ ಎಸೆತದಲ್ಲಿ ಸಿಕ್ಸ್​, 3ನೇ ಎಸೆತದಲ್ಲಿ ಫೋರ್, 4ನೇ ಎಸೆತದಲ್ಲಿ ಸಿಕ್ಸ್, 5ನೇ ಎಸೆತದಲ್ಲಿ ಸಿಕ್ಸ್​, 6ನೇ ಎಸೆತದಲ್ಲಿ ಫೋರ್​ ಬಾರಿಸುವ ಲೋಗನ್ ವ್ಯಾನ್ ಬೀಕ್ ಬರೋಬ್ಬರಿ 30 ರನ್​ ಚಚ್ಚಿದರು.

10 / 11
31 ರನ್​ಗಳ ಟಾರ್ಗೆಟ್​ನೊಂದಿಗೆ ಸೂಪರ್ ಓವರ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು 5 ಎಸೆತಗಳಲ್ಲಿ 8 ರನ್​ಗಳಿಸುವಷ್ಟರಲ್ಲಿ ಇಬ್ಬರು ಬ್ಯಾಟರ್​ಗಳು ಔಟಾದರು. ಇದರೊಂದಿಗೆ ನೆದರ್​ಲ್ಯಾಂಡ್ಸ್ ತಂಡವು ಬೃಹತ್ ಮೊತ್ತ ಬೆನ್ನತ್ತಿ ಸೂಪರ್ ಓವರ್ ಗೆಲುವನ್ನು ತನ್ನದಾಗಿಸಿಕೊಂಡಿತು.

11 / 11
Follow us