Updated on:Jun 26, 2023 | 6:59 PM
ICC World Cup Qualifiers 2023: ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ತಂಡದ ನಾಯಕ ಸೀನ್ ವಿಲಿಯಮ್ಸ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ತಂಡವು ಝಿಂಬಾಬ್ವೆಯನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ಝಿಂಬಾಬ್ವೆ ತಂಡಕ್ಕೆ ಜಾಯ್ಲಾರ್ಡ್ ಗುಂಬಿ (78) ಹಾಗೂ ಇನ್ನೊಸೆಂಟ್ (32) ಭರ್ಜರಿ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲಿಯಮ್ಸ್ ಬಿರುಸಿನ ಆಟಕ್ಕೆ ಒತ್ತು ನೀಡಿದರು.
ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದ ವಿಲಿಯಮ್ಸ್ ಯುಎಸ್ಎ ಬೌಲರ್ಗಳ ಮೇಲೆ ಬ್ಯಾಟ್ ಪ್ರಹಾರ ನಡೆಸಿದರು. ಪರಿಣಾಮ ಮೈದಾನದ ಮೂಲೆ ಮೂಲೆಗೂ ಚೆಂಡು ಸಾಗಿತು. ಈ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕೇವಲ 65 ಎಸೆತಗಳಲ್ಲಿ ವಿಲಿಯಮ್ಸ್ ಶತಕ ಪೂರೈಸಿದರು.
ಭರ್ಜರಿ ಸೆಂಚುರಿ ಬೆನ್ನಲ್ಲೇ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿದ ವಿಲಿಯಮ್ಸ್ ಆರ್ಭಟಿಸಲಾರಂಭಿಸಿದರು. ಪರಿಣಾಮ ಝಿಂಬಾಬ್ವೆ ನಾಯಕನ ಬ್ಯಾಟ್ನಿಂದ ಬರೋಬ್ಬರಿ 21 ಫೋರ್ಗಳು ಹಾಗೂ 5 ಭರ್ಜರಿ ಸಿಕ್ಸ್ಗಳು ಮೂಡಿಬಂತು. ಈ ಬೌಂಡರಿಗಳ ನೆರವಿನಿಂದ 101 ಎಸೆತಗಳಲ್ಲಿ 174 ರನ್ ಬಾರಿಸಿ ಸೀನ್ ವಿಲಿಯಮ್ಸ್ ವಿಕೆಟ್ ಒಪ್ಪಿಸಿದರು.
ಇದರೊಂದಿಗೆ ಝಿಂಬಾಬ್ವೆ ಪರ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರ್ಗಳಿಸಿದ ಮೂರನೇ ಬ್ಯಾಟರ್ ಎಂಬ ಹಿರಿಮೆಗೆ ವಿಲಿಯಮ್ಸ್ ಪಾತ್ರರಾದರು. 2009 ರಲ್ಲಿ ಬಾಂಗ್ಲಾದೇಶ್ ವಿರುದ್ಧ ಅಜೇಯ 194 ರನ್ ಬಾರಿಸಿದ್ದ ಚಾರ್ಲ್ಸ್ ಕೆವಿನ್ ಕೊವೆಂಟ್ರಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಕೀನ್ಯಾ ವಿರುದ್ಧ ಅಜೇಯ 178 ರನ್ ಬಾರಿಸಿದ್ದ ಹ್ಯಾಮಿಲ್ಟನ್ ಮಸಕಡ್ಜಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಇದೀಗ ಸೀನ್ ವಿಲಿಯಮ್ಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.
ಇನ್ನು ಸೀನ್ ವಿಲಿಯಮ್ಸ್ ಅವರ ಈ ಸ್ಪೋಟಕ ಶತಕದ ನೆರವಿನಿಂದ ಝಿಂಬಾಬ್ವೆ ತಂಡವು ಏಕದಿನ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ 408 ರನ್ ಕಲೆಹಾಕಿದೆ.
Published On - 6:58 pm, Mon, 26 June 23