Sarfaraz Khan: ಸರ್ಫರಾಝ್ ಖಾನ್ ಸಂಭ್ರಮಾಚರಣೆ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ಯಾ ಬಿಸಿಸಿಐ?

Sarfaraz Khan: ದೇಶೀಯ ಅಂಗಳದಲ್ಲಿ 54 ಪ್ರಥಮ ದರ್ಜೆ ಇನಿಂಗ್ಸ್​ ಆಡಿರುವ ಸರ್ಫರಾಝ್ ಖಾನ್ ಬರೋಬ್ಬರಿ 3505 ರನ್​ ಕಲೆಹಾಕಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Jun 26, 2023 | 5:43 PM

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಯುವ ದಾಂಡಿಗ ಸರ್ಫರಾಝ್ ಖಾನ್​ಗೆ ಚಾನ್ಸ್ ನೀಡದಿರುವ ಬಗ್ಗೆ ಇದೀಗ ಚರ್ಚೆಗಳಾಗುತ್ತಿದೆ. ಅದರಲ್ಲೂ ಆಯ್ಕೆ ಸಮಿತಿಯ ನಡೆಯ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

1 / 10
ದೇಶೀಯ ಅಂಗಳದಲ್ಲಿ 54 ಪ್ರಥಮ ದರ್ಜೆ ಇನಿಂಗ್ಸ್​ ಆಡಿರುವ ಸರ್ಫರಾಝ್ ಖಾನ್ ಬರೋಬ್ಬರಿ 3505 ರನ್​ ಕಲೆಹಾಕಿದ್ದಾರೆ. ಇದಾಗ್ಯೂ ಆತನಿಗೆ ಅವಕಾಶ ನೀಡದಿರಲು ಕಾರಣವೇನು ಎಂದು ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ.

2 / 10
ಈ ಪ್ರಶ್ನೆಗಳಿಗೆ ಇದೀಗ ಬಿಸಿಸಿಐ ಅಧಿಕಾರಿಯೊಬ್ಬರು ಉತ್ತರ ನೀಡಿದ್ದಾರೆ. ಕಳೆದ 3 ರಣಜಿ ಸೀಸನ್​ಗಳಲ್ಲಿ 900+ ರನ್​ ಕಲೆಹಾಕಿರುವ ಆಟಗಾರನೊಬ್ಬನ್ನು ಆಯ್ಕೆಗೆ ಪರಿಗಣಿಸದಿರಲು ಆಯ್ಕೆದಾರರೇನು ಮೂರ್ಖರಾ?​ ಆತನ ಆಯ್ಕೆಗೆ ಇತರೆ ಮಾನದಂಡಗಳು ಅಡ್ಡಿಯಾಗುತ್ತಿದೆ ಎಂದಿದ್ದಾರೆ.

3 / 10
ಅಂದರೆ ಸರ್ಫರಾಝ್ ಖಾನ್ ಉತ್ತಮ ಫಿಟ್​ನೆಸ್ ಹೊಂದಿಲ್ಲ. ಹೀಗಾಗಿ ಆತ ಸ್ವಲ್ಪ ತೂಕವನ್ನು ಇಳಿಸಬೇಕಾಗುತ್ತದೆ. ಇಲ್ಲಿ ಕೇವಲ ಬ್ಯಾಟಿಂಗ್ ಅನ್ನು ಪರಿಗಣಿಸಲಾಗುತ್ತಿಲ್ಲ. ಆಟಗಾರರ ಫಿಟ್​ನೆಸ್ ಕೂಡ ಮುಖ್ಯವಾಗುತ್ತದೆ ಎಂದು ಪಿಟಿಐಗೆ ಬಿಸಿಸಿಐ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

4 / 10
ಈ ಹೇಳಿಕೆ ಬೆನ್ನಲ್ಲೇ ಇದೀಗ ಮತ್ತೊಂದು ಮಾಹಿತಿ ಕೂಡ ಹೊರಬಿದ್ದಿದೆ. ಅದೇನೆಂದರೆ ರಣಜಿ ಟೂರ್ನಿಯಲ್ಲಿ ಸರ್ಫರಾಝ್ ಖಾನ್ ಅವರ ಸಂಭ್ರಮವು ಆಯ್ಕೆ ಸಮಿತಿಯ ಸದಸ್ಯರೊಬ್ಬರನ್ನು ಕೆರಳಿಸಿದೆ ಎಂಬುದು.

5 / 10
ದೆಹಲಿಯಲ್ಲಿ ನಡೆದ ರಣಜಿ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಸರ್ಫರಾಝ್ ಖಾನ್ ಡ್ರೆಸ್ಸಿಂಗ್ ರೂಮ್​ನತ್ತ ಕೈ ತೋರಿಸಿ ರಣೋತ್ಸಾಹದಲ್ಲಿ ಸಂಭ್ರಮಿಸಿದ್ದರು. ಇದೇ ವೇಳೆ ಸ್ಟೇಡಿಯಂನಲ್ಲಿ ಆಯ್ಕೆ ಸಮಿತಿ ಸದಸ್ಯರಾದ ಸಲೀಲ್ ಅಂಕೋಲ ಕೂಡ ಇದ್ದರು ಎಂದು ವರದಿಯಾಗಿದೆ.

6 / 10
ಅಂದು ನಿರ್ಣಾಯಕ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಮುಂಬೈ ತಂಡದ ಕೋಚ್​ ಅಮೋಲ್ ಮುಜುಂದಾರ್ ಅವರಿಗೆ ಕೈ ತೋರಿಸಿ ಸರ್ಫರಾಝ್ ಖಾನ್ ಸಂಭ್ರಮಿಸಿದ್ದರು. ಈ ಅದ್ಭುತ ಪ್ರದರ್ಶನಕ್ಕೆ ಟೋಪಿಯನ್ನು ತೆಗೆದು ಕೋಚ್ ಕೂಡ ಮೆಚ್ಚುಗೆ ಸೂಚಿಸಿದ್ದರು.

7 / 10
ಆದರೆ ಇದೇ ವೇಳೆ ಸ್ಟೇಡಿಯಂನಲ್ಲಿ ಆಯ್ಕೆದಾರ ಸಲೀಲ್ ಅಂಕೋಲಾ ಇದನ್ನು ತಮ್ಮ ವಿರುದ್ಧದ ಸಂಭ್ರಮ ಎಂದು ವೈಯುಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ. ಇದೇ ಕಾರಣದಿಂದಾಗಿ ಸರ್ಫರಾಝ್ ಖಾನ್ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡುತ್ತಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

8 / 10
ಇತ್ತ ಒತ್ತಡದ ಸನ್ನಿವೇಶದಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದು ಸರ್ಫರಾಝ್ ಖಾನ್ ತಮ್ಮ ಒತ್ತಡವನ್ನು ತೊಡೆದು ಹಾಕಲು ಆ ರೀತಿಯಾಗಿ ಸಂಭ್ರಮಿಸಿದ್ದರು. ಆದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸಲಾಗಿದೆ ಎಂದು ಸರ್ಫರಾಝ್​ ಖಾನ್​ ಅವರ ಆಪ್ತ ಮೂಲಗಳು ಪಿಟಿಐಗೆ ತಿಳಿಸಿದ್ದಾರೆ.

9 / 10
ಈ ಸಂಭ್ರಮಚಾರಣೆಯ ವಿಚಾರ ಬೆಳಕಿಗೆ ಬರುತ್ತಿದ್ದಂತೆ, ಸರ್ಫರಾಝ್ ಖಾನ್ ವಿರುದ್ಧ ಬಿಸಿಸಿಐ ಆಯ್ಕೆ ಸಮಿತಿ ಸೇಡು ತೀರಿಸಿಕೊಳ್ಳುತ್ತಿದ್ಯಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

10 / 10
Follow us
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ