ತಮಿಳುನಾಡು: ಸಂಕ್ರಾಂತಿಯಂದು ಜಲ್ಲಿಕಟ್ಟಿನಲ್ಲಿ ಭಾಗವಹಿಸಲಿರುವ ರಾಹುಲ್ ಗಾಂಧಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 13, 2021 | 8:28 PM

ನಾಳೆ ಸಂಕ್ರಾಂತಿ ನಿಮಿತ್ತ ತಮಿಳುನಾಡಿನ ಮಧುರೈನಲ್ಲಿ ನಡೆಯಲಿರುವ ಜಲ್ಲಿಕಟ್ಟು ಕ್ರೀಡೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ ಎಂದು ತಮಿಳುನಾಡು ಕಾಂಗ್ರೆಸ್ ಮುಖಂಡ ಕೆ.ಎಸ್.ಅಳಗಿರಿ ತಿಳಿಸಿದ್ದಾರೆ.

ತಮಿಳುನಾಡು: ಸಂಕ್ರಾಂತಿಯಂದು ಜಲ್ಲಿಕಟ್ಟಿನಲ್ಲಿ ಭಾಗವಹಿಸಲಿರುವ ರಾಹುಲ್ ಗಾಂಧಿ
ಜಲ್ಲಿಕಟ್ಟು (ಸಂಗ್ರಹ ಚಿತ್ರ)
Follow us on

ದೆಹಲಿ: ಇಂದು ರಾತ್ರಿ ಇಟಲಿಯಿಂದ ಮರಳಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಳೆ ಸಂಕ್ರಾಂತಿಯಂದು ತಮಿಳುನಾಡಿನ ಮಧುರೆಗೆ ತೆರಳಲಿದ್ದಾರೆ. ಸಂಕ್ರಾಂತಿ ಹಬ್ಬದ ನಿಮಿತ್ತ ಮಧುರೆಯ ಅವನಿಯಪುರಂನಲ್ಲಿ ನಡೆಯಲಿರುವ ಜಲ್ಲಿಕಟ್ಟು ಉತ್ಸವದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ ಎಂದು ತಮಿಳುನಾಡು ಕಾಂಗ್ರೆಸ್ ಮುಖಂಡ ಕೆ.ಎಸ್.ಅಳಗಿರಿ ತಿಳಿಸಿದ್ದಾರೆ.

ಡಿಸೆಂಬರ್ 27ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ 137ನೇ ಸ್ಥಾಪನಾ ದಿನದಂದು ವಿದೇಶಕ್ಕೆ ತೆರಳಿದ್ದ ರಾಹುಲ್ ಗಾಂಧಿ ಗೈರು ಹಾಜರಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಆಯೋಜನೆಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಜಲ್ಲಿಕಟ್ಟು ಆಯೋಜನೆಗೆ ಇತ್ತೀಚಿಗಷ್ಟೇ ತಮಿಳು ನಾಡು ಸರ್ಕಾರ ಅನುಮತಿ ನೀಡಿತ್ತು.

ದೆಹಲಿಯಲ್ಲಿ ನಡೆಯುತ್ತಿರುವ ಪಂಜಾಬ್ ರೈತರ ಚಳುವಳಿಗೆ ಬೆಂಬಲ ಘೋಷಿಸಿರುವ ರಾಹುಲ್ ಗಾಂಧಿ, ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಮೆರವಣಿಗೆ ನಡೆಸುವುದು ಮುಜುಗರದ ಸಂಗತಿ ಆಗಬಾರದು ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಉತ್ಸವದಲ್ಲಿ ಭಾಗವಹಿಸುವ ಮೂಲಕ ಕಾಂಗ್ರೆಸ್ ರೈತಪರವಾಗಿದೆ ಎಂದು ಬಿಂಬಿಸುವ ಉದ್ದೇಶ ಅವರದು. ಅಲ್ಲದೇ, ಇದೇ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯತ್ತಲೂ ರಾಹುಲ್ ಗಾಂಧಿ ಕಣ್ಣು ನೆಟ್ಟಿದ್ದಾರೆ.

ಟೀಕೆಗೆ ಗುರಿಯಾದ ತಮಿಳುನಾಡು ಕಾಂಗ್ರೆಸ್
ಈಗ ಜಲ್ಲಿಕಟ್ಟು ಕ್ರೀಡೆಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್, 2016ರ ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಜಲ್ಲಿಕಟ್ಟು ನಿಷೇಧವನ್ನು ಬೆಂಬಲಿಸಿತ್ತು. ಈ ವಿಷಯವನ್ನೇ ಮುಂದಿಟ್ಟುಕೊಂಡು ಇಂದು ಬೆಳಗ್ಗೆ ಟ್ವಿಟರ್​ನಲ್ಲಿ #GoBackRahulGandhi ಟ್ರೆಂಡ್ ಆಗಿತ್ತು. ಆದರೆ, ಸಂಜೆಯ ವೇಳೆಗೆ #MyLeaderRahulGandhi ಟ್ರೆಂಡ್ ಆಗುತ್ತಿದೆ!

ಜಲ್ಲಿಕಟ್ಟು ಆಯೋಜನೆಗೆ ಅನುಮತಿ ನೀಡಿದ ತಮಿಳುನಾಡು ಸರ್ಕಾರ; ಸ್ಪರ್ಧಿಗಳಿಗೆ ಕೊರೊನಾ ನೆಗೆಟಿವ್ ಪತ್ರ ಕಡ್ಡಾಯ