ಕೊರೊನಾ ಕ್ರಿಮಿಯ ಅಟ್ಟಹಾಸದ ನಡುವೆಯೂ ಲಾಭದತ್ತ ಮುನ್ನುಗ್ಗಿದ ವಿಪ್ರೋ ಸಂಸ್ಥೆ
ಕಳೆದ 2 ತ್ರೈಮಾಸಿಕಗಳಲ್ಲೂ ಸತತವಾಗಿ ಲಾಭದತ್ತ ಮುನ್ನುಗ್ಗುತ್ತಿರುವ ವಿಪ್ರೋ ಸಂಸ್ಥೆಯ ಲಾಭದಲ್ಲಿ ಶೇ.21ರಷ್ಟು ಏರಿಕೆ ಕಂಡಿದೆ. 2019ರ ಇದೇ ಅವಧಿಯಲ್ಲಿ ₹2,456 ಕೋಟಿ ಲಾಭ ಗಳಿಸಿದ್ದ ಸಂಸ್ಥೆಯ ಆದಾಯ ಈ ಬಾರಿ ಶೇ.1.3ರಷ್ಟು ಹೆಚ್ಚಾಗಿದೆ.
ದೆಹಲಿ: ಕೊರೊನಾ ಹೊಡೆತಕ್ಕೆ ಸಿಲುಕಿ ಬಹುತೇಕ ಎಲ್ಲಾ ಕ್ಷೇತ್ರಗಳೂ ನಲುಗಿ ಹೋಗಿವೆ. ಕೆಲ ಸಂಸ್ಥೆಗಳು ಕೊವಿಡ್ನಿಂದ ಶಾಶ್ವತವಾಗಿ ಕಣ್ಣು ಮುಚ್ಚಿದ್ದರೆ, ಕೆಲವು ಈಗೀಗ ಚೇತರಿಕೆ ಕಾಣುತ್ತಿವೆ. ಜಾಗತಿಕ ಮಟ್ಟದಲ್ಲಿ ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ ಎಲ್ಲಾ ಇದ್ದರೂ ಸಾಫ್ಟ್ವೇರ್ ದಿಗ್ಗಜ ವಿಪ್ರೋ ಸಂಸ್ಥೆ 3ನೇ ತ್ರೈಮಾಸಿಕದಲ್ಲಿ ₹2,968 ಕೋಟಿ ನಿವ್ವಳ ಲಾಭ ಗಳಿಸಿರುವುದಾಗಿ ತಿಳಿಸಿದೆ.
ಕಳೆದ 2 ತ್ರೈಮಾಸಿಕಗಳಲ್ಲೂ ಸತತವಾಗಿ ಲಾಭದತ್ತ ಮುನ್ನುಗ್ಗುತ್ತಿರುವ ವಿಪ್ರೋ ಸಂಸ್ಥೆಯ ಲಾಭದಲ್ಲಿ ಶೇ.21ರಷ್ಟು ಏರಿಕೆ ಕಂಡಿದೆ. 2019ರ ಇದೇ ಅವಧಿಯಲ್ಲಿ ₹ 2,456 ಕೋಟಿ ಲಾಭ ಗಳಿಸಿದ್ದ ಸಂಸ್ಥೆಯ ಆದಾಯ ಈ ಬಾರಿ ಶೇ. 1.3ರಷ್ಟು ಹೆಚ್ಚಾಗಿದೆ. ಒಟ್ಟು ಆದಾಯ ₹ 15,470.5 ಕೋಟಿಯಿಂದ ₹ 15,670ಕೋಟಿಗೆ ಏರಿಕೆಯಾಗಿದೆ ಎಂದು ವಿಪ್ರೋ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ಥಿಯರಿ ಡೆಲಾಪೋರ್ಟ್ ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮೂರನೇ ತ್ರೈಮಾಸಿಕದ ಅಂತ್ಯದಲ್ಲಿ ಸಂಸ್ಥೆಯ ನಿವ್ವಳ ಲಾಭ ಶೇ.7ರಷ್ಟು ಹೆಚ್ಚಾಗಿದೆ ಎಂದು ತಿಳಿಸಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಐಟಿ ಸಂಸ್ಥೆಗಳ ಷೇರಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿತ್ತು.
ದಿನವೂ 20 ಕೋಟಿ ದಾನ ಮಾಡ್ತಾರೆ ಈ ಕುಬೇರ.. ಆದರೂ ಆ ಸಂಪತ್ತು ತನ್ನದಲ್ಲ ಅಂತಾರೆ!
Published On - 6:10 pm, Wed, 13 January 21