ಆದಾಯ ತೆರಿಗೆ ಇಲಾಖೆಯಿಂದ 1.57 ಕೋಟಿ ತೆರಿಗೆದಾರರಿಗೆ ಮರು ಪಾವತಿ
ಈ ಬಾರಿ ಎಷ್ಟು ತೆರಿಗೆದಾರರು ಆದಾಯ ತೆರಿಗೆ ಮರು ಪಾವತಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ ಬಹಿರಂಗಪಡಿಸಿದೆ.
ದೆಹಲಿ: ಆದಾಯ ತೆರಿಗೆ ಇಲಾಖೆಯು 2020ರ ಎಪ್ರಿಲ್ 1ರಿಂದ ಜನವರಿ 11ರವರೆಗೆ 1.57 ಕೋಟಿ ತೆರಿಗೆದಾತರಿಗೆ ಒಟ್ಟು 1,73,139 ಕೋಟಿ ಮೊತ್ತವನ್ನು ಮರು ಪಾವತಿ ಮಾಡಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಬುಧವಾರ ತಿಳಿಸಿದೆ.
1,54,55,577 ಪ್ರಕರಣಗಳಲ್ಲಿ ₹ 57,137 ಕೋಟಿ ಮೊತ್ತವನ್ನು ಹಿಂದಿರುಗಿಸಲಾಗಿದೆ. ಕಾರ್ಪೊರೇಟ್ ತೆರಿಗೆಗೆ ಸಂಬಂಧಿಸಿದಂತೆ 2,10,150 ಪ್ರಕರಣಗಳಲ್ಲಿ ₹ 1,15,999 ಕೋಟಿ ಮೊತ್ತವನ್ನು ಹಿಂದಿರುಗಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
CBDT issues refunds of over Rs. 1,73,139 crore to more than 1.57 crore taxpayers between 1st April,2020 to 11th January,2021. Income tax refunds of Rs. 57,139 crore have been issued in 1,54,55,577cases &corporate tax refunds of Rs. 1,15,999 crore have been issued in 2,10,150cases
— Income Tax India (@IncomeTaxIndia) January 13, 2021
Published On - 7:47 pm, Wed, 13 January 21