ಶಾಂತಿ ಸಂದೇಶವಾಹಕರೋ ಅಥವಾ ರಾಜಕೀಯ ಅವಕಾಶವಾದಿಯೋ?: ರಾಹುಲ್ ಗಾಂಧಿ ಮಣಿಪುರ ಭೇಟಿ ಬಗ್ಗೆ ಕಾಂಗ್ರೆಸ್, ಬಿಜೆಪಿ ನಡುವೆ ವಾಕ್ಸಮರ

|

Updated on: Jun 29, 2023 | 7:40 PM

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ರಾಹುಲ್ ಭೇಟಿಯನ್ನು 'ಬೇಜವಾಬ್ದಾರಿ' ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ವರ್ತನೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ. ರಾಹುಲ್ ಗಾಂಧಿ ಮತ್ತು ಜವಾಬ್ದಾರಿ ಎಂದಿಗೂ ಒಟ್ಟಿಗೆ ಇರುವುದಿಲ್ಲ ಎಂದು ನಾನು ಯಾವಾಗಲೂ ಹೇಳುತ್ತೇನೆ

ಶಾಂತಿ ಸಂದೇಶವಾಹಕರೋ ಅಥವಾ ರಾಜಕೀಯ ಅವಕಾಶವಾದಿಯೋ?: ರಾಹುಲ್ ಗಾಂಧಿ ಮಣಿಪುರ ಭೇಟಿ ಬಗ್ಗೆ ಕಾಂಗ್ರೆಸ್, ಬಿಜೆಪಿ ನಡುವೆ ವಾಕ್ಸಮರ
ಮಣಿಪುರದಲ್ಲಿ ರಾಹುಲ್ ಗಾಂಧಿ
Follow us on

ಇಂಫಾಲ್: ಎರಡು ದಿನಗಳ ಮಣಿಪುರ(Manipur) ಪ್ರವಾಸಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಗುರುವಾರ ಇಂಫಾಲ್ ತಲುಪಿದ್ದಾರೆ. ಮಾಜಿ ಕಾಂಗ್ರೆಸ್ (Congress) ಸಂಸದರನ್ನು ಬಿಷ್ಣುಪುರಕ್ಕೆ ಪ್ರವೇಶಿಸದಂತೆ ಪೊಲೀಸರು ತಡೆದಾಗ ಸ್ಥಳೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಂತರ ರಾಹುಲ್ ಗಾಂಧಿಯವರು ಚುರಚಂದಪುರಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿದ್ದಾರೆ. ರಾಜ್ಯದಲ್ಲಿ ಹಲವಾರು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ ಹಿಂಸಾಚಾರ ಪೀಡಿತ ಜನರನ್ನು ಭೇಟಿ ಮಾಡಲು ಗಾಂಧಿ ನಿರ್ಧರಿಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ರಾಹುಲ್ ರಸ್ತೆ ಮಾರ್ಗವಾಗಿ ಪ್ರಯಾಣಿಸುವುದನ್ನು ತಡೆಹಿಡಿಯಲಾಗಿದೆ ಎಂದು ಬಿಷ್ಣುಪುರ ಎಸ್ಪಿ ಹೈಸ್ನಮ್ ಬಲರಾಮ್ ಸಿಂಗ್ ಹೇಳಿದ್ದಾರೆ.

ಅಲ್ಲಿನ ಪರಿಸ್ಥಿತಿಯನ್ನು ನೋಡಿ, ನಾವು ಅವರನ್ನು (ರಾಹುಲ್ ಗಾಂಧಿ) ಮುಂದೆ ಹೋಗದಂತೆ ತಡೆದು ಹೆಲಿಕಾಪ್ಟರ್ ಮೂಲಕ ಚುರಚಂದಪುರಕ್ಕೆ ಪ್ರಯಾಣಿಸಲು ಸಲಹೆ ನೀಡಿದ್ದೇವೆ. ವಿಐಪಿ ರಾಹುಲ್ ಗಾಂಧಿ ಸಂಚರಿಸುವ ಹೆದ್ದಾರಿಯಲ್ಲಿ ಗ್ರೆನೇಡ್ ದಾಳಿ ನಡೆಯುವ ಸಾಧ್ಯತೆ ಇದೆ. ಅವರ ಭದ್ರತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಅವರಿಗೆ ಅವಕಾಶ ನೀಡಲಿಲ್ಲ ಎಂದಿದ್ದಾರೆ ಸಿಂಗ್.

ಶಾಂತಿ ಮತ್ತು ಪ್ರೀತಿಯ ಸಂದೇಶದೊಂದಿಗೆ ರಾಹುಲ್ ಭೇಟಿ: ಕಾಂಗ್ರೆಸ್

ರಾಹುಲ್ ಅವರ ಮಣಿಪುರ ಭೇಟಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದೆ. ಭೇಟಿಯ ಸಮಯವನ್ನು ಬಿಜೆಪಿ ಪ್ರಶ್ನಿಸಿದರೆ, ರಾಹುಲ್ ‘ಶಾಂತಿ, ಪ್ರೀತಿಯ ಸಂದೇಶವನ್ನು ಹೊತ್ತಿದ್ದಾರೆ’ ಎಂದು ಹೇಳುವ ಮೂಲಕ ಕಾಂಗ್ರೆಸ್ ಈ ಭೇಟಿಯನ್ನು ಸಮರ್ಥಿಸಿಕೊಂಡಿದೆ.


ಜನರನ್ನು ರಕ್ಷಿಸಲು ಮತ್ತು ರಾಜ್ಯದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲು ವಿಫಲವಾಗಿರುವ ಮಣಿಪುರ ಸರ್ಕಾರವು ಮೋದಿ ಸರ್ಕಾರದ ಸೂಚನೆಯಂತೆ ರಾಹುಲ್ ಗಾಂಧಿಯವರ ಬೆಂಗಾವಲು ಪಡೆಯನ್ನು ನಿಲ್ಲಿಸಿದೆ. ಅವರು ಯಾವುದಕ್ಕೆ ಹೆದರುತ್ತಿದ್ದಾರೆ? ರಾಹುಲ್ ಜೀ ಅವರು ಶಾಂತಿ, ಪ್ರೀತಿ ಮತ್ತು ಮಾನವೀಯತೆಯ ಸಂದೇಶವನ್ನು ಸಾಗಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಸುಪ್ರಿಯಾ ಶ್ರೀನಾಥೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Manipur Violence: ಮಣಿಪುರದ ಹಿಂಸಾಚಾರ ಸ್ಥಳಕ್ಕೆ ರಾಹುಲ್​​ ಭೇಟಿ, ಬೆಂಗಾವಲು ಪಡೆ ವಾಹನ ತಡೆದ ಪೊಲೀಸರು

ರಾಹುಲ್ ವಿರುದ್ಧ ಬಿಜೆಪಿ ವಾಗ್ದಾಳಿ

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ರಾಹುಲ್ ಭೇಟಿಯನ್ನು ‘ಬೇಜವಾಬ್ದಾರಿ’ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ವರ್ತನೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ. ರಾಹುಲ್ ಗಾಂಧಿ ಮತ್ತು ಜವಾಬ್ದಾರಿ ಎಂದಿಗೂ ಒಟ್ಟಿಗೆ ಇರುವುದಿಲ್ಲ ಎಂದು ನಾನು ಯಾವಾಗಲೂ ಹೇಳುತ್ತೇನೆ. ಮಣಿಪುರದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿರುವ ಪರಂಪರೆ ಸಮಸ್ಯೆಯಿಂದಾಗಿ ಪರಿಸ್ಥಿತಿ ನಿರ್ಮಾಣವಾಗಿದೆ. ಸೂಕ್ಷ್ಮತೆಯ ಕಾರಣದಿಂದ ನಾನು ಆ ಸಮಸ್ಯೆಗಳನ್ನು ಉಲ್ಲೇಖಿಸಲು ಬಯಸುವುದಿಲ್ಲ ಎಂದಿದ್ದಾರೆ ಪಾತ್ರಾ.


ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು, ಗಾಂಧಿ ವಂಶಸ್ಥರು ಕೇವಲ ‘ರಾಜಕೀಯ ಅವಕಾಶವಾದಿ’. ಮಣಿಪುರಕ್ಕೆ ಅವರ ಭೇಟಿ ಜನಪರ ಕಾಳಜಿಯಿಂದಲ್ಲ ಬದಲಾಗಿ ಇಲ್ಲಿ ಕಾಣುತ್ತಿರುವುದು ಅವರ ಸ್ವಾರ್ಥಿ ರಾಜಕೀಯ ಅಜೆಂಡಾ. ಅವರನ್ನಾಗಲಿ ಕಾಂಗ್ರೆಸ್‌ನ್ನಾಗಲೀ ಯಾರೂ ನಂಬದಿರಲು ಕಾರಣವಿದೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.

ಮಣಿಪುರದ ಪರಿಸ್ಥಿತಿಯು ಅಸ್ಥಿರವಾಗಿ ಉಳಿಯಬೇಕೆಂದು ಗಾಂಧಿ ಬಯಸುತ್ತಾರೆ, ಇದರಿಂದ ಅವರು ಅದರಿಂದ ರಾಜಕೀಯ ಮೈಲೇಜ್ ಪಡೆಯಬಹುದು ಎಂದು ಮಾಳವಿಯಾ ಹೇಳಿದರು.

ಇದಕ್ಕಿಂತ ಮುನ್ನ ರಾಹುಲ್ ಗಾಂಧಿ ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ? ಅವರು ಶಾಂತಿಯ ಸಂದೇಶವಾಹಕರಲ್ಲ, ಕೇವಲ ರಾಜಕೀಯ ಅವಕಾಶವಾದಿ. ಅವರು ಕುದಿಯುತ್ತಿರುವಂತೆ ಬಯಸುತ್ತಾರೆ. ಮಣಿಪುರಕ್ಕೆ ಅವರ ಭೇಟಿ ಜನಪರ ಕಾಳಜಿಯಿಂದಲ್ಲ ಬದಲಾಗಿ ಅವರ ಸ್ವಾರ್ಥಿ ರಾಜಕೀಯ ಅಜೆಂಡಾ. ಯಾರೂ ಅವರನ್ನು ಅಥವಾ ಕಾಂಗ್ರೆಸ್ ಅನ್ನು ನಂಬದಿರಲು ಕಾರಣವಿದೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:37 pm, Thu, 29 June 23