ಹಿಂದುತ್ವಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ: ಫ್ರಾನ್ಸ್​​​ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

|

Updated on: Sep 11, 2023 | 3:15 PM

ಪ್ಯಾರಿಸ್‌ನ ಸೈನ್ಸಸ್ ಪಿಒ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ದೇಶದೊಳಗಿನ ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕಲು ವ್ಯಾಪಕ ಟೀಕೆಗೆ ಗುರಿಯಾದ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದು,  ಬಿಜೆಪಿಯವರು ಏನೇ ಮಾಡಿಯಾದರೂ ಅಧಿಕಾರ ಪಡೆಯಬೇಕು ಎಂದು ಹೊರಟಿದ್ದಾರೆ ಎಂದಿದ್ದಾರೆ.

ಹಿಂದುತ್ವಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ: ಫ್ರಾನ್ಸ್​​​ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ
Follow us on

ಪ್ಯಾರಿಸ್ ಸೆಪ್ಟೆಂಬರ್ 11: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಭಾನುವಾರ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ವಾಗ್ದಾಳಿ ನಡೆಸಿದ್ದು, “ಹಿಂದುತ್ವಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಬಿಜೆಪಿ (BJP) ಏನು ಮಾಡುತ್ತದೆ ಎಂಬುದರಲ್ಲಿ ಹಿಂದುತ್ವ ಏನೂ ಇಲ್ಲ ಎಂದು ಹೇಳಿದ್ದಾರೆ. ಭಾನುವಾರ ಫ್ರಾನ್ಸ್‌ನಲ್ಲಿ (France)  ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ “ನಾನು ಗೀತೆ, ಹಲವಾರು ಉಪನಿಷತ್ತುಗಳು ಮತ್ತು ಅನೇಕ ಹಿಂದೂ ಪುಸ್ತಕಗಳನ್ನು ಓದಿದ್ದೇನೆ. ನಿಮಗಿಂತ ದುರ್ಬಲರನ್ನು ನೀವು ಭಯಭೀತಗೊಳಿಸಬೇಕು ಅಥವಾ ಹಾನಿಗೊಳಿಸಬೇಕು ಎಂದು ನಾನು ಯಾವುದೇ ಹಿಂದೂ ಪುಸ್ತಕದಲ್ಲಿ ಎಲ್ಲಿಯೂ ಓದಿಲ್ಲ ಅಥವಾ ಯಾವುದೇ ಹಿಂದೂ ವ್ಯಕ್ತಿಯಿಂದ ಕೇಳಿಲ್ಲ. ಈ ಕಲ್ಪನೆ . ಈ ಪದ – ‘ಹಿಂದೂ ರಾಷ್ಟ್ರೀಯವಾದಿ’ – ಇದು ತಪ್ಪು ಪದ. ಅವರು ಹಿಂದೂ ರಾಷ್ಟ್ರೀಯವಾದಿಗಳಲ್ಲ… ಅವರಿಗೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಹುಲ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಪ್ಯಾರಿಸ್‌ನ ಸೈನ್ಸಸ್ ಪಿಒ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ದೇಶದೊಳಗಿನ ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕಲು ವ್ಯಾಪಕ ಟೀಕೆಗೆ ಗುರಿಯಾದ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದು,  ಬಿಜೆಪಿಯವರು ಏನೇ ಮಾಡಿಯಾದರೂ ಅಧಿಕಾರ ಪಡೆಯಬೇಕು ಎಂದು ಹೊರಟಿದ್ದಾರೆ ಎಂದಿದ್ದಾರೆ.

“ಅವರಿಗೆ (ಬಿಜೆಪಿ ಮತ್ತು ಆರ್‌ಎಸ್‌ಎಸ್) ಹಿಂದೂ ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ಯಾವುದೇ ಬೆಲೆಯಲ್ಲಿ ಅಧಿಕಾರವನ್ನು ಪಡೆಯಲು ಹೊರಟಿದ್ದಾರೆ. ನನ್ನ ದೇಶದ ಜಾತಿ ರಚನೆ ಮತ್ತು ಸಾಮಾಜಿಕ ರಚನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ ಎಂದು ರಾಹುಲ್ ಹೇಳಿದ್ದಾರೆ. “ಅವರು ಕೆಲವರ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುತ್ತಾರೆ ಎಂದಿದ್ದಾರೆ ರಾಹುಲ್.


ದೇಶದ ಹೆಸರನ್ನು ಭಾರತ್ ಎಂದು ಬದಲಾಯಿಸಲು ಯೋಜಿಸಲಾಗಿದೆ ಎಂಬ ಊಹಾಪೋಹಗಳ ಕುರಿತು ಮಾತನಾಡಿದ ರಾಹುಲ್ ಗಾಂಧಿ ಭಾನುವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಹುಲ್ ಅವರಲ್ಲಿ ಜನಪ್ರಿಯ ಹೆಸರನ್ನು ಬದಲಿಸುತ್ತಿರುವುದರ ಬಗ್ಗೆ ಕೇಳಲಾಗಿತ್ತು. ಇದಕ್ಕೆ ರಾಹುಲ್ ಗಾಂಧಿ, ಎರಡೂ “ಸಂಪೂರ್ಣವಾಗಿ ಸ್ವೀಕಾರಾರ್ಹ” ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ರಾಹುಲ್ ಗಾಂಧಿ, ಈ ರೀತಿ ಉತ್ತರಿಸುತ್ತಾರೆ: ಸಂವಿಧಾನವು ವಾಸ್ತವವಾಗಿ ಎರಡೂ ಹೆಸರುಗಳನ್ನು ಬಳಸುತ್ತದೆ, ಅಲ್ಲವೇ? ಸಂವಿಧಾನದಲ್ಲಿನ ಮೊದಲ ಸಾಲು, ‘India, that is, Bharat, shall be a Union of States’ಎಂದು ಇದೆ’. ಹಾಗಾಗಿ ನಾನು ನಿಜವಾಗಿಯೂ ಇದರಲ್ಲಿ ಸಮಸ್ಯೆ ಇದೆ ಎಂದು ಹೇಳಲ್ಲ. ಎರಡೂ ಸಂಪೂರ್ಣವಾಗಿ ಸ್ವೀಕಾರಾರ್ಹ ಎಂದಿದ್ದಾರೆ.

ಸ್ವಲ್ಪ ಹೊತ್ತು ನಿಲ್ಲಿಸಿ ನಂತರ ಮುಗುಳ್ನಕ್ಕು ಮಾತು ಮುಂದುವರಿಸಿದ ರಾಹುಲ್,ನಾವು ನಮ್ಮ ಒಕ್ಕೂಟಕ್ಕೆ ಇಂಡಿಯಾಎಂದು ಹೆಸರಿಸಿದ್ದರಿಂದ ನಾವು ಸರ್ಕಾರವನ್ನು ಸ್ವಲ್ಪ ಕೆರಳಿಸಿದ್ದೇವೆ ಎಂದ ಭಾವಿಸುತ್ತೇನೆ. ಇದರಿಂದ ಅವರು ರೊಚ್ಚಿಗೆದ್ದು ದೇಶದ ಹೆಸರನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಸೌದಿ ದೊರೆಯೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ: ವ್ಯಾಪಾರ ಮತ್ತು ರಕ್ಷಣಾ ಸಂಬಂಧಗಳನ್ನು ಬಲಪಡಿಸುವ ವಿಚಾರ ಕುರಿತು ಚರ್ಚೆ

ಈ ವಿಷಯಗಳು ಹೇಗೆ ಎಂದು ನಿಮಗೆ ತಿಳಿದಿದೆ. ಅಂದರೆ, ನಾವು ಯಾವಾಗಲೂ ನಮ್ಮ ಒಕ್ಕೂಟಕ್ಕೆ ಎರಡನೇ ಹೆಸರನ್ನು ನೀಡಬಹುದು. (ಆದರೆ) ಇದು ಉದ್ದೇಶವನ್ನು ಪರಿಹರಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ಆದರೆ ಜನರು ವಿಚಿತ್ರ ರೀತಿಯಲ್ಲಿ ವರ್ತಿಸುತ್ತಾರೆ! “ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ರಾಹುಲ್ ಮರುಪ್ರಶ್ನೆ ಹಾಕಿದ್ದಾರೆ.

ಇಂಡಿಯಾ-ಭಾರತ ವಿವಾದ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು G20 ನಾಯಕರಿಗೆ ಆಹ್ವಾನ ಪತ್ರದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸದ ಬೆನ್ನಲ್ಲೇ ಹೆಸರು ಬದಲಾವಣೆಯ ವದಂತಿ ಹರಿದಾಡಿತ್ತು. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು “ಇತಿಹಾಸವನ್ನು ತಿರುಚಿದ್ದಾರೆ ಮತ್ತು ಭಾರತವನ್ನು ವಿಭಜಿಸಿದ್ದಾರೆ” ಎಂದು ಇಂಡಿಯಾ ಮೈತ್ರಿಕೂಟದ ಸದಸ್ಯರು ಆರೋಪಿಸಿದ್ದಾರೆ.
ಇಂಡಿಯಾ ಮೈತ್ರಿಕೂಟ ಈಗ ತನ್ನ ಹೆಸರನ್ನು ಭಾರತ್ ಎಂದು ಬದಲಿಸಿದರೆ ಭಾರತೀಯ ಜನತಾ ಪಕ್ಷವು ‘ಬಿಜೆಪಿ’ ಎಂದು ಹೆಸರನ್ನು ಬದಲಾಯಿಸುತ್ತದೆಯೇ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಳಿದ್ದಾರೆ.

ಇಂಡಿಯಾ ಅಲ್ಲ ಘಮಂಡಿಯಾ ಎಂದ ಪ್ರಧಾನಿ ಮೋದಿ

ವಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದಕ್ಕೆ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಅದು ಇಂಡಿಯಾ ಅಲ್ಲ ಘಮಂಡಿಯಾ(ಅಹಂಕಾರಿ) ಎಂದು ಹೇಳಿದ್ದಾರೆ. “ಬಡವರ ವಿರುದ್ಧ ಅವರು ಹೇಗೆ ಸಂಚು ರೂಪಿಸಿದರು ಎಂಬುದನ್ನು ಮರೆಮಾಡಲು ಅವರು ಈ ಹೆಸರನ್ನಿಟ್ಟಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಏತನ್ಮಧ್ಯೆ, ಬಿಜೆಪಿಯ ಹಿರಿಯ ನಾಯಕ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ವಿಪಕ್ಷಗಳು “ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು, ನೀವು ಗಾಂಧಿ ಸರ್ನೇಮ್ ಬಿಟ್ಟು ಬಿಡಿ ಎಂದು ರಾಹುಲ್ ಗಾಂಧಿ ಅವರಲ್ಲಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ