ಸುಪ್ರೀಂಕೋರ್ಟ್ ವಕೀಲೆಯಾಗಿದ್ದ ಪತ್ನಿಯನ್ನು ಕೊಂದ ಭಾರತೀಯ ಕಂದಾಯ ಸೇವೆ ಮಾಜಿ ಅಧಿಕಾರಿ ಬಂಧನ
ಬಂಗಲೆಯೊಳಗೆ ಬಲವಂತವಾಗಿ ಪ್ರವೇಶಿಸಿದ ನಂತರ, ಬಾತ್ ರೂಂನಲ್ಲಿ ರೇಣು ಶವವನ್ನು ಪೊಲೀಸರು ಪತ್ತೆ ಮಾಡಿದರು. ಏತನ್ಮಧ್ಯೆ, ಘಟನೆಯ ನಂತರ ಆಕೆಯ ಪತಿ ನಾಪತ್ತೆಯಾಗಿದ್ದು, ಅವರ ಫೋನ್ ಆಫ್ ಆಗಿತ್ತು. ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಸಹೋದರ ಬಹಿರಂಗಪಡಿಸಿದ್ದಾನೆ.ಇದರ ಬೆನ್ನಲ್ಲೇ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದು, ಬಂಗಲೆಯ ಸ್ಟೋರ್ ರೂಂನಲ್ಲಿ ಪತ್ತೆಯಾಗಿದ್ದಾರೆ. ಅಜಯ್ ನಾಥ್ ಬಂಗಲೆಗೆ ಬೀಗ ಜಡಿದು ಟೆರೇಸ್‌ನಲ್ಲಿರುವ ಸ್ಟೋರ್ ರೂಂನಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ
ನೋಯ್ಡಾ ಸೆಪ್ಟೆಂಬರ್ 11: ಸುಪ್ರೀಂಕೋರ್ಟ್ (Supreme Court) ವಕೀಲರಾಗಿದ್ದ ತನ್ನ ಪತ್ನಿಯನ್ನು ಕೊಂದ 62 ವರ್ಷದ ಭಾರತೀಯ ಕಂದಾಯ ಸೇವೆ (Indian Revenue Service )ಮಾಜಿ ಅಧಿಕಾರಿಯನ್ನು ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿರುವ ಬಂಗಲೆಯಿಂದ ಸೋಮವಾರ ಬಂಧಿಸಲಾಗಿದೆ. ಆರೋಪಿ ಅಜಯ್ ನಾಥ್ ಭಾನುವಾರ ಅಪರಾಧ ಎಸಗಿದ ನಂತರ ಬಂಗಲೆಯ ಸ್ಟೋರ್ ರೂಂನಲ್ಲಿ ಅಡಗಿಕುಳಿತಿದ್ದರು ಎಂದು ಪೊಲೀಸರು ಹೇಳಿದ್ದಾರೆ. 61 ವರ್ಷದ ಸಂತ್ರಸ್ತೆ ರೇಣು ಸಿನ್ಹಾ ತನ್ನ ಸಹೋದರನ ಪುನರಾವರ್ತಿತ ಫೋನ್ ಕರೆಗಳಿಗೆ ಎರಡು ದಿನಗಳಿಂದ ಪ್ರತಿಕ್ರಿಯಿಸಲು ವಿಫಲವಾದಾಗ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಆತಂಕಗೊಂಡ ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.
ಬಂಗಲೆಯೊಳಗೆ ಬಲವಂತವಾಗಿ ಪ್ರವೇಶಿಸಿದ ನಂತರ, ಬಾತ್ ರೂಂನಲ್ಲಿ ರೇಣು ಶವವನ್ನು ಪೊಲೀಸರು ಪತ್ತೆ ಮಾಡಿದರು. ಏತನ್ಮಧ್ಯೆ, ಘಟನೆಯ ನಂತರ ಆಕೆಯ ಪತಿ ನಾಪತ್ತೆಯಾಗಿದ್ದು, ಅವರ ಫೋನ್ ಆಫ್ ಆಗಿತ್ತು. ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಸಹೋದರ ಬಹಿರಂಗಪಡಿಸಿದ್ದಾನೆ.
ಇದರ ಬೆನ್ನಲ್ಲೇ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದು, ಬಂಗಲೆಯ ಸ್ಟೋರ್ ರೂಂನಲ್ಲಿ ಪತ್ತೆಯಾಗಿದ್ದಾರೆ. ಅಜಯ್ ನಾಥ್ ಬಂಗಲೆಗೆ ಬೀಗ ಜಡಿದು ಟೆರೇಸ್‌ನಲ್ಲಿರುವ ಸ್ಟೋರ್ ರೂಂನಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ನಂತರ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.
ಇದನ್ನೂ ಓದಿ: ನೋಯ್ಡಾದಲ್ಲಿ ಡಬಲ್ ಮರ್ಡರ್, ತಂದೆ ಹಾಗೂ ಅಜ್ಜನನ್ನು ಕೊಂದ ಯುವಕ
ವಿಚಾರಣೆ ವೇಳೆ, ಅಜಯ್ ನಾಥ್ ಅವರು ತಮ್ಮ ಬಂಗಲೆಯನ್ನು 4 ಕೋಟಿ ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದ್ದು, ಮುಂಗಡವನ್ನೂ ತೆಗೆದುಕೊಂಡಿದ್ದರು ಎಂದು ಒಪ್ಪಿಕೊಂಡರು. ಆದರೆ ಅವರ ಪತ್ನಿ ಮಾರಾಟ ಮಾಡುವ ತೀರ್ಮಾನವನ್ನು ವಿರೋಧಿಸಿದ್ದರು . ಮೃತ ವಕೀಲರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು ಇತ್ತೀಚೆಗಷ್ಟೇ ಅಂದರೆ ಒಂದು ತಿಂಗಳ ಹಿಂದೆ ಅವರು ಕ್ಯಾನ್ಸರ್ ಮುಕ್ತ ಆಗಿದ್ದರು.
ಪ್ರಾಥಮಿಕ ತನಿಖೆಯಲ್ಲಿ ರೇಣು ಅತಿಯಾದ ರಕ್ತ ಸೋರಿಕೆಯಿಂದ ಸಾವನ್ನಪ್ಪಿರಬಹುದು ಎಂದು ತಿಳಿದುಬಂದಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸಾವಿಗೆ ನಿಖರ ಕಾರಣ ದೃಢಪಡಲಿದೆ.
ಪೊಲೀಸರು ಅಪರಾಧ ನಡೆದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿದ್ದು, ತನಿಖೆ ನಡೆಯುತ್ತಿದೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ