AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಝಿಲೆಂಡ್ ತಂಡದ ಬಲ, ಭಾರತ ತಂಡದ ಚಿಂತೆ

T20 World Cup 2026 Final: ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಮೂರನೇ ಬಾರಿ ಭಾರತ ತಂಡ ಟಿ20 ವಿಶ್ವಕಪ್ ಮುಡಿಗೇರಿಸಿಕೊಳ್ಳಲಿದೆ.

ನ್ಯೂಝಿಲೆಂಡ್ ತಂಡದ ಬಲ, ಭಾರತ ತಂಡದ ಚಿಂತೆ
Ind Vs Nz
ಝಾಹಿರ್ ಯೂಸುಫ್
|

Updated on: Mar 08, 2026 | 12:14 PM

Share

T20 World Cup 2026: ಟಿ20 ವಿಶ್ವಕಪ್​ನ ಫೈನಲ್ ಮ್ಯಾಚ್​ಗೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಅತ್ತ ಅಹಮದಾಬಾದ್​ನಲ್ಲಿ ಬ್ಯಾಟಿಂಗ್​ಗೆ ಪೂರಕವಾಗಿರುವ ಪಿಚ್​ ನಿರ್ಮಿಸಿರುವುದು ಬಹಿರಂಗವಾಗಿದೆ. ಹೀಗಾಗಿ ಈ ಮ್ಯಾಚ್​ನಲ್ಲಿ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸಬಹುದು.

ಈ ನಿರೀಕ್ಷೆಯ ನಡುವೆ ಮತ್ತೊಂದು ಅಂಕಿ ಅಂಶಗಳು ಕೂಡ ಬಹಿರಂಗವಾಗಿದೆ. ಈ ಅಂಕಿ ಅಂಶಗಳು ನ್ಯೂಝಿಲೆಂಡ್ ತಂಡದ ಬಲವಾಗಿದ್ದರೆ, ಭಾರತ ತಂಡದ ಅತೀ ದೊಡ್ಡ ಚಿಂತೆ ಎಂಬುದು ವಿಶೇಷ.

ಇಲ್ಲಿ ಟೀಮ್ ಇಂಡಿಯಾದ ಚಿಂತೆಗೆ ಕಾರಣವಾಗಿರುವುದು ಆರಂಭಿಕರ ಪ್ರದರ್ಶನ. ಅಂದರೆ ಭಾರತ ತಂಡವು ಈ ಬಾರಿಯ ವಿಶ್ವಕಪ್​ನಲ್ಲಿ ಆರಂಭಿಕರಿಬ್ಬರಿಂದ ಉತ್ತಮ ಜೊತೆಯಾಟದ ಆರಂಭವನ್ನೇ ಪಡೆದಿಲ್ಲ. ಇದಕ್ಕೆ ಸಾಕ್ಷಿ ಈ ಕೆಳಗಿನ ಅಂಕಿ ಅಂಶಗಳು…

  • ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಭಾರತದ ಆರಂಭಿಕ ಜೋಡಿಯ ಸರಾಸರಿ ಕೇವಲ 16.37 ರಷ್ಟಿದೆ. ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ಜೋಡಿಯು ಈ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ.
  • ಸಂಜು ಸ್ಯಾಮ್ಸನ್ ಆರಂಭಿಕನಾಗಿ ಯಶಸ್ಸು ಸಾಧಿಸಿದರೂ ಅಭಿಷೇಕ್ ಶರ್ಮಾ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ.
  • ಟೀಮ್ ಇಂಡಿಯಾದ ಆರಂಭಿಕ ಜೋಡಿಯು ಬೇಗನೆ ಬೇರ್ಪಡುತ್ತಿರುವುದೇ ಇದೀಗ ಭಾರತ ತಂಡದ ಚಿಂತೆಗೆ ಕಾರಣವಾಗಿದೆ.

ಇದೇ ವೇಳೆ ನ್ಯೂಝಿಲೆಂಡ್ ತಂಡದ ಬಲವೇ ಅವರ ಆರಂಭಿಕ ಜೋಡಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ಜೋಡಿಯು ಟೂರ್ನಿಯುದ್ದಕ್ಕೂ ಪ್ರಚಂಡ ಜೊತೆಯಾಟ ಪ್ರದರ್ಶಿಸಿದ್ದಾರೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇನ್ನು ಟಿಮ್ ಸೈಫರ್ಟ್ ಹಾಗೂ ಫಿನ್ ಅಲೆನ್ ಅವರ ಸರಾಸರಿ ನೋಡುವುದಾದರೆ…

  • ಈ ಟೂರ್ನಿಯಲ್ಲಿ ಕಿವೀಸ್ ಆರಂಭಿಕ ಜೋಡಿಯ  77.16 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅಂದರೆ ಮೊದಲ ವಿಕೆಟ್​ಗೆ ಫಿನ್ ಅಲೆನ್ ಮತ್ತು ಟಿಮ್ ಸೈಫರ್ಟ್​ ಅರ್ಧಶತಕದ ಜೊತೆಯಾಟವಾಡುತ್ತಾ ಬಂದಿದ್ದಾರೆ.
  • ಈ ಜೋಡಿಯು ಪವರ್​ಪ್ಲೇನಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸಿ ನ್ಯೂಝಿಲೆಂಡ್‌ಗೆ ಬಲಿಷ್ಠ ಅಡಿಪಾಯ ಹಾಕಿಕೊಟ್ಟಿದೆ.
  • ಫೈನಲ್ ಪಂದ್ಯದಲ್ಲಿ ಈ ಇಬ್ಬರಲ್ಲಿ ಒಬ್ಬರು ಕ್ರೀಸ್ ಕಚ್ಚಿ ನಿಂತರೂ ಟೀಮ್ ಇಂಡಿಯಾಗೆ ಅಪಾಯ ಕಟ್ಟಿಟ್ಟ ಬುತ್ತಿ.

ಇತ್ತೀಚಿನ ಪ್ರಮುಖ ಅಂಕಿಅಂಶಗಳು:

  • ಫಿನ್ ಅಲೆನ್ ಟೀಮ್ ಇಂಡಿಯಾ ವಿರುದ್ಧದ ಇತ್ತೀಚಿನ ಸರಣಿಯಲ್ಲಿ 80.00 ಸರಾಸರಿಯಲ್ಲಿ ರನ್​ಗಳಿಸಿದ್ದಾರೆ.
  • ಇಶಾನ್ ಕಿಶನ್ ನ್ಯೂಝಿಲೆಂಡ್ ವಿರುದ್ಧ 53.75 ಸರಾಸರಿ ಹೊಂದಿದ್ದಾರೆ.
  • ಅಭಿಷೇಕ್ ಶರ್ಮಾ ನ್ಯೂಝಿಲೆಂಡ್​ ವಿರುದ್ಧ 45.50 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.
  • ಸಂಜು ಸ್ಯಾಮ್ಸನ್ ನ್ಯೂಝಿಲೆಂಡ್​ ವಿರುದ್ಧ 39.00 ಸರಾಸರಿ ಮಾತ್ರ ಹೊಂದಿದ್ದಾರೆ.

ಇದನ್ನೂ ಓದಿ: ಸೋಲಿನ ಪಾಠ… ಫೈನಲ್ ಪಂದ್ಯಕ್ಕೆ ಕೆಂಪು ಮತ್ತು ಕಪ್ಪು ಮಣ್ಣಿನ ಪಿಚ್​!

ಅಂದರೆ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯದಲ್ಲಿ ಫಿನ್ ಅಲೆನ್ ಕಡೆಯಿಂದ ಪ್ರಚಂಡ ಪ್ರದರ್ಶನವನ್ನು ನಿರೀಕ್ಷಿಸಬಹುದು. ಇತ್ತ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕೂಡ ಕಿವೀಸ್ ವಿರುದ್ಧ ಉತ್ತಮ ಸರಾಸರಿ ಹೊಂದಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಯಾರು ಅಬ್ಬರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Follow Us
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್
ಹಾಸನ ಜಿಲ್ಲೆಯಲ್ಲಿ ಗಾಳಿ ಮಳೆಯಿಂದ ಭಾರಿ ಅವಾಂತರ, ವಿಡಿಯೋ ನೋಡಿ
ಹಾಸನ ಜಿಲ್ಲೆಯಲ್ಲಿ ಗಾಳಿ ಮಳೆಯಿಂದ ಭಾರಿ ಅವಾಂತರ, ವಿಡಿಯೋ ನೋಡಿ
ಬಿಜೆಪಿಗೆ ಸಪೋರ್ಟ್‌, SDPIಗೆ ಹಣ ನೀಡಿದ ವಿಡಿಯೋ ಇದೆ ಎಂದ ಕೈ ನಾಯಕ
ಬಿಜೆಪಿಗೆ ಸಪೋರ್ಟ್‌, SDPIಗೆ ಹಣ ನೀಡಿದ ವಿಡಿಯೋ ಇದೆ ಎಂದ ಕೈ ನಾಯಕ
ರಾತ್ರಿ ವೇಳೆಯೂ ಉಷ್ಣ ಅಲೆ, ಹೆಚ್ಚಲಿದೆ ತಾಪಮಾನ: ಹವಾಮಾನ ತಜ್ಞ ಮುನ್ಸೂಚನೆ
ರಾತ್ರಿ ವೇಳೆಯೂ ಉಷ್ಣ ಅಲೆ, ಹೆಚ್ಚಲಿದೆ ತಾಪಮಾನ: ಹವಾಮಾನ ತಜ್ಞ ಮುನ್ಸೂಚನೆ
ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ!
ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ!
ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು!
ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು!
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!