AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇರಾ ಫೇರಿ ನಿರ್ಮಾಪಕರಿಂದ ಅಪಮಾನ; ನಿರ್ದೇಶಕ ಪ್ರಿಯದರ್ಶನ್ ಬೇಸರ

ಬಾಲಿವುಡ್‌ನ ಐಕಾನಿಕ್ ಕಾಮಿಡಿ ಚಿತ್ರ 'ಹೇರಾ ಫೇರಿ 3' ಚಿತ್ರದ ನಿರ್ದೇಶನದಿಂದ ಪ್ರಿಯದರ್ಶನ್ ಹೊರನಡೆದಿದ್ದಾರೆ. ನಿರ್ಮಾಪಕ ಫಿರೋಜ್ ನಡಿಯಾಡ್ವಾಲಾ ತಮಗೆ ಮಾಡಿದ ಅಪಮಾನಗಳೇ ಇದಕ್ಕೆ ಕಾರಣ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಇದರೊಂದಿಗೆ, ಹಕ್ಕುಗಳ ವಿಚಾರವಾಗಿ ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಕಾನೂನು ಹೋರಾಟದಿಂದಾಗಿ ಈ ಸಿನಿಮಾ ಸದ್ಯಕ್ಕೆ ಸೆಟ್ಟೇರುವುದು ಅನುಮಾನ ಎನ್ನಲಾಗಿದೆ.

ಹೇರಾ ಫೇರಿ ನಿರ್ಮಾಪಕರಿಂದ ಅಪಮಾನ; ನಿರ್ದೇಶಕ ಪ್ರಿಯದರ್ಶನ್ ಬೇಸರ
ಹೇರಾ ಫೇರಿ
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 04, 2026 | 11:11 AM

Share

ಮುಖ್ಯಾಂಶಗಳು

  • ಪ್ರಿಯದರ್ಶನ್ ಜೊತೆ ಸಿನಿಮಾ ಮಾಡದಂತೆ ಅಕ್ಷಯ್ ಕುಮಾರ್‌ಗೆ ಹೇಳಿದ್ದ ನಿರ್ಮಾಪಕ ಫಿರೋಜ್ ನಡಿಯಾಡ್ವಾಲಾ
  • ಅಕ್ಷಯ್, ಸುನಿಲ್ ಶೆಟ್ಟಿ ಹಾಗೂ ಪರೇಶ್ ರಾವಲ್ ಆಸೆಪಟ್ಟರೂ ಕೈಬಿಡಬೇಕಾಗಿ ಬಂದ ‘ಹೇರಾ ಫೇರಿ 3’ ಕನಸು
  • ಕೋರ್ಟ್ ಮೆಟ್ಟಿಲೇರಿದ ದಕ್ಷಿಣ ಭಾರತದ ಪ್ರೊಡಕ್ಷನ್ ಹೌಸ್; ಸಿನಿಮಾ ಹಕ್ಕುಗಳ ಕಾನೂನು ಹೋರಾಟದ ಅಸಲಿ ಕಥೆ

‘ಹೇರಾ ಫೇರಿ 3’ ಸಿನಿಮಾಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಚಿತ್ರದ ನಿರ್ದೇಶನದಿಂದ ಪ್ರಿಯದರ್ಶನ್ ಹೊರನಡೆದಿದ್ದಾರೆ. ಕಾನೂನು ಸಂಘರ್ಷಗಳ ಕಾರಣದಿಂದ ಈ ಸಿನಿಮಾ ಥಿಯೇಟರ್‌ಗೆ ಬರುವುದು ಅನುಮಾನ ಎಂದು ಅವರು ಹೇಳಿದ್ದಾರೆ. ಈಗ ಅವರು ನಿರ್ಮಾಪಕ ಫಿರೋಜ್ ನಡಿಯಾಡ್ವಾಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪ್ರಿಯದರ್ಶನ್ ಜೊತೆ ಸಿನಿಮಾ ಮಾಡಬೇಡಿ ಎಂದಿದ್ದ ನಿರ್ಮಾಪಕ

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯದರ್ಶನ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಿರ್ಮಾಪಕ ಫಿರೋಜ್ ತಮಗೆ ಹಲವು ಬಾರಿ ಅಪಮಾನ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ‘ಪ್ರಿಯದರ್ಶನ್ ಜೊತೆ ಎಂದಿಗೂ ಹೇರಾ ಫೇರಿ 3 ಮಾಡಬೇಡಿ ಎಂದು ಫಿರೋಜ್ ಅವರು ಅಕ್ಷಯ್ ಕುಮಾರ್‌ಗೆ ಹೇಳಿದ್ದರು. ನಾನು ಮಾಡಿದ ಮೊದಲ ಭಾಗದ ಎಡಿಟಿಂಗ್ ಕಳಪೆಯಾಗಿತ್ತು ಎಂದು ಫಿರೋಜ್ ಟೀಕಿಸಿದ್ದರು. ನಾನು ಮಾಡಿದ 5 ಗಂಟೆಯ ಸಿನಿಮಾವನ್ನು ತಾವೇ ಎಡಿಟ್ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದರು’ ಎಂದು ಪ್ರಿಯದರ್ಶನ್ ನೆನಪಿಸಿಕೊಂಡಿದ್ದಾರೆ.

ದೊಡ್ಡ ಸಿನಿಮಾ ಮಾಡುವ ಆಸೆ ಇತ್ತು

ಈ ಫ್ರಾಂಚೈಸಿಯನ್ನು ದೇಶದ ದೊಡ್ಡ ಸಿನಿಮಾವನ್ನಾಗಿ ಮಾಡುವ ಆಸೆ ತಮಗಿತ್ತು ಎಂದು ಪ್ರಿಯದರ್ಶನ್ ಹೇಳಿದ್ದಾರೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅವರ ಕೋರಿಕೆಯ ಮೇರೆಗೆ ಅವರು ಮೂರನೇ ಭಾಗಕ್ಕೆ ಒಪ್ಪಿಕೊಂಡಿದ್ದರು. ಕಥೆ ಕೇಳಿ ನಟರೆಲ್ಲರೂ ಉತ್ಸುಕರಾಗಿದ್ದರು. ಆದರೆ ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ಸೆಟ್ಟೇರುವುದು ಕಷ್ಟ ಎಂದು ಪ್ರಿಯದರ್ಶನ್ ತಿಳಿಸಿದ್ದಾರೆ. ತಾವಿಲ್ಲದಿದ್ದರೂ ಪರವಾಗಿಲ್ಲ, ಆದರೆ ಕಾನೂನು ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಸಿನಿಮಾ ಬರುವುದು ಅನುಮಾನ ಎಂದಿದ್ದಾರೆ.

ಇದನ್ನೂ ಓದಿ: ‘ಹೇರಾ ಫೇರಿ 3’ ಚಿತ್ರ ಸೆಟ್ಟೇರೋದೇ ಡೌಟ್; ಅಕ್ಷಯ್ ಜೊತೆ ಬೇರೆ ಸಿನಿಮಾ ಶುರು

‘ಹೇರಾ ಫೇರಿ 3’ ಚಿತ್ರಕ್ಕೆ ಕಾಡುತ್ತಿರುವ ಸಮಸ್ಯೆಗಳೇನು?

ಈ ಸಿನಿಮಾದ ಹಕ್ಕುಗಳ ವಿಚಾರವಾಗಿ ಸದ್ಯ ಕಾನೂನು ಹೋರಾಟ ನಡೆಯುತ್ತಿದೆ. ದಕ್ಷಿಣ ಭಾರತದ ಪ್ರೊಡಕ್ಷನ್ ಹೌಸ್ ‘ಸೆವೆನ್ ಆರ್ಟ್ಸ್ ಇಂಟರ್ನ್ಯಾಷನಲ್’ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ಫಿರೋಜ್ ನಡಿಯಾಡ್ವಾಲಾ ಅವರಿಗೆ ಕೇವಲ ಮಲಯಾಳಂನ ‘ರಾಮ್‌ಜೀ ರಾವ್ ಸ್ಪೀಕಿಂಗ್’ ಚಿತ್ರವನ್ನು ರಿಮೇಕ್ ಮಾಡಲು ಮಾತ್ರ ಹಕ್ಕು ಇತ್ತು ಎಂದು ಸಂಸ್ಥೆ ವಾದಿಸಿದೆ. ಆದರೆ ನಿರ್ಮಾಪಕರು ನಿಯಮ ಮೀರಿ ಎರಡನೇ ಭಾಗ ಮಾಡಿದರು. ಈಗ ಮೂರನೇ ಭಾಗದ ಹಕ್ಕನ್ನು ಅಕ್ಷಯ್ ಕುಮಾರ್ ಅವರ ಸಂಸ್ಥೆಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:11 am, Sat, 4 July 26

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ