AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BS6 ವಾಹನ ಸವಾರರಿಗೆ ಗುಡ್ ನ್ಯೂಸ್: ಇನ್ಮುಂದೆ ವರ್ಷಕ್ಕೊಮ್ಮೆ ಅಲ್ಲ, ಮೂರು ವರ್ಷಕ್ಕೊಮ್ಮೆ ಪೊಲ್ಯೂಷನ್ ಸರ್ಟಿಫಿಕೇಟ್ ಸಾಕಾಗಬಹುದು!

BS6 ಖಾಸಗಿ ವಾಹನಗಳ ಮಾಲಿನ್ಯ ಪ್ರಮಾಣಪತ್ರ ಅಥವಾ ಪೊಲ್ಯೂಷನ್ ಸರ್ಟಿಫಿಕೇಟ್ ಮಾನ್ಯತೆಯನ್ನು ಒಂದು ವರ್ಷದ ಬದಲು ಮೂರು ವರ್ಷಗಳಿಗೆ ವಿಸ್ತರಿಸುವ ಕರಡು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಆದರೆ ಇದು ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಒಂದು ವೇಳೆ ಅಂತಿಮಗೊಂಡರೆ, ಲಕ್ಷಾಂತರ ವಾಹನ ಮಾಲೀಕರಿಗೆ 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಮಾಲಿನ್ಯ ಪರೀಕ್ಷೆ ಮಾಡಿಸುವುದು ತಪ್ಪಲಿದೆ.

BS6 ವಾಹನ ಸವಾರರಿಗೆ ಗುಡ್ ನ್ಯೂಸ್: ಇನ್ಮುಂದೆ ವರ್ಷಕ್ಕೊಮ್ಮೆ ಅಲ್ಲ, ಮೂರು ವರ್ಷಕ್ಕೊಮ್ಮೆ ಪೊಲ್ಯೂಷನ್ ಸರ್ಟಿಫಿಕೇಟ್ ಸಾಕಾಗಬಹುದು!
ಸಾಂದರ್ಭಿಕ ಚಿತ್ರImage Credit source: PTI
ಗಣಪತಿ ಶರ್ಮಾ
|

Updated on: Jul 28, 2026 | 1:43 PM

Share

ಮುಖ್ಯಾಂಶಗಳು

  • BS6 ವಾಹನಗಳಿಗೆ ಪೊಲ್ಯೂಷನ್ ಸರ್ಟಿಫಿಕೇಟ್ ಮಾನ್ಯತೆ ಅವಧಿ ವಿಸ್ತರಣೆ?
  • ಆರು ವರ್ಷಕ್ಕಿಂತ ಕಡಿಮೆ ವಾಹನಗಳಿಗೆ ಸಡಿಲಿಕೆ
  • ಹಳೆಯ ವಾಹನಗಳಿಗೆ ಕಟ್ಟುನಿಟ್ಟಿನ ನಿಯಮ ಪ್ರಸ್ತಾವನೆ

ನವದೆಹಲಿ, ಜುಲೈ 28: ದೇಶದ ಲಕ್ಷಾಂತರ ಕಾರು ಮತ್ತು ದ್ವಿಚಕ್ರ ವಾಹನ ಮಾಲೀಕರಿಗೆ ಗುಡ್ ನ್ಯೂಸ್ ನೀಡುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಹೊಸ ಪ್ರಸ್ತಾವನೆ ಮುಂದಿಟ್ಟಿದೆ. BS6 (ಭಾರತ್ ಸ್ಟೇಜ್-6) ಖಾಸಗಿ ವಾಹನಗಳಿಗೆ ನೀಡುವ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ (PUC/PUCC) ಅಥವಾ ಮಾಲಿನ್ಯ ಪ್ರಮಾಣಪತ್ರ ನವೀಕರಣ ಅವಧಿಯನ್ನು ಈಗಿನ ಒಂದು ವರ್ಷದ ಬದಲು ಮೂರು ವರ್ಷಗಳಿಗೆ ವಿಸ್ತರಿಸುವ ಕರಡು ಅಧಿಸೂಚನೆಯನ್ನು ಸಚಿವಾಲಯ ಪ್ರಕಟಿಸಿದೆ.

ಪ್ರಸ್ತಾವನೆ ಅಂತಿಮಗೊಂಡರೆ, ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ BS6 ವಾಹನಗಳು ಪ್ರತಿವರ್ಷ ಪೊಲ್ಯೂಷನ್ ಸರ್ಟಿಫಿಕೇಟ್ ಮಾಡಿಸಬೇಕಾದ ಅಗತ್ಯ ಇರುವುದಿಲ್ಲ. ಬದಲಾಗಿ ಮೂರು ವರ್ಷಕ್ಕೊಮ್ಮೆ ಪರೀಕ್ಷೆ ನಡೆಸಿದರೆ ಸಾಕಾಗಲಿದೆ. ಇದರಿಂದ ವಾಹನ ಮಾಲೀಕರಿಗೆ ಸಮಯ ಮತ್ತು ವೆಚ್ಚ ಎರಡರಲ್ಲೂ ಅನುಕೂಲ ಆಗಲಿದೆ.

BS6 ವಾಹನಗಳಿಗೆ ವಯಸ್ಸಿನ ಆಧಾರದ ಮೇಲೆ ಹೊಸ ನಿಯಮಗಳು

ಕರಡು ಅಧಿಸೂಚನೆಯ ಪ್ರಕಾರ, BS6 ವಾಹನಗಳಿಗೆ ವಯಸ್ಸಿನ ಆಧಾರದ ಮೇಲೆ ಪೊಲ್ಯೂಷನ್ ಸರ್ಟಿಫಿಕೇಟ್ ನವೀಕರಣ ಅವಧಿಯನ್ನು ನಿಗದಿಪಡಿಸಲು ಪ್ರಸ್ತಾಪಿಸಲಾಗಿದೆ.

  • 6 ವರ್ಷಗಳೊಳಗಿನ BS6 ವಾಹನಗಳು: ಮೂರು ವರ್ಷಕ್ಕೊಮ್ಮೆ ಮಾಲಿನ್ಯ ಪರೀಕ್ಷೆ.
  • 6 ರಿಂದ 10 ವರ್ಷ ವಯಸ್ಸಿನ BS6 ವಾಹನಗಳು: ವರ್ಷಕ್ಕೊಮ್ಮೆ ಪೊಲ್ಯೂಷನ್ ಸರ್ಟಿಫಿಕೇಟ್ ನವೀಕರಣ ಕಡ್ಡಾಯ.
  • 10 ವರ್ಷಕ್ಕಿಂತ ಹಳೆಯ BS6 ವಾಹನಗಳು: ಪ್ರತಿ ಆರು ತಿಂಗಳಿಗೊಮ್ಮೆ ಮಾಲಿನ್ಯ ಪರೀಕ್ಷೆ.

ಹಳೆಯ ವಾಹನಗಳಿಗೆ ಕಠಿಣ ನಿಯಮ

BS6 ವಾಹನಗಳಿಗೆ ಸಡಿಲಿಕೆ ನೀಡುವ ಪ್ರಸ್ತಾವನೆಯ ಜೊತೆಗೆ, ಹೆಚ್ಚು ಮಾಲಿನ್ಯ ಉಂಟುಮಾಡುವ ಹಳೆಯ ವಾಹನಗಳಿಗೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಕರಡು ಅಧಿಸೂಚನೆ ಸೂಚಿಸಿದೆ.

  • BS4 ವಾಹನಗಳು: ಪ್ರತಿ ಆರು ತಿಂಗಳಿಗೊಮ್ಮೆ ಮಾಲಿನ್ಯ ಪರೀಕ್ಷೆ ಕಡ್ಡಾಯ.
  • BS1, BS2 ಮತ್ತು BS3 ವಾಹನಗಳು: ಪ್ರತಿ ಮೂರು ತಿಂಗಳಿಗೊಮ್ಮೆ ಮಾಲಿನ್ಯ ಪರೀಕ್ಷೆ ನಡೆಸಬೇಕು ಎಂಬ ಪ್ರಸ್ತಾವನೆ ಇದೆ.

BS6 ವಾಹನ ಎಂದರೇನು?

BS (Bharat Stage) ಎನ್ನುವುದು ಭಾರತದಲ್ಲಿ ವಾಹನಗಳ ಹೊರಸೂಸುವ ಹೊಗೆ ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಜಾರಿಗೊಳಿಸಿರುವ ಹೊರಸೂಸುವಿಕೆ ಮಾನದಂಡವಾಗಿದೆ. ಕಾರ್ಬನ್ ಮಾನಾಕ್ಸೈಡ್, ನೈಟ್ರೋಜನ್ ಆಕ್ಸೈಡ್, ಹೈಡ್ರೋಕಾರ್ಬನ್ ಮತ್ತು ಕಣಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಮಾನದಂಡ ಜಾರಿಯಲ್ಲಿದೆ.

ಭಾರತದಲ್ಲಿ 2020ರ ಏಪ್ರಿಲ್‌ನಿಂದ BS6 ಮಾನದಂಡ ಜಾರಿಗೆ ಬಂದಿದೆ. ದೇಶವು BS5 ಹಂತವನ್ನು ಬಿಟ್ಟು ನೇರವಾಗಿ BS6 ಜಾರಿಗೆ ತಂದಿದ್ದು, ಕಡಿಮೆ ಸಲ್ಫರ್ ಇರುವ ಇಂಧನ ಬಳಕೆ ಮತ್ತು ಕಡಿಮೆ ಮಾಲಿನ್ಯ ಹೊರಸೂಸುವಿಕೆಗೆ ಇದು ನೆರವಾಗಿದೆ.

ಮಾಲಿನ್ಯ ಪರೀಕ್ಷೆ ಅವಧಿ ವಿಸ್ತರಣೆ: ಇನ್ನೂ ಅಂತಿಮ ನಿರ್ಧಾರವಾಗಿಲ್ಲ

ಸದ್ಯ ಇದು ಕರಡು ಪ್ರಸ್ತಾವನೆ ಮಾತ್ರ. ಸಾರ್ವಜನಿಕರು ಮತ್ತು ಸಂಬಂಧಿತ ವಲಯಗಳಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಅವುಗಳನ್ನು ಪರಿಶೀಲಿಸಿದ ಬಳಿಕ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿದೆ. ಪ್ರಸ್ತಾವನೆ ಯಥಾವತ್ತಾಗಿ ಜಾರಿಯಾದರೆ, ದೇಶದ ಲಕ್ಷಾಂತರ BS6 ವಾಹನ ಮಾಲೀಕರಿಗೆ ಪ್ರತಿವರ್ಷ ಮಾಲಿನ್ಯ ಪರೀಕ್ಷೆ ಮಾಡಿಸುವ ತೊಂದರೆ ತಪ್ಪಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!