AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಲ್ಲಾ ಹೇಳಿಕೆ ವಿವಾದ: ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೆಯುತ್ತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ

ಮುಲ್ಲಾ ಹೇಳಿಕೆ ವಿವಾದ: ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೆಯುತ್ತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Jul 28, 2026 | 9:59 AM

Share

ಸಿಟಿ ರವಿ ಅವರ ಮುಲ್ಲಾಗಳು ಅನಕ್ಷರಸ್ಥರು ಎಂಬ ಹೇಳಿಕೆಗೆ ಮುಸ್ಲಿಂ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಚಿಕ್ಕಮಗಳೂರಿನಲ್ಲಿ ಎಸ್.ಡಿ.ಪಿ.ಐ. ಮುಖಂಡ ಅತೀಕ್ ಮಾತನಾಡಿ, ಸಿ.ಟಿ. ರವಿ ಮುಸಲ್ಮಾನರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮುಲ್ಲಾಗಳು ಅನಕ್ಷರಸ್ಥರಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇಂತಹ ಮಾತು ಮುಂದುವರಿದರೆ ಸಿ.ಟಿ. ರವಿ ಚಿಕ್ಕಮಗಳೂರಿಗೆ ಪ್ರವೇಶಿಸದಂತೆ ತಡೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚಿಕ್ಕಮಗಳೂರು, ಜುಲೈ 28: ‘ಮುಲ್ಲಾಗಳಿಗೆ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ’ ಎಂಬ ಬಿಜೆಪಿ ಎಂಎಲ್​​ಸಿ ಸಿಟಿ ರವಿ ಹೇಳಿಕೆಯನ್ನು ಮುಸ್ಲಿಂ ನಾಯಕರು ಖಂಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಎಸ್.ಡಿ.ಪಿ.ಐ. ಮುಖಂಡ ಅತೀಕ್ ಮಾತನಾಡಿ, ಮುಸಲ್ಮಾನರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಸಿಟಿ ರವಿಗೆ ಆಗ್ರಹಿಸಿದ್ದಾರೆ. ಮುಲ್ಲಾಗಳು ಯಾರೂ ಅನಕ್ಷರಸ್ಥರಲ್ಲ ಎಂದು ಸ್ಪಷ್ಟಪಡಿಸಿದ ಅತೀಕ್, ಪ್ರತಿಯೊಬ್ಬರೂ ಶಿಕ್ಷಿತರು ಮತ್ತು ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು. ದೇಶದ ಅಭಿವೃದ್ಧಿಗೆ ಮುಸ್ಲಿಂ ಸಮುದಾಯದ ಕೊಡುಗೆಯನ್ನು ಉಲ್ಲೇಖಿಸಿದ ಅವರು, ಬಿಳಿ ಕೂದಲಿನ ರಾಜಕೀಯ ಈಗ ನಡೆಯುವುದಿಲ್ಲ ಎಂದು ತಿಳಿಸಿದರು.

ಮುಂದೆ ಯಾವುದೇ ಭಾಷಣ ಮಾಡುವ ಮುನ್ನ ಯೋಚಿಸಿ ಮಾತನಾಡಬೇಕು. ಇಂತಹ ಮಾತು ಮುಂದುವರಿದರೆ, ಮುಸ್ಲಿಂ ಸಮುದಾಯ ಒಟ್ಟಾಗಿ ಸಿ.ಟಿ. ರವಿ ಅವರು ಚಿಕ್ಕಮಗಳೂರಿಗೆ ಪ್ರವೇಶಿಸದಂತೆ ತಡೆಯಲಿದೆ ಎಂದು ಅತೀಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ನೇರ ಚರ್ಚೆಗೆ ಬರುವಂತೆ ಸಿ.ಟಿ. ರವಿಗೆ ಸವಾಲು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us