ಮಳೆ ಅಭಾವಕ್ಕೆ ತುಮಕೂರು ಮಂದಿ ಕಂಗಾಲು: ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ತುಮಕೂರು ಜಿಲ್ಲೆಯಲ್ಲಿ ಮಳೆ ಇಲ್ಲದೆ ಭಾರಿ ಬರಗಾಲ ಆವರಿಸಿದೆ. ಒಟ್ಟು 2,047 ಕೆರೆಗಳ ಪೈಕಿ 300ಕ್ಕೂ ಹೆಚ್ಚು ದೊಡ್ಡ ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಉಳಿದ ಕೆರೆಗಳಲ್ಲೂ ನೀರು ಡೆಡ್ ಸ್ಟೋರೇಜ್ ಮಟ್ಟ ತಲುಪಿದ್ದು, ಜನ, ಜಾನುವಾರು ಮತ್ತು ವನ್ಯಜೀವಿಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ರೈತರು ಭಾರಿ ಸಂಕಷ್ಟದಲ್ಲಿದ್ದು, ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ತುಮಕೂರು, ಜುಲೈ 28: ಮಳೆ ಕೊರತೆಯಿಂದಾಗಿ ತುಮಕೂರಿನ ಒಟ್ಟು 2,047 ಕೆರೆಗಳ ಪೈಕಿ 400 ದೊಡ್ಡ ಕೆರೆಗಳಲ್ಲಿ 300ಕ್ಕೂ ಹೆಚ್ಚು ಕೆರೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಉಳಿದ 100 ಕೆರೆಗಳಲ್ಲೂ ನೀರು ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿರುವುದು ಆತಂಕ ಮೂಡಿಸಿದೆ. ಹೀಗಾಗಿ ಜನ, ಜಾನುವಾರು ಹಾಗೂ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿಲ್ಲದೆ ತೀವ್ರ ಪರದಾಟ ಉಂಟಾಗಿದೆ. ರೈತರು ತಮ್ಮ ತೆಂಗು ಮತ್ತು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಮಳ್ಳೂರು ಕೆರೆ, ಮರಳೂರು ದಿಣ್ಣೆ ಕೆರೆಯಂತಹ ಪ್ರಮುಖ ಜಲಮೂಲಗಳೂ ಬತ್ತಿ ಹೋಗಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jul 28, 2026 12:51 PM
Follow Us

