ವಿಧಾನಸಭಾ ಚುನಾವಣೆಗಳಲ್ಲಿ ಹಿನ್ನಡೆ ಬಗ್ಗೆ ಗಂಭೀರ  ಅವಲೋಕನ ನಡೆಸಬೇಕಿದೆ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ

|

Updated on: May 10, 2021 | 2:21 PM

Congress Working Committee Meeting: ಇದೀಗ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನ ಕುರಿತು ಗಂಭೀರ ಆತ್ಮಾವಲೋಕನ ಮಾಡಲು ಉನ್ನತ ಕಾಂಗ್ರೆಸ್ ಸಂಸ್ಥೆಯ ಸಭೆ ಕರೆಯಲಾಗಿದೆ.

ವಿಧಾನಸಭಾ ಚುನಾವಣೆಗಳಲ್ಲಿ ಹಿನ್ನಡೆ ಬಗ್ಗೆ ಗಂಭೀರ  ಅವಲೋಕನ ನಡೆಸಬೇಕಿದೆ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
Follow us on

ದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎದುರಿಸುತ್ತಿರುವ ಗಂಭೀರ ಹಿನ್ನಡೆಗಳನ್ನು ಗಮನಿಸಬೇಕು ಮತ್ತು ಸರಿಯಾದ ಪಾಠ ಕಲಿಯಲು ವಾಸ್ತವವನ್ನು ಎದುರಿಸಬೇಕಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ನಿರ್ಣಾಯಕ ಸಭೆಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ಇಂತಹ ಹಿನ್ನಡೆಗಳಿಗೆ ಕಾರಣವಾಗುವ ಪ್ರತಿಯೊಂದು ಅಂಶಗಳನ್ನು ಗಮನಿಸಲು ಒಂದು ಸಣ್ಣ ಗುಂಪನ್ನು ಸ್ಥಾಪಿಸಲು ಉದ್ದೇಶಿಸಿದೆ ಎಂದು ಹೇಳಿದರು.

ಇದೀಗ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನ ಕುರಿತು ಗಂಭೀರ ಆತ್ಮಾವಲೋಕನ ಮಾಡಲು ಉನ್ನತ ಕಾಂಗ್ರೆಸ್ ಸಂಸ್ಥೆಯ ಸಭೆ ಕರೆಯಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪ್ರದರ್ಶನ ಕಳಪೆಯಾಗಿತ್ತು. ಪುದುಚೇರಿಯನ್ನು ಅಧಿಕಾರ ಕಳೆದುಕೊಳ್ಳುವುದರ ಜೊತೆಗೆ ಕೇರಳ ಮತ್ತು ಅಸ್ಸಾಂನಲ್ಲಿ ಅಧಿಕಾರವನ್ನು ಮರಳಿ ಪಡೆಯಲು ವಿಫಲವಾಗಿದೆ.

ಕಾಂಗ್ರೆಸ್ ಪಕ್ಷವು ತನ್ನ ಮಿತ್ರ ಪಕ್ಷವಾದ ಡಿಎಂಕೆ ಸಹಾಯದಿಂದ ತಮಿಳುನಾಡಿನಲ್ಲಿ ಮಾತ್ರ ಅಧಿಕಾರಕ್ಕೆ ಬಂದಿದೆ
ನಮ್ಮ ಗಂಭೀರ ಹಿನ್ನಡೆಗಳನ್ನು ನಾವು ಗಮನಿಸಬೇಕು. ನಾವು ತೀವ್ರ ನಿರಾಶೆಗೊಂಡಿದ್ದೇವೆ. ಈ ರೀತಿಯ ಹಿನ್ನಡೆಗಳಿಗೆ  ಕಾರಣವಾದ ಪ್ರತಿಯೊಂದು ಅಂಶವನ್ನು ನೋಡಲು ಮತ್ತು ಶೀಘ್ರವಾಗಿ ವರದಿ ಮಾಡಲು ಒಂದು ಸಣ್ಣ ಗುಂಪನ್ನು ಸ್ಥಾಪಿಸಲು ನಾನು ಉದ್ದೇಶಿಸಿದ್ದೇನೆ ಎಂದು ಸಭೆಯ ಉದ್ಘಾಟನಾ ಭಾಷಣದಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ.

ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ವೇಗವಾಗಿ ವಿಸ್ತರಿಸುವುದು ಮತ್ತು ಯಾವುದೇ ಅರ್ಹ ನಾಗರಿಕರು ಹೊರಗುಳಿಯದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾದ ಅಗತ್ಯವಾಗಿದೆ. ಈ ಪ್ರಮುಖ ಮತ್ತು ತುರ್ತು ಕಾರ್ಯಗಳಲ್ಲಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡಲು ಕಾಂಗ್ರೆಸ್ ಸಿದ್ಧವಾಗಿದೆ ಎಂದು  ಸೋನಿಯಾ ಗಾಂಧಿ ಹೇಳಿದ್ದಾರೆ.


ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಚುನಾವಣೆಗಳ ಬಗ್ಗೆ ಕಾಂಗ್ರೆಸ್ ಈ ಸಭೆಯಲ್ಲಿ ಚರ್ಚಿಸಲಿದ್ದು, ಇಂದಿನ ಸಭೆಯ ಕೊನೆಯಲ್ಲಿ ಚುನಾವಣಾ ದಿನ ನಿಗದಿ ಪಡಿಸಲಾಗುವುದು ಎಂದಿದ್ದಾರೆ. ಕಳೆದ ವರ್ಷದಲ್ಲಿ ಹಿರಿಯ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಶಶಿ ತರೂರ್ ಮತ್ತು ಕಪಿಲ್ ಸಿಬಲ್ ಅವರು ಪೂರ್ಣ ಸಮಯ ಮತ್ತು ಪರಿಣಾಮಕಾರಿ ನಾಯಕತ್ವಕ್ಕೆ ಕರೆ ನೀಡಿದ್ದು ಅದು ಪ್ರಸ್ತುತ ಕ್ಷೇತ್ರದಲ್ಲಿ ಪ್ರತಿಫಲಿಸಿದೆ.

ಆಗಸ್ಟ್ 23 ರಲ್ಲಿ ಈ ನಾಯಕರು ಪಕ್ಷದ ಅವನತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಪಕ್ಷದ ಪುನರುಜ್ಜೀವನವು ರಾಷ್ಟ್ರ ಮತ್ತು ಪ್ರಜಾಪ್ರಭುತ್ವಕ್ಕೆ ಅವಶ್ಯಕವಾಗಿದೆ ಎಂದು ಹೇಳಿದರು. ಅಧಿಕಾರದ ವಿಕೇಂದ್ರೀಕರಣ, ರಾಜ್ಯ ಘಟಕಗಳ ಸಬಲೀಕರಣ ಮತ್ತು ಪ್ರತಿ ಹಂತದಲ್ಲೂ ಸಾಂಸ್ಥಿಕ ಚುನಾವಣೆಗಳು ಸೇರಿದಂತೆ ವ್ಯಾಪಕ ಸುಧಾರಣೆಗಳಿಗೆ ಅವರು ಕರೆ ನೀಡಿದ್ದರು. ಈ ಪತ್ರದಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ತಲೆದೋರಿದ್ದು ಏಳು ಗಂಟೆಗಳ ಕಾಲ ಕಾರ್ಯಕಾರಿ ಸಭೆ ನಡೆದಿತ್ತು.

ಇದನ್ನೂ ಓದಿ:  ಕೊವಿಡ್ ನಿಭಾಯಿಸಲು ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯಿಂದ 6 ಸಲಹೆ

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ​ ಸಾಧನೆಯಿಂದ ಬೇಸರವಾಗಿದೆ: ಸೋನಿಯಾ ಗಾಂಧಿ

 

Published On - 1:55 pm, Mon, 10 May 21