AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಬಿ ಮಾರಾಟ ಋತುವಿನಲ್ಲಿ ಹರ್ಯಾಣ ಮತ್ತು ಪಂಜಾಬ್​ನಲ್ಲಿ ಗೋಧಿ ಸಂಗ್ರಹಣೆ ಹೆಚ್ಚಳ

Wheat Procurement: 80 ಲಕ್ಷ ಟನ್ ಗೋಧಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದ್ದು, ಶನಿವಾರದವರೆಗೆ ಒಟ್ಟು ಸಂಗ್ರಹವು ಸುಮಾರು 81 ಲಕ್ಷ ಟನ್ ಇದೆ ಅಂತಿವೆ ಅಂಕಿ ಅಂಶಗಳು . ಪಂಜಾಬ್‌ನ ಬಗ್ಗೆ ಹೇಳುವುದಾದರೆ ಇದುವರೆಗಿನ ಒಟ್ಟು ಸಂಗ್ರಹವು 128 ಲಕ್ಷ ಟನ್‌ಗಳಷ್ಟಿದೆ. 130 ಲಕ್ಷ ಟನ್‌ಗಳ ಗುರಿ ಕೇಂದ್ರ ನಿಗದಿ ಪಡಿಸಿದೆ. ಆದರೆ 135 ಲಕ್ಷ ಟನ್‌ಗಳ ಗುರಿಯಿರುವ ಮಧ್ಯಪ್ರದೇಶದಲ್ಲಿ ಸಂಗ್ರಹವು ಸುಮಾರು 94 ಲಕ್ಷ ಟನ್‌ಗಳಷ್ಟಿದೆ.

ರಾಬಿ ಮಾರಾಟ ಋತುವಿನಲ್ಲಿ ಹರ್ಯಾಣ ಮತ್ತು ಪಂಜಾಬ್​ನಲ್ಲಿ ಗೋಧಿ ಸಂಗ್ರಹಣೆ  ಹೆಚ್ಚಳ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on: May 10, 2021 | 1:00 PM

Share

ದೆಹಲಿ: ರಾಬಿ ಮಾರಾಟ ಋತುವಿನಲ್ಲಿ (RMS)ಹರ್ಯಾಣದಲ್ಲಿ ಗೋಧಿ ಸಂಗ್ರಹಣೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಗುರಿಯನ್ನು ದಾಟಿದೆ. ಅದೇ ವೇಳೆ ಮುಂದಿನ ಎರಡು ದಿನಗಳಲ್ಲಿ ಪಂಜಾಬ್‌ನಲ್ಲಿ ಗೋಧಿ ಸಂಗ್ರಹಣೆಯು ನಿಗದಿತ ಗುರಿ ದಾಟಲಿದೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎಫ್‌ಸಿಐ) ಖರೀದಿ ಅಂಕಿಅಂಶಗಳ ಪ್ರಕಾರ, ಶನಿವಾರದವರೆಗೆ ಒಟ್ಟಾರೆ ಗೋಧಿ ಸಂಗ್ರಹವು 335 ಲಕ್ಷ ಟನ್‌ಗಳಷ್ಟಿತ್ತು, ಕಳೆದ ವರ್ಷ ಇದೇ ಅವಧಿಯಲ್ಲಿ 237 ಲಕ್ಷ ಟನ್‌ಗಳಿಗೆ ಹೋಲಿಸಿದರೆ ಇದು ಶೇ 41ರಷ್ಟು ಹೆಚ್ಚಾಗಿದೆ. 80 ಲಕ್ಷ ಟನ್ ಗೋಧಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದ್ದು, ಶನಿವಾರದವರೆಗೆ ಒಟ್ಟು ಸಂಗ್ರಹವು ಸುಮಾರು 81 ಲಕ್ಷ ಟನ್ ಇದೆ ಅಂತಿವೆ ಅಂಕಿ ಅಂಶಗಳು . ಪಂಜಾಬ್‌ನ ಬಗ್ಗೆ ಹೇಳುವುದಾದರೆ ಇದುವರೆಗಿನ ಒಟ್ಟು ಸಂಗ್ರಹವು 128 ಲಕ್ಷ ಟನ್‌ಗಳಷ್ಟಿದೆ. 130 ಲಕ್ಷ ಟನ್‌ಗಳ ಗುರಿ ಕೇಂದ್ರ ನಿಗದಿ ಪಡಿಸಿದೆ. ಆದರೆ 135 ಲಕ್ಷ ಟನ್‌ಗಳ ಗುರಿಯಿರುವ ಮಧ್ಯಪ್ರದೇಶದಲ್ಲಿ ಸಂಗ್ರಹವು ಸುಮಾರು 94 ಲಕ್ಷ ಟನ್‌ಗಳಷ್ಟಿದೆ.

ಈ ವರ್ಷದಲ್ಲಿ ಆರ್‌ಎಂಎಸ್ ಅವಧಿಯಲ್ಲಿ ಒಟ್ಟು ಗೋಧಿ ಸಂಗ್ರಹ 427 ಮತ್ತು ಕಳೆದ ವರ್ಷ ಒಟ್ಟು ಸಂಗ್ರಹ 390 ಲಕ್ಷ ಟನ್ ಆಗಿತ್ತು. ಈ ಋತುವಿನಲ್ಲಿ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 32.5 ಲಕ್ಷ ರೈತರು ಆರ್‌ಎಂಎಸ್ ಸಂಗ್ರಹ ಕಾರ್ಯಾಚರಣೆಯಿಂದ 65,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ (MSP) ಮೌಲ್ಯದೊಂದಿಗೆ ಲಾಭ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವರ್ಷ ಎಲ್ಲಾ ರೈತರು ಕನಿಷ್ಠ ಬೆಂಬಲ ಬೆಲೆಯನ್ನು ನೇರವಾಗಿ ತಮ್ಮ ಖಾತೆಗಳಿಗೆ ನೇರವಾಗಿ ಪಡೆಯುತ್ತಿವೆ.

ಇದೇ ಮೊದಲ ಬಾರಿ ಪಂಜಾಬ್‌ನ ರೈತರು ತಮ್ಮ ರಾಬಿ ಬೆಳೆಗಳ ಮಾರಾಟದಿಂದ ಬಂದ ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗಳಿಂದ ಪಡೆಯುತ್ತಿದ್ದಾರೆ . ಈ ವರ್ಷ ಸಾರ್ವಜನಿಕ ಖರೀದಿಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೇರಿಸಲಾಗಿದೆ. ಯಾಕೆಂದರೆ ಹರ್ಯಾಣ ಮತ್ತು ಪಂಜಾಬ್ ಸರ್ಕಾರಗಳು ಕೇಂದ್ರ ಸರ್ಕಾರದ ನಿರ್ದೇಶನವನ್ನು ಅನುಸರಿಸಿ ರೈತರ ಬ್ಯಾಂಕ್ ಖಾತೆಗಳಿಗೆ ಎಂಎಸ್‌ಪಿ ಪಾವತಿಯನ್ನು ನೇರ ಆನ್‌ಲೈನ್ ವರ್ಗಾವಣೆಗೆ ಬದಲಾಯಿಸಿವೆ ಎಂದು ಕೇಂದ್ರ ಆಹಾರ ಸಚಿವಾಲಯ ಹೇಳಿದೆ.

ಏಪ್ರಿಲ್ 18 ರ ದಾಖಲೆಗಳ ಪ್ರಕಾರ ಹರಿಯಾಣ- 44.8 ಲಕ್ಷ ಟನ್ (ಶೇ 36.8), ಪಂಜಾಬ್ – 41.8 ಲಕ್ಷ ಟನ್ (ಶೇ 34.2) ಮತ್ತು ಮಧ್ಯಪ್ರದೇಶ – 28.5 ಲಕ್ಷ ಟನ್ (ಶೇ 23.4) ಗೋಧಿ ಸಂಗ್ರಹಣೆಯಲ್ಲಿ ಮಹತ್ತರ ಕೊಡುಗೆ ನೀಡಿದೆ ಎಂದು ಸಚಿವಾಲಯ ಹೇಳಿದೆ.

2021-22 ಪ್ರಸಕ್ತ ಋತುವಿನಲ್ಲಿ (ಏಪ್ರಿಲ್-ಮಾರ್ಚ್) ಸುಮಾರು 41.8 ಲಕ್ಷ ಟನ್ ಗೋಧಿಯನ್ನು ಪಂಜಾಬ್‌ನಿಂದ ಸಂಗ್ರಹಿಸಲಾಗಿದೆ. ಏಪ್ರಿಲ್ 18 ರವರೆಗೆ ಪಂಜಾಬ್‌ನಲ್ಲಿ ಸುಮಾರು ₹202.69 ಕೋಟಿ ಮತ್ತು ಹರಿಯಾಣದಲ್ಲಿ ಸುಮಾರು ₹ 1,417 ಕೋಟಿಗಳನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ.

ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಇದುವರೆಗೆ ಒಟ್ಟು ಗೋಧಿ ಸಂಗ್ರಹವು 121.7 ಲಕ್ಷ ಟನ್ ತಲುಪಿದೆ.  ಏಪ್ರಿಲ್ 18 ರವರೆಗೆ ಹರಿಯಾಣದಿಂದ ಸುಮಾರು 44.8 ಲಕ್ಷ ಟನ್ ಗೋಧಿ ಮತ್ತು ಮಧ್ಯಪ್ರದೇಶದಿಂದ 28.5 ಲಕ್ಷ ಟನ್ ಗೋಧಿ ಸಂಗ್ರಹಿಸಲಾಗಿದೆ. ಒಟ್ಟಾರೆಯಾಗಿ, ದೇಶಾದ್ಯಂತ ಸುಮಾರು 11.6 ಲಕ್ಷ ರೈತರು ಸಂಗ್ರಹಣೆ ಪ್ರಕ್ರಿಯೆಯಿಂದ ಲಾಭ ಪಡೆದಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಇದನ್ನೂ  ಓದಿ: ಗೋಧಿ ಸಂಗ್ರಹಣೆ; 11.6 ಲಕ್ಷ ರೈತರು ಎಂಎಸ್​ಪಿ ಮೂಲಕ ಪಡೆದಿದ್ದು ₹24 ಸಾವಿರ ಕೋಟಿ: ಕೇಂದ್ರ ಸರ್ಕಾರ