‘ಮುಸ್ಲಿಮರು ನಿಮ್ಮ ಗುಲಾಮರಲ್ಲ’ ಎಂದ ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ

|

Updated on: Aug 23, 2023 | 10:51 AM

ಮುಸ್ಲಿಮರು ನಿಮ್ಮ ಗುಲಾಮರಲ್ಲ ಎಂದು ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ ಹೇಳಿದ್ದಾರೆ. ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದೆ ಎಂದರು. ಮುಸ್ಲಿಮರು ನಿಮಗೆ ಏಕೆ ಮತ ಹಾಕಬೇಕು, ನೀವು ಮುಸ್ಲಿಮರಿಗೆ ಕೆಲಸ ಕೊಡುವುದಿಲ್ಲ, ಪೊಲೀಸ್, ಸೇನೆ, ನೌಕಾಪಡೆಗೆ ಸೇರಿಸಿಕೊಳ್ಳುವುದಿಲ್ಲ, ಹಾಗಿದ್ದಾಗ ಮುಸ್ಲಿಮರು ನಿಮಗೇಕೆ ಮತ ಹಾಕಬೇಕು ಎಂದು ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

‘ಮುಸ್ಲಿಮರು ನಿಮ್ಮ ಗುಲಾಮರಲ್ಲ’ ಎಂದ ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ
ಅಜೀಜ್ ಖುರೇಶಿ
Image Credit source: India Today
Follow us on

ಮುಸ್ಲಿಮರು ನಿಮ್ಮ ಗುಲಾಮರಲ್ಲ ಎಂದು ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ ಹೇಳಿದ್ದಾರೆ. ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದೆ ಎಂದರು. ಮುಸ್ಲಿಮರು ನಿಮಗೆ ಏಕೆ ಮತ ಹಾಕಬೇಕು, ನೀವು ಮುಸ್ಲಿಮರಿಗೆ ಕೆಲಸ ಕೊಡುವುದಿಲ್ಲ, ಪೊಲೀಸ್, ಸೇನೆ, ನೌಕಾಪಡೆಗೆ ಸೇರಿಸಿಕೊಳ್ಳುವುದಿಲ್ಲ, ಹಾಗಿದ್ದಾಗ ಮುಸ್ಲಿಮರು ನಿಮಗೇಕೆ ಮತ ಹಾಕಬೇಕು ಎಂದು ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಅಜೀಜ್ ಖುರೇಷಿ ಈ ಹಿಂದೆ ಉತ್ತರಾಖಂಡ, ಯುಪಿ ಮತ್ತು ಮಿಜೋರಾಂ ರಾಜ್ಯಗಳ ರಾಜ್ಯಪಾಲರಾಗಿದ್ದರು. ಮಧ್ಯಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಖುರೇಷಿ ಅವರು 1984ರ ಲೋಕಸಭೆ ಚುನಾವಣೆಯಲ್ಲಿ ಸತ್ನಾ ಸಂಸದರಾಗಿ ಆಯ್ಕೆಯಾಗಿದ್ದರು.

ಮಣಿಶಂಕರ್ ಅಯ್ಯರ್ ಮುಸ್ಲಿಮರ ಬಗ್ಗೆ ಹೇಳಿದ್ದೇನು?
ಪಾಕಿಸ್ತಾನ ನಮ್ಮ ಶತ್ರು ದೇಶವಲ್ಲ, ಹಾಗೆಯೇ ಮುಸ್ಲಿಮರು ಭಾರತದ ಆಸ್ತಿ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಅವರು ತಮ್ಮ ಆತ್ಮಚರಿತ್ರೆ, ಮೆಮೊಯಿರ್ಸ್ ಆಫ್ ಎ ಮೇವರಿಕ್ – ದಿ ಫಸ್ಟ್ ಫಿಫ್ಟಿ ಇಯರ್ಸ್ ಬಗ್ಗೆ ಮಾತನಾಡುತ್ತಾ ಸೇನೆ ಅಥವಾ ರಾಜಕಾರಣಿಗಳು ಏನೇ ನಂಬಿದರೂ ಪಾಕಿಸ್ತಾನದ ಜನರು ಭಾರತವನ್ನು ಶತ್ರು ರಾಷ್ಟ್ರವೆಂದು ಪರಿಗಣಿಸುವುದಿಲ್ಲ ಎಂದು ಅಯ್ಯರ್ ಹೇಳಿದ್ದಾರೆ. ಅಯ್ಯರ್ ಅವರು ಡಿಸೆಂಬರ್ 1978 ರಿಂದ ಜನವರಿ 1982 ರವರೆಗೆ ಕರಾಚಿಯಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿ ಸೇವೆ ಸಲ್ಲಿಸಿದರು.

ಮತ್ತಷ್ಟು ಓದಿ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ 8 ಯೋಜನೆಗಳು ಜಾರಿ: ಯಾವುವು? ಜಮೀರ್ ಅಹ್ಮದ್ ಹೇಳಿದ್ದಿಷ್ಟು

ಕರಾಚಿಯಲ್ಲಿ ತಮ್ಮ ರಾಜತಾಂತ್ರಿಕ ಅಧಿಕಾರಾವಧಿಯಲ್ಲಿ ಮೂರು ಲಕ್ಷ ವೀಸಾಗಳನ್ನು ನೀಡಿದ್ದು, ದುರುಪಯೋಗದ ಬಗ್ಗೆ ಒಂದೇ ಒಂದು ದೂರು ಬಂದಿಲ್ಲ ಎಂದು ಅಯ್ಯರ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ