ಋಷಿಕೇಶದ ವಸತಿ ಪ್ರದೇಶಕ್ಕೆ ನುಗ್ಗಿದ ಗಜರಾಜ, ಆತಂಕದಲ್ಲಿ ಜನ

ಉತ್ತರಖಂಡದ ಋಷಿಕೇಶದಲ್ಲಿ ಮಂಗಳವಾರ ರಾತ್ರಿ ಕಾಡಾನೆಯೊಂದು ಬೀದಿಯಲ್ಲಿ ಓಡಾಡುತ್ತಿದ್ದ ವೀಡಿಯೋ ಎಲ್ಲ ಕಡೆ ವೈರಲ್​ ಆಗಿದೆ. ಈ ಘಟನೆಯಿಂದ ಅಲ್ಲಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಆನೆಯು ಜನವಸತಿ ಪ್ರದೇಶದ ಕಿರಿದಾದ ಓಣಿಗಳಲ್ಲಿ ಅಲೆದಾಡಿದ್ದು, ವಿಡಿಯೋ ಒಂದು ವೈರಲ್​​ ಆಗಿದೆ.

ಋಷಿಕೇಶದ ವಸತಿ ಪ್ರದೇಶಕ್ಕೆ ನುಗ್ಗಿದ ಗಜರಾಜ, ಆತಂಕದಲ್ಲಿ ಜನ
ವೈರಲ್​​ ವಿಡಿಯೋ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 23, 2023 | 11:04 AM

ಋಷಿಕೇಶ, ಆ.23: ಉತ್ತರಖಂಡದ ಋಷಿಕೇಶದಲ್ಲಿ ಮಂಗಳವಾರ ರಾತ್ರಿ ಕಾಡಾನೆಯೊಂದು ಬೀದಿಯಲ್ಲಿ ಓಡಾಡುತ್ತಿದ್ದ ವೀಡಿಯೋ ಎಲ್ಲ ಕಡೆ ವೈರಲ್​ ಆಗಿದೆ. ಈ ಘಟನೆಯಿಂದ ಅಲ್ಲಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಆನೆಯು ಜನವಸತಿ ಪ್ರದೇಶದ ಕಿರಿದಾದ ಓಣಿಗಳಲ್ಲಿ ಅಲೆದಾಡಿದ್ದು, ವಿಡಿಯೋ ಒಂದು ವೈರಲ್​​ ಆಗಿದೆ. ಇನ್ನು ಗಜರಾಜನಿಗೆ ಆ ಜನವಸತಿ ಪ್ರದೇಶದ ಕಿರಿದಾದ ಓಣಿಯಿಂದ ಹೊರಗೆ ಹೇಗೆ ಬರುವುದು ಎಂದು ತಿಳಿಯದೇ ಸಿಕ್ಕ ಸಿಕ್ಕಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಗಜರಾಜ ಯಾರಿಗೂ ತೊಂದರೆಯನ್ನು ಮಾಡಿಲ್ಲ ಎಂದು ಹೇಳಲಾಗಿದೆ. ಇನ್ನು ಅಲ್ಲಿನ ಜನ ಆನೆ ಅಡ್ಡಾದಿಡ್ಡಿ ಓಡಾಡುತ್ತಿರುವುದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಾಡು ಪ್ರಾಣಿಗಳು ನಗರಪ್ರದೇಶಗಳತ್ತ ಬರುಲು ಕಾರಣ ನಾವೇ, ಜನಸಂಖ್ಯೆ ಹೆಚ್ಚಾದಂತೆ, ಕಾಡುಗಳನ್ನು ನಾಶ ಮಾಡಿ, ನಮ್ಮ ಸ್ವಾರ್ಥಕ್ಕಾಗಿ ಮನೆ, ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದೇವೆ, ಈ ಕಾರಣದಿಂದಲ್ಲೇ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿದೆ. ಅವುಗಳ ಆವಾಸಸ್ಥಾನಗಳನ್ನು ಮನುಷ್ಯರು ನಾಶ ಮಾಡುತ್ತಿದ್ದಾರೆ.

ಇದನ್ನೂ ಓದಿ:‘ಮುಸ್ಲಿಮರು ನಿಮ್ಮ ಗುಲಾಮರಲ್ಲ’ ಎಂದ ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ

ಇನ್ನು ಅವುಗಳಿಗೆ ಕಾಡಿನಲ್ಲಿ ಆಹಾರ ಸಿಗದ ಕಾರಣ ನಾಡಿನತ್ತು ಆಹಾರಕ್ಕಾಗಿ ಬರುತ್ತಿದೆ. ಸಿಕ್ಕ ಸಿಕ್ಕಲ್ಲಿ ನುಗ್ಗುತ್ತಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಹೆಚ್ಚಿನ ಗಮನವಹಿಸಿ ಜನರ ರಕ್ಷಣೆಗೆ ಬರಬೇಕಿದೆ. ಈ ಹಿಂದೆ ಕುಡಿಯುವ ನೀರಿಗಾಗಿ ಏಳು ಆನೆಗಳ ಹಿಂಡು ಆಂಧ್ರಪ್ರದೇಶದ ಪಾರ್ವತಿಪುರಂ ಜಿಲ್ಲೆಯ ಪೂಜಾರಿಗುಡ ಗ್ರಾಮಕ್ಕೆ ನುಗ್ಗಿತ್ತು.

ಈ ಬಗ್ಗೆ ಒಂದು ವಿಡಿಯೋ ಕೂಡ ವೈರಲ್​​ ಆಗಿತ್ತು. ಆಂಧ್ರಪ್ರದೇಶದ ಪಾರ್ವತಿಪುರಂ ಜಿಲ್ಲೆಯ ಪೂಜಾರಿಗುಡ ಗ್ರಾಮದಲ್ಲಿ ಜನರು ಸಂಗ್ರಹಿಸಿದ್ದ ನೀರನ್ನು ಕುಡಿಯುತ್ತಿರುವ ದೃಶ್ಯ ಕಂಡುಬಂದಿತ್ತು. ಇನ್ನು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಮಾರ್ಚ್‌ನಲ್ಲಿ ಮಾನವ-ವನ್ಯಜೀವಿ ಸಂಘರ್ಷವನ್ನು (HWC) ಪರಿಹರಿಸಲು 14 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ