ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ; 6,000 ಮಂದಿಗೆ ಆಮಂತ್ರಣ

|

Updated on: Dec 02, 2023 | 1:52 PM

ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೂ ಮುನ್ನ, ಉತ್ತರ ಪ್ರದೇಶ ಸರ್ಕಾರವು 2024 ರ ಜನವರಿಯಲ್ಲಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಅಖಂಡ ರಾಮಾಯಣ ಮತ್ತು ಹನುಮಾನ್ ಚಾಲೀಸಾ ಪಠಣವನ್ನು ಆಯೋಜಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 14 ರಿಂದ 22 ರವರೆಗೆ ಪಾರಾಯಣ ಕಾರ್ಯಕ್ರಮಗಳು ನಡೆಯಲಿವೆ.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ; 6,000 ಮಂದಿಗೆ ಆಮಂತ್ರಣ
ಅಯೋಧ್ಯೆರಾಮ ಮಂದಿರ
Follow us on

ದೆಹಲಿ ನವೆಂಬರ್ 02: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು(Narendra Modi) ಶಂಕುಸ್ಥಾಪನೆ ಮಾಡಿದ ಮೂರು ವರ್ಷಗಳ ನಂತರ, ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ 2024 ಜನವರಿ 22, ರಂದು ರಾಮಲಲ್ಲಾನ (ರಾಮನ ಮೂರ್ತಿ) ಪ್ರತಿಷ್ಠಾಪನೆ ಮಾಡಲಾಗುವುದು. ಉತ್ತರ ಪ್ರದೇಶದ (Uttar Pradesh) ಪವಿತ್ರ ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಸಮಾರಂಭದ ಆಮಂತ್ರಣ ಪತ್ರಗಳನ್ನು ಅರ್ಚಕರು, ದಾನಿಗಳು ಮತ್ತು ಹಲವಾರು ರಾಜಕಾರಣಿಗಳು ಸೇರಿದಂತೆ 6,000 ಅತಿಥಿಗಳಿಗೆ ಕಳುಹಿಸಲಾಗುತ್ತಿದೆ. ಆಗಸ್ಟ್ 2020 ರಲ್ಲಿ ಮೋದಿಯವರು ದೇವಾಲಯದ ಅಡಿಪಾಯವನ್ನು ಹಾಕಿದ್ದರು

ಜನವರಿ 22 ರಂದು ನಡೆಯಲಿರುವ ಸಮಾರಂಭದಲ್ಲಿ ದೇಶದಾದ್ಯಂತದ ಪುರೋಹಿತರು ಮತ್ತು ಸಂತರು ಮಾತ್ರವಲ್ಲ, ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಉನ್ನತ ರಾಜಕಾರಣಿಗಳು ಸಹ ಭಾಗವಹಿಸಲಿದ್ದಾರೆ.

ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೂ ಮುನ್ನ, ಉತ್ತರ ಪ್ರದೇಶ ಸರ್ಕಾರವು 2024 ರ ಜನವರಿಯಲ್ಲಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಅಖಂಡ ರಾಮಾಯಣ ಮತ್ತು ಹನುಮಾನ್ ಚಾಲೀಸಾ ಪಠಣವನ್ನು ಆಯೋಜಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 14 ರಿಂದ 22 ರವರೆಗೆ ಪಾರಾಯಣ ಕಾರ್ಯಕ್ರಮಗಳು ನಡೆಯಲಿವೆ.

ರಾಮಮಂದಿರದ ಅದ್ದೂರಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ರಾಜ್ಯ ಸರ್ಕಾರವು ಧಾರ್ಮಿಕ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಿದೆ.

ಶ್ರೀರಾಮನ ವಿಗ್ರಹವನ್ನು ಜನವರಿ 22 ರಂದು ಭವ್ಯ ಸಮಾರಂಭದಲ್ಲಿ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವುದು, ಆ ದಿನಕ್ಕಾಗಿ ಹಲವಾರು ಉತ್ಸವಗಳನ್ನು ಯೋಜಿಸಲಾಗಿದೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: 10 ಕೋಟಿ ಜನರಿಗೆ ಆಹ್ವಾನ, ಸಚಿವ ಜೋಶಿ ಸಾರಥ್ಯದಲ್ಲಿ ಧಾರವಾಡದಿಂದ ವಿಶೇಷ ರೈಲು

ಅಯೋಧ್ಯೆ ರಾಮಮಂದಿರ ನಿರ್ಮಾಣ

ಅಯೋಧ್ಯೆ ವಿವಾದದ ಕುರಿತು 2019 ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಸುಪ್ರೀಂಕೋರ್ಟ್ ತೀರ್ಪಿನ ನಂತರ, ದೇವಾಲಯದ ನಿರ್ಮಾಣದ ಬಗ್ಗೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೇಂದ್ರವು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ’ ಟ್ರಸ್ಟ್ ಅನ್ನು ಸ್ಥಾಪಿಸಿತು.

ಆಗಸ್ಟ್ 5, 2020 ರಂದು ಮೋದಿ ಅವರು ದೇವಾಲಯದ ಶಂಕುಸ್ಥಾಪನೆ ಮಾಡಿದ ನಂತರ ನಿರ್ಮಾಣವು ಪ್ರಾರಂಭವಾಯಿತು. ರಾಮಮಂದಿರದ ವಾಸ್ತುಶಿಲ್ಪವು 1988 ರಲ್ಲಿ ಅಹಮದಾಬಾದ್‌ನ ಸೋಂಪುರ ಕುಟುಂಬವು ಸಿದ್ಧಪಡಿಸಿದ ವಿನ್ಯಾಸವನ್ನು ಆಧರಿಸಿದೆ

ಇದಲ್ಲದೇ ರಾಮ ಮಂದಿರ ಉದ್ಘಾಟನೆಗೂ ಮುನ್ನ ಥಾಯ್ಲೆಂಡ್ ರಾಮಜನ್ಮಭೂಮಿಗೆ ಮಣ್ಣನ್ನು ವಿಶೇಷ ಸಾಂಸ್ಕೃತಿಕ ಭಾವದಿಂದ ಕಳುಹಿಸುತ್ತಿದೆ. ಇದಕ್ಕಿಂತ ಮುನ್ನ ಥೈಲ್ಯಾಂಡ್‌ನ ಎರಡು ನದಿಗಳಿಂದ ಭಗವಾನ್ ರಾಮನ ದೇವಾಲಯಕ್ಕೆ ನೀರನ್ನೂ ಕಳುಹಿಸಲಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:51 pm, Sat, 2 December 23