Assembly Election Result 2023:ನಾಳೆ 4 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ, ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಫಾಲೋ ಮಾಡಿ

Assembly Election Result 2023 Tomorrow Time: ಲೋಕಸಭೆ ಚುನಾವಣೆ ಹಣೆಬರಹ ನಿರ್ಧರಿಸಲು 'ಪಂಚರಾಜ್ಯ ಫಲಿತಾಂಶ' ಸಿದ್ಧವಾಗಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಬಿಜೆಪಿ ವರ್ಸಸ್​ ಕಾಂಗ್ರೆಸ್ ಮಧ್ಯೆ ಅಖಾಡ ರಂಗೇರಿದೆ. ಗೆಲುವೊಂದೇ ಏಕೈಕ ಮಂತ್ರ ಎಂದು ಮುನ್ನುಗ್ಗುತ್ತಿರುವ 2 ಪಕ್ಷಗಳಿಗೆ ಡಿಸೆಂಬರ್ 3ರ ಭಾನುವಾರ ಅಂತಿಮ ಫಲಿತಾಂಶ ಸಿಗಲಿದೆ.

Assembly Election Result 2023:ನಾಳೆ 4 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ, ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಫಾಲೋ ಮಾಡಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 02, 2023 | 12:57 PM

ಪಂಚರಾಜ್ಯಗಳ ಚುನಾವಣೆಯ ಮತದಾನ ಪ್ರಕ್ರಿಯೆಯು ಮುಕ್ತಾಯಗೊಂಡಿದ್ದು ಮತ ಎಣಿಕೆ ಪ್ರಕ್ರಿಯೆ ಡಿಸೆಂಬರ್ 3 ರಂದು ಅಂದರೆ ನಾಳೆ (ಡಿಸೆಂಬರ್ 02) ನಡೆಯಲಿದೆ. ಇದರ ನಡುವೆ ಮಿಜೋರಾಂನಲ್ಲಿ ಮತ ಎಣಿಕೆ ಕಾರ್ಯ ಒಂದು ದಿನಕ್ಕೆ ಮುಂದೂಡಲಾಗಿದೆ. ಡಿಸೆಂಬರ್ 3 ರ ಬದಲಾಗಿ ಡಿಸೆಂಬರ್ 4 ಕ್ಕೆ ಮತ ಎಣಿಕೆ ಕಾರ್ಯ ನಡೆಸುವುದಾಗಿ ಚುನಾವಣಾ ಆಯೋಗವು ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆಯಿಂದಲೇ ‘ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಶುರುವಾಗಲಿದ್ದು, ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಕನ್ನಡ ಲೈವ್​ ನೀಡಲಿದೆ.

ಸದ್ಯದ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶಗಳು ಮುಂದಿನ ಚುನಾವಣೆಗಳ ಮೇಲೆ ಪ್ರಭಾವ ಬೀರಲಿದೆ. ಈ ಈ ಫಲಿತಾಶವು ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ವಿವಿಧ ಪ್ರಾದೇಶಿಕ ಪಕ್ಷಗಳಿಗೆ ಮಹತ್ವದ ಘಟ್ಟವಾಗಿದೆ.

ಇದನ್ನೂ ಓದಿ: ಪಂಚರಾಜ್ಯಗಳಲ್ಲಿ ಮತದಾರರು ಮಣೆ ಹಾಕಿದ್ದು ಯಾರಿಗೆ? ಏನು ಹೇಳುತ್ತಿವೆ ಮತಗಟ್ಟೆ ಸಮೀಕ್ಷೆ?

ಇನ್ನು 4 ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಏಕಕಾಲಕ್ಕೆ ಪ್ರಕಟಗೊಳ್ಳುತ್ತಿರುವುದರಿಂದ. ಎಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಮತ ಎಣಿಕಾ ಕೇಂದ್ರಗಳ ಸುತ್ತಮುತ್ತ ಹೆಚ್ಚುವರಿ ಬಿಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಮಿಜೋರಾಂ ಮತ ಎಣಿಕೆ ಮುಂದೂಡಿದ್ಯಾಕೆ?

ಡಿಸೆಂಬರ್ 3 ರಂದು ಭಾನುವಾರ ಆಗಿದ್ದು, ಕ್ರಿಶ್ಚಿಯನ್ನರ ಪವಿತ್ರ ದಿನವಾಗಿದೆ. ಆ ಕಾರಣಕ್ಕಾಗಿ ರಾಜ್ಯದಲ್ಲಿ ಎನ್‌ಜಿಒ ಸಮನ್ವಯ ಸಮಿತಿ ಪ್ರತಿಭಟನೆಗಳನ್ನು ನಡೆಸಿತ್ತು. ಈ ಹಿನ್ನೆಲೆಯಲ್ಲಿ ಆಯೋಗವು ದಿನಾಂಕವನ್ನು ಪರಿಷ್ಕರಿಸಿದ್ದು, ಡಿಸೆಂಬರ್ 3 ರ ಬದಲಾಗಿ ಡಿಸೆಂಬರ್ 4 ಕ್ಕೆ ಮತ ಎಣಿಕೆ ಕಾರ್ಯ ನಡೆಸುವುದಾಗಿ ತಿಳಿಸಿದೆ. ನವೆಂಬರ್ 7 ರಂದು ಮಿಜೊರಾಂನ 40 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಇದೀಗ ಚುನಾವಣಾ ಫಲಿತಾಂಶದ ದಿನಾಂಕ ಬದಲಾವಣೆ ಆಗಿದೆ. ಸರ್ಕಾರ ರಚನೆಗೆ 21 ಮ್ಯಾಜಿಕ್ ನಂಬರ್ ಆಗಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್​ -ಬಿಆರ್​ಎಸ್ ಪೈಪೋಟಿ​​

ತೆಲಂಗಾಣದಲ್ಲಿ ಕಾಂಗ್ರೆಸ್​ ಹಾಗೂ ಬಿಆರ್​ಎಸ್​​ ನಡುವೆ ಪೈಪೋಟಿ ಇದೆ. ಒಟ್ಟು 119 ವಿಧಾನಸಭಾ ಕ್ಷೇತ್ರಗಳಿದ್ದು, ಇದ್ದು, ಬಹುಮತಕ್ಕೆ 60 ಬೇಕಿದೆ. ಬಹುತೇಕ ಎಕ್ಸಿಟ್ ಪೋಲ್‌ಗಳು ತೆಲಂಗಾಣದಲ್ಲಿ ಕಾಂಗ್ರೆಸ್‌ ಮೇಲುಗೈ ಎಂದು ಭವಿಷ್ಯ ನುಡಿದಿವೆ. ಕಾಂಗ್ರೆಸ್ 60-70 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ರಾಜಕೀಯ ವಿಶ್ಲೇಷಕರು ಕೂಡ ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಹಣಾಹಣಿ

ಮಧ್ಯಪ್ರದೇಶದ ಒಟ್ಟು 230 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಸರಳ ಬಹುಮತ 116 ಬೇಕಿದೆ. ಇಲ್ಲಿ ಸಹ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ಪೈಪೋಟಿ ಇದ್ದು,ಬಿಜೆಪಿ 100-123 ಹಾಗೂ ಕಾಂಗ್ರೆಸ್ 102-125 ಸ್ಥಾನಗಳನ್ನು ಪಡೆಯಲಿದೆ ಎಂದು ಜನ್ ಕಿ ಬಾತ್ ಹೇಳಿದೆ. ಇನ್ನು ರಿಪಬ್ಲಿಕ್ ಟಿವಿ ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 118-130 ಸಿಕ್ಕರೆ, ಕಾಂಗ್ರೆಸ್‌ಗೆ 97-107 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ.

ರಾಜಸ್ಥಾನ ಚುನಾವಣೆಯ ಭವಿಷ್ಯವಾಣಿ

ರಾಜಸ್ಥಾನದಲ್ಲೂ ಸಹ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಇದ್ದು, ಯಾರೇ ಅಧಿಕಾರಕ್ಕೇರಬೇಕಿದ್ದರೆ ಒಟ್ಟು 199 ಕ್ಷೇತ್ರಗಳಲ್ಲಿ 100 ಸ್ಥಾನ ಗೆಲ್ಲಬೇಕಿದೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ: ಕಾಂಗ್ರೆಸ್ ಶೇ 42 ಪ್ರತಿಶತ ಮತಗಳೊಂದಿಗೆ 86-106 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ 80-100 ಸ್ಥಾನಗಳನ್ನು ಪಡೆಯಲಿದೆ. ಇನ್ನು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳುವ ಪ್ರಕಾರ ಶೇ 43 ಮತಗಳೊಂದಿಗೆ ಕಾಂಗ್ರೆಸ್‌ಗೆ 94-104 ಸ್ಥಾನಗಳು ಮತ್ತು ಶೇ 42 ಮತ ಪಡೆಯುವ ಮೂಲಕ ಬಿಜೆಪಿಗೆ 80-90 ಸ್ಥಾನಗಳನ್ನು ಪಡೆಯಲಿದೆ. ಇನ್ನು ಶೇ 38.98 ರಷ್ಟು ಮತ ಹಂಚಿಕೆಯೊಂದಿಗೆ ಕಾಂಗ್ರೆಸ್‌ಗೆ 56-72 ಸ್ಥಾನ ಸಿಕ್ಕರೆ, ಶೇ 41.88 ಮತ ಗಳಿಸುವ ಮೂಲಕ ಬಿಜೆಪಿ 108-128 ಸ್ಥಾನ ಪಡೆಯಲಿದೆ ಎಂದು ಟೈಮ್ಸ್ ನೌ-ಇಟಿಜಿ ಭವಿಷ್ಯ ನುಡಿದಿದೆ.

ಒಟ್ಟಿನಲ್ಲಿ ಈ ಫಲಿತಾಂಶ ಲೋಕಸಭಾ ಚುನಾವಣೆಯ ದಿಕ್ಸೂಚಿ ಎನ್ನಲಾಗಿದ್ದು, ಯಾರು ಮೇಲುಗೈ ಸಾಧಿಸಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ.