COP28: ನಾವೆಲ್ಲರೂ ಒಂದೇ ಮಣ್ಣಿನಿಂದ ಬಂದವರು, ನಾವು ತಿನ್ನುವ ಆಹಾರ ಒಂದೇ ಮಣ್ಣಿನದ್ದು: ಸದ್ಗುರು

ಹವಾಮಾನ ಬದಲಾವಣೆ ಕುರಿತು ದುಬೈನಲ್ಲಿ ಆಯೋಜಿಸಲಾಗಿರುವ ಕಾನ್ಫರೆನ್ಸ್ ಆಫ್ ಪಾರ್ಟಿಸ್​ 28ನೇ ಸಮ್ಮೇಳದಲ್ಲಿ ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಮಣ್ಣಿನ ಮಹತ್ವದ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಮಣ್ಣನ್ನು ಸಂರಕ್ಷಿಸಿಸಲು ಜನರಲ್ಲಿ ಆತ್ಮವಿಶ್ವಾಸ ತುಂಬಲು ವಿಶ್ವನಾಯಕರೆಲ್ಲರೂ ಒಗ್ಗೂಡಬೇಕು ಎಂದು ಕೋರಿದ್ದಾರೆ.

COP28: ನಾವೆಲ್ಲರೂ ಒಂದೇ ಮಣ್ಣಿನಿಂದ ಬಂದವರು, ನಾವು ತಿನ್ನುವ ಆಹಾರ ಒಂದೇ ಮಣ್ಣಿನದ್ದು: ಸದ್ಗುರು
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 02, 2023 | 9:59 AM

ದುಬೈ, (ಡಿಸೆಂಬರ್ 02): ನೀವು ಯಾರು, ನೀವು ಏನು ನಂಬುತ್ತೀರಿ, ನೀವು ಸ್ವರ್ಗಕ್ಕೆ ಹೋಗುತ್ತೀರಾ ಅಥವಾ ನರಕಕ್ಕೆ ಹೋಗುತ್ತೀರಾ ಎಂಬುದು ಮುಖ್ಯವಲ್ಲ. ನಾವೆಲ್ಲರೂ ಒಂದೇ ಮಣ್ಣಿನಿಂದ ಬಂದವರು. ನಾವು ತಿನ್ನುವ ಆಹಾರ ಒಂದೇ ಮಣ್ಣಿನಿಂದ ಬರುತ್ತದೆ. ಕೊನೆಗೆ ನಾವು ಸಾಯುವಾಗ ಅದೇ ಮಣ್ಣಿನಲ್ಲಿ ಭೇಟಿಯಾಗುತ್ತೇವೆ. ಮಣ್ಣು ಎನ್ನುವುದು ಅಂತಿಮ ಏಕೀಕರಣ ಎಂದು ಈಶ ಫೌಂಡೇಶನ್ (Isha Foundation) ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ( Sadhguru) ಮಣ್ಣಿನ ಮಹತ್ವದ ಬಗ್ಗೆ ಹೇಳಿದರು.

ಹವಾಮಾನ ಬದಲಾವಣೆ ಕುರಿತು ದುಬೈನಲ್ಲಿ (Dubai) ಆಯೋಜಿಸಲಾಗಿರುವ ಕಾನ್ಫರೆನ್ಸ್ ಆಫ್ ಪಾರ್ಟಿಸ್​ 28ನೇ ಸಮ್ಮೇಳದಲ್ಲಿ ಮಾತನಾಡಿದ ಸದ್ಗುರು, ಈ ಗ್ರಹದಲ್ಲಿ ಮಣ್ಣು ಅಕ್ಷರಶಃ ಜೀವವೈವಿಧ್ಯದ ತಾಯಿಯಾಗಿದೆ. ಸಮೃದ್ಧ ಮಣ್ಣಿನಿಲ್ಲದೆ, ಜೀವವೈವಿಧ್ಯಕ್ಕೆ ಅವಕಾಶವಿಲ್ಲ. ಈ ಗ್ರಹದಲ್ಲಿ ಜೀವಕ್ಕೆ ಜನ್ಮ ನೀಡುವ ಗರ್ಭವೇ ಮಣ್ಣು. ಮಣ್ಣಿನ ಪುನರುಜ್ಜೀವನ ನೀತಿಗಳನ್ನು ಜಾರಿಗೆ ತರಲು ಜನರನ್ನು ಪ್ರಭಾವಿಸಲು ನಾಯಕರು ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ತಿಳಿಸಿದರು.

ಮಣ್ಣಿನ ಪುನರುಜ್ಜೀವನ ನೀತಿಗಳನ್ನು ಜಾರಿಗೆ ತರಲು ಜನರನ್ನು ಪ್ರೇರೇಪಣೆ ಮಾಡುವುದರಲ್ಲಿ ನಾಯಕರ ಪ್ರಮುಖ ಪಾತ್ರ ವಹಿಸುತ್ತದೆ. ನಂಬಿಕೆಯ ಹೆಸರಿನಲ್ಲಿ ಜಗತ್ತನ್ನು ವಿಭಜಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಮುಖಂಡರು ತಮ್ಮ ಪ್ರಭಾವವನ್ನು ಬಳಸಿಕೊಂಡು ಮಣ್ಣನ್ನು ಉಳಿಸಲು ಜನರನ್ನು ಪ್ರೇರೇಪಿಸಬೇಕು. ಏಕೆಂದರೆ ನಾವು ಅರಿವಿಲ್ಲದೆ ಸೃಷ್ಟಿಸಿದ ಎಲ್ಲಾ ವಿಭಾಗಗಳನ್ನು ಮೀರಿ ಮಣ್ಣು ನಮ್ಮನ್ನು ಒಂದುಗೂಡಿಸುತ್ತದೆ ಎಂದರು.

ದುಬೈನಲ್ಲಿ ನಡೆಯುತ್ತಿರುವ ಸಿಒಪಿ28 (ಪ್ರತಿನಿಧಿಗಳ 28ನೇ ಸಮ್ಮೇಳನ)ದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಯುಎಇ, ಫ್ರಾನ್ಸ್, ಇಟಲಿ, ಇಂಡೋನೇಷ್ಯಾ ಪ್ರಧಾನಿಗಳು, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಸೇರಿದಂತೆ ವಿಶ್ವದ ಅನೇಕ ಗಣ್ಯರು ಭಾಗಿಯಾಗಿದ್ದರು.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ