ಚೀನಾವನ್ನು ಎದುರಿಸಲು ಭಾರತ ಜತೆಗೆ ಅಮೆರಿಕ ಇದೆ: ಯುಎಸ್ ಮಾಜಿ NSA
COP28: ಜಾನ್ ಬೋಲ್ಟನ್ ಅವರು ವಾಷಿಂಗ್ಟನ್ ಎಕ್ಸಾಮಿನರ್ ಪ್ರತಿಕೆಗೆ ತಿಳಿಸಿರುವ ಪ್ರಕಾರ ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ವಿವಾದವನ್ನು ಭಾರತ ಮತ್ತು ಅಮೆರಿಕ ಜಂಟಿಯಾಗಿ ಎದುರಿಸಲು ಸಿದ್ಧವಾಗಿದೆ. ಚೀನಾದ ಬೃಹತ್ ಮೂಲಸೌಕರ್ಯ ಹೂಡಿಕೆ ಯೋಜನೆಯಾದ BRI, ಏಷ್ಯಾ ಮತ್ತು ಅದರಾಚೆಗೆ ಬೀಜಿಂಗ್‌ನ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಉಂಟು ಮಾಡುವ ಆತಂಕವನ್ನು ಸೃಷ್ಟಿ ಮಾಡಿದೆ ಎಂದು ಹೇಳಿದರು.
ಯುಎಇಯಲ್ಲಿ ಹವಾಮಾನ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ಸೇರಿದಂತೆ ಅನೇಕ ರಾಷ್ಟ್ರಗಳು ನಾಯಕರು ಭಾಗವಹಿಸಿದ್ದು, ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರ ಮಧ್ಯೆ ಭಾರತ ಮತ್ತು ಚೀನಾದ ನಡುವಿನ ಬಿಕ್ಕಟ್ಟಿನ ಬಗ್ಗೆ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಜಾನ್ ಬೋಲ್ಟನ್ ಅವರು ಮಾತನಾಡಿದ್ದಾರೆ. ವಿಶ್ವದಲ್ಲೇ ಭಾರತದ ಪ್ರಾಮುಖ್ಯತೆ ಬೆಳೆಯುತ್ತಿದೆ. ಭಾರತದ ಎಲ್ಲ ಕ್ಷೇತ್ರದಲ್ಲೂ ಬೆಳೆಯುತ್ತಿದೆ ಎಂದು ಅವರು ಶ್ಲಾಘಿಸಿದರು. ಇದೀಗ ಭಾರತ- ಅಮೆರಿಕದ ದ್ವಿಪಕ್ಷೀಯ ಸಹಾಕಾರ ಅಗತ್ಯ ಇದೆ ಎಂದು ಹೇಳಿದರು.
ಜಾನ್ ಬೋಲ್ಟನ್ ಅವರು ವಾಷಿಂಗ್ಟನ್ ಎಕ್ಸಾಮಿನರ್ ಪ್ರತಿಕೆಗೆ ತಿಳಿಸಿರುವ ಪ್ರಕಾರ ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ವಿವಾದವನ್ನು ಭಾರತ ಮತ್ತು ಅಮೆರಿಕ ಜಂಟಿಯಾಗಿ ಎದುರಿಸಲು ಸಿದ್ಧವಾಗಿದೆ. ಚೀನಾದ ಬೃಹತ್ ಮೂಲಸೌಕರ್ಯ ಹೂಡಿಕೆ ಯೋಜನೆಯಾದ BRI, ಏಷ್ಯಾ ಮತ್ತು ಅದರಾಚೆಗೆ ಬೀಜಿಂಗ್‌ನ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಉಂಟು ಮಾಡುವ ಆತಂಕವನ್ನು ಸೃಷ್ಟಿ ಮಾಡಿದೆ ಎಂದು ಹೇಳಿದರು.
ಭಾರತವು ತನ್ನ ವಿಶಾಲವಾದ ಇಂಡೋ-ಪೆಸಿಫಿಕ್ ಭೂಪ್ರದೇಶದಲ್ಲಿ ಚೀನಾ ಮಾಡುತ್ತಿರುವ ಕುತಂತ್ರವನ್ನು ಎದುರಿಸಲಿದೆ ಎಂದು ಹೇಳಿದರು. ಜಾನ್ ಬೋಲ್ಟನ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ NSA ಆಗಿ ಸೇವೆ ಸಲ್ಲಿಸಿದರು. ಜಾನ್ ಬೋಲ್ಟನ್ ಅವರು ಕತಾರ್‌ನಲ್ಲಿ ಮಾಜಿ ಭಾರತೀಯ ನೌಕಾ ಅಧಿಕಾರಿಗಳನ್ನು ಗಲ್ಲಿಗೇರಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಕು ಚೆಲ್ಲಿದ್ದಾರೆ. ಈ ಪ್ರಕರಣವು ಮಧ್ಯಪ್ರಾಚ್ಯದೊಂದಿಗೆ ಭಾರತದ ಸಂಬಂಧ ಬಗ್ಗೆ ಮುಂಚೂಣಿಗೆ ತಂದಿದೆ. ಜತೆಗೆ ಅದರ ಮಿತ್ರರಾಷ್ಟ್ರಗಳನ್ನು ಮೀರಿ ದೇಶಗಳೊಂದಿಗೆ ಗುಪ್ತಚರ ವಿಷಯಗಳಲ್ಲಿ ಸಹಕರಿಸುವ ಅದರ ಇಚ್ಛೆಯ ಬಗ್ಗೆಯು ಇದು ತಿಳಿಸುತ್ತದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಸೆಲ್ಫಿ ತೆಗೆದು ಉತ್ತಮ ಸ್ನೇಹಿತ ಎಂದು ಪೋಸ್ಟ್ ಮಾಡಿದ ಇಟಲಿ ಪ್ರಧಾನಿ ಮೆಲೋನಿ
ಇದರ ಜತೆಗೆ ಇಸ್ರೇಲ್ ಮತ್ತು ಹಮಾಸ್ ಯುದ್ಧದ ಬಗ್ಗೆಯು ಮಾತನಾಡಿದ ಅವರು ಭಾರತದ ಹಮಾಸ್ ವಿರುದ್ಧ ಸರಿಯಾದ ನಿಲುವುಗಳನ್ನು ತೆಗೆದುಕೊಂಡಿದೆ. ಆ ಕಾರಣ ಭಾರತದ ಇದರಿಂದ ಯಾವುದೇ ರೀತಿಯ ಕೆಟ್ಟ ಪರಿಣಾಮಗಳನ್ನು ಎದುರಿಸುವುದಿಲ್ಲ ಎಂದು ಹೇಳಿದ್ದಾರೆ. ಭಾರತ ಹಲವು ರಾಷ್ಟ್ರಗಳ ಜತೆಗೆ ಉತ್ತಮ ಸಂಬಂಧವನ್ನು ಹೊಂದಿದೆ. ಅದು ಈಗ ಕಾಣುತ್ತಿದೆ. ಇದರ ಜತೆಗೆ ಭಾರತದ ಕೈಗಾರಿಕ ಕ್ಷೇತ್ರ, ಆರ್ಥಿಕ ಕ್ಷೇತ್ರದಲ್ಲೂ ಬಹಳಷ್ಟು ಮುಂದುವರಿದಿದೆ. ಬಂದರು ನಿರ್ಮಾಣ ಮತ್ತು ನಿರ್ವಹಣೆಯಲ್ಲೂ ಭಾರತ ನಂಬರ್ ಒನ್. ಭಾರತದ ಅತಿದೊಡ್ಡ ಕೈಗಾರಿಕಾ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ಅದಾನಿ ಗ್ರೂಪ್, ಭಾರತದ ಖಾಸಗಿ ವಲಯ ಮತ್ತು ಅಮೆರಿಕದ ಸರ್ಕಾರದ ನಡುವಿನ ಮೊದಲ ಮಹತ್ವದ ಸಹಕಾರಿ ಪ್ರಯತ್ನಗಳನ್ನು ಕೂಡ ಮಾಡಿದೆ ಎಂದು ಹೇಳಿದ್ದಾರೆ.
ವಿದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 am, Sat, 2 December 23