ಮಹುವಾ ಮೊಯಿತ್ರಾ ಉಚ್ಚಾಟನೆಯ ವರದಿ ನಂತರ ನೈತಿಕ ಸಮಿತಿಯ ಪ್ರಕ್ರಿಯೆ ಪರಿಶೀಲಿಸಲು ಕೋರಿದ ಕಾಂಗ್ರೆಸ್ ಸಂಸದ

ಓಂ ಬಿರ್ಲಾ ಅವರಿಗೆ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿಯವರು ಬರೆದ ಪತ್ರವು ನೈತಿಕ ಸಮಿತಿಯ ಕಾರ್ಯವೈಖರಿಗಳ ಪರಿಶೀಲನೆ ಮತ್ತು ಪಾರದರ್ಶಕತೆಗೆ ಸಂಬಂಧಿಸಿದ ಕಾಳಜಿಗಳನ್ನು,ಸವಲತ್ತುಗಳು ಮತ್ತು ನೈತಿಕ ಸಮಿತಿಗಳ ಪಾತ್ರಗಳಲ್ಲಿನ ಸಂಭಾವ್ಯ ಅಸ್ಪಷ್ಟತೆಗಳು ಮತ್ತು ದಂಡದ ಅಧಿಕಾರಗಳಿಗೆ ಸ್ಪಷ್ಟ ಮಾರ್ಗಸೂಚಿಗಳ ಅನುಪಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಮಹುವಾ ಮೊಯಿತ್ರಾ ಉಚ್ಚಾಟನೆಯ ವರದಿ ನಂತರ ನೈತಿಕ ಸಮಿತಿಯ ಪ್ರಕ್ರಿಯೆ ಪರಿಶೀಲಿಸಲು ಕೋರಿದ ಕಾಂಗ್ರೆಸ್ ಸಂಸದ
ಮಹುವಾ ಮೊಯಿತ್ರಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 02, 2023 | 1:06 PM

ದೆಹಲಿ ಡಿಸೆಂಬರ್ 02: ಪ್ರಶ್ನೆಗಾಗಿ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ(Mahua Moitra)ಅವರನ್ನು ಉಚ್ಚಾಟಿಸಲು ಲೋಕಸಭೆಯ ನೈತಿಕ ಸಮಿತಿಯ ಶಿಫಾರಸಿನ (Lok Sabha Ethics Committee) ಹಿನ್ನೆಲೆಯಲ್ಲಿ, ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಸದನದ “ಪ್ರಾಥಮಿಕವಾಗಿ ಸದಸ್ಯರ ಹಕ್ಕುಗಳಿಗೆ ಸಂಬಂಧಿಸಿದ” ಸಂಸದೀಯ ಸಮಿತಿಯ ಪ್ರಕ್ರಿಯೆಗಳ ಸಮಗ್ರ ಪರಿಶೀಲನೆಗೆ ಒತ್ತಾಯಿಸಿದ್ದಾರೆ.

ವಿನೋದ್ ಕುಮಾರ್ ಸೋಂಕರ್ ಅವರ ಅಧ್ಯಕ್ಷತೆಯ ನೈತಿಕ ಸಮಿತಿಯು ನವೆಂಬರ್ 9 ರಂದು ನಡೆದ ಸಭೆಯಲ್ಲಿ ವರದಿಯನ್ನು ಅಂಗೀಕರಿಸಿತು. ಆರು ಸದಸ್ಯರು ಮೊಯಿತ್ರಾ ಅವರ ಉಚ್ಚಾಟನೆಯನ್ನು ಬೆಂಬಲಿಸಿದರು ಮತ್ತು ನಾಲ್ಕು ವಿರೋಧ ಪಕ್ಷದ ಸದಸ್ಯರು ಇದಕ್ಕೆ ಅಸಮ್ಮತಿ ಸೂಚಿಸಿದ್ದರು. ಸೋಮವಾರ ಚಳಿಗಾಲದ ಅಧಿವೇಶನದ ಆರಂಭದ ದಿನದಂದು ಸಂಸತ್ತಿನ ಕೆಳಮನೆಯಲ್ಲಿ ವರದಿಯನ್ನು ಮಂಡಿಸಲು ನಿರ್ಧರಿಸಲಾಗಿದೆ.

ಚೌಧರಿಯವರ ಪತ್ರವು ನೈತಿಕ ಸಮಿತಿಯ ಕಾರ್ಯವೈಖರಿಗಳ ಪರಿಶೀಲನೆ ಮತ್ತು ಪಾರದರ್ಶಕತೆಗೆ ಸಂಬಂಧಿಸಿದ ಕಾಳಜಿಗಳನ್ನು,, ಸವಲತ್ತುಗಳು ಮತ್ತು ನೈತಿಕ ಸಮಿತಿಗಳ ಪಾತ್ರಗಳಲ್ಲಿನ ಸಂಭಾವ್ಯ ಅಸ್ಪಷ್ಟತೆಗಳು ಮತ್ತು ದಂಡದ ಅಧಿಕಾರಗಳಿಗೆ ಸ್ಪಷ್ಟ ಮಾರ್ಗಸೂಚಿಗಳ ಅನುಪಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಸಮಿತಿಯ ಕ್ರಮಗಳ ದೂರಗಾಮಿ ಪರಿಣಾಮಗಳನ್ನು ಉಲ್ಲೇಖಿಸಿ, ಉಚ್ಚಾಟನೆಯ ಅಭೂತಪೂರ್ವ ಶಿಫಾರಸನ್ನು ಸಂಸದರು ಪ್ರಶ್ನಿಸುತ್ತಾರೆ.

“ಸಂಸತ್ತಿನಿಂದ ಹೊರಹಾಕುವಿಕೆ, ನೀವು ಒಪ್ಪುತ್ತೀರಿ ಸರ್, ಇದು ಅತ್ಯಂತ ಗಂಭೀರವಾದ ಶಿಕ್ಷೆಯಾಗಿದೆ ಮತ್ತು ಬಹಳ ವ್ಯಾಪಕವಾದ ಪರಿಣಾಮಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಈ ಪತ್ರದಲ್ಲಿ ಮಹುವಾ ಮೊಯಿತ್ರಾ ಪ್ರಕರಣ ಮತ್ತು ಹಿಂದಿನ ನಿದರ್ಶನಗಳ ನಡುವಿನ ಕಾರ್ಯವಿಧಾನದ ವ್ಯತ್ಯಾಸಗಳನ್ನು ಪರಿಶೀಲಿಸುತ್ತದೆ. ನಿರ್ದಿಷ್ಟವಾಗಿ 2005ರ ಪ್ರಶ್ನೆಗಾಗಿ ನಗದು ಹಗರಣವು ಸದಸ್ಯರನ್ನು ಹೊರಹಾಕಲು ಇಲ್ಲಿ ನಿರ್ಧರಿಸಲಾಗಿದೆ. ಇಲ್ಲಿ ಸ್ಥಾಪಿತ ವಿಧಾನವನ್ನು ಅನುಸರಿಸಲಾಗಿದೆಯೇ ಮತ್ತು ಮೊಯಿತ್ರಾ ಪ್ರಕರಣದಲ್ಲಿ ನಿರ್ಣಾಯಕ ಹಣದ ಜಾಡು ಸ್ಥಾಪಿಸಲಾಗಿದೆಯೇ ಎಂದು ಚೌಧರಿ ಪ್ರಶ್ನಿಸಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪದ ಆಧಾರದ ಮೇಲೆ ನೈತಿಕ ಸಮಿತಿಯು ತನಿಖೆಯನ್ನು ಪ್ರಾರಂಭಿಸಿದೆ, ಅವರು ಉಡುಗೊರೆಗಳ ವಿನಿಮಯಕ್ಕಾಗಿ ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆಜ್ಞೆಯ ಮೇರೆಗೆ ಅದಾನಿ ಗ್ರೂಪ್ ಅನ್ನು ಗುರಿಯಾಗಿಸಲು ಲೋಕಸಭೆಯಲ್ಲಿ ಮೊಯಿತ್ರಾ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಅಡ್ವೊಕೇಟ್ ಜೈ ಅನಂತ್ ದೇಹದ್ರಾಯ್ ಅವರು ಲಂಚದ ಆರೋಪದ ಪುರಾವೆಯನ್ನು ತನಗೆ ಒದಗಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದರು. ಬಿಜೆಪಿ ಸಂಸದ ಮತ್ತು ದೇಹದ್ರಾಯಿ ಲೋಕಸಭೆಯ ನೈತಿಕ ಸಮಿತಿಯ ಮುಂದೆ ಹಾಜರಾಗಿದ್ದರು, ಆದರೆ ಹಿರಾನಂದಾನಿ ಹಾಜರಾಗಿಲ್ಲ.

“ಲಾಗ್ ಇನ್ ರುಜುವಾತುಗಳನ್ನು ಬಳಸಿಕೊಂಡು ಪ್ರಶ್ನೆಗಳನ್ನು ಹಾಕುವ ಮೂಲಕ ಉದ್ಯಮಿ ತನ್ನ ಹಿತಾಸಕ್ತಿಗಳ ಹೊರತಾಗಿಯೂ ಸದಸ್ಯರ ವಿರುದ್ಧ ತಿರುಗಿ ಬಿದ್ದಿದ್ದೇಕೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ” ಎಂದು ಚೌಧರಿ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಶ್ನೆಗಾಗಿ ನಗದು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆ ಆರಂಭ

“ಸಮಿತಿಯ ಸಭೆಗಳ ನಡಾವಳಿಗಳು ಕಟ್ಟುನಿಟ್ಟಾಗಿ ಗೌಪ್ಯವಾಗಿರುತ್ತವೆ ಮತ್ತು ಸಮಿತಿಯು ಅತ್ಯಂತ ಗಂಭೀರವಾದ ಮತ್ತು ಅತ್ಯಂತ ಸೂಕ್ಷ್ಮವಾದ ವಿಷಯವನ್ನು ತನಿಖೆ ಮಾಡುವ ಸಂದರ್ಭದಲ್ಲಿ ಕಟ್ಟುನಿಟ್ಟಾದ ಅನುಸರಣೆಗೆ ನಿಯಮವು ಹೆಚ್ಚು ಪ್ರಸ್ತುತವಾಗಿದೆ. ಆದರೂ, ನೈತಿಕ ಸಮಿತಿಯ ಅಧ್ಯಕ್ಷರು ಮತ್ತು ದೂರುದಾರ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳುತ್ತಿದ್ದರು. ವಿಷಯವು ತನಿಖೆಯ ಹಂತದಲ್ಲಿದ್ದರೂ ತೀರ್ಪುಗಳನ್ನು ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ