ದೆಹಲಿ: ಖತರ್ನಾಕ್ ಚೀನಾದಿಂದ ಜಗತ್ತಿಗೇ ಅಂಟಿರುವ ಈ ಮಹಾಮಾರಿ ಕೊರೊನಾ ಭಾರತವನ್ನ ಬಿಟ್ಟೂ ಬಿಡದಂತೆ ಕಾಡ್ತಿದೆ. ಕೊರೊನಾ ಸೋಂಕು ಅತಿವೇಗವಾಗಿ ದೇಶಾದ್ಯಂತ ಹಬ್ಬುತ್ತಿರುವುದು ಕ್ಷಣಕ್ಷಣಕ್ಕೂ ಆತಂಕ ಹೆಚ್ಚಿಸುತ್ತಿದೆ. ದೇಶದಲ್ಲಿ ನಿನ್ನೆ ಒಂದೇ ದಿನ 13 ಸಾವಿರದ ಎಂಟುನೂರಕ್ಕೂ ಹೆಚ್ಚು ಕೇಸ್ಗಳು ಕನ್ಫರ್ಮ್ ಆಗಿದ್ದವು.
ಈಗ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,80,532ಕ್ಕೆ ಏರಿಕೆಯಾಗಿದ್ದು, ಮತ್ತಷ್ಟು ಆತಂಕ ಹೆಚ್ಚಾಗಿದೆ. ಈ ವರೆಗೆ ಕೊರೊನಾಗೆ 12,573 ಜನರು ಬಲಿಯಾಗಿದ್ದಾರೆ. ದೇಶದಲ್ಲಿ 2,04,711 ಜನ ಸೋಂಕಿನಿಂದ ಗುಣಮುಖರಾಗಿ ಮರು ಜೀವ ಪಡೆದಿದ್ದಾರೆ. 1,63,248 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Published On - 10:24 am, Fri, 19 June 20