ಚೀನಾ ಕಾಲ್ಕೆರಕೊಂಡು ನಿಂತಿರುವಾಗ.. ರಕ್ಷಣಾ ಸಚಿವ ರಾಜನಾಥ್ ರಷ್ಯಾಗೆ ಮಹತ್ವದ ಭೇಟಿ
ನವದೆಹಲಿ: ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾಗೆ ಭೇಟಿ ನೀಡಲು ಮುಂದಾಗಿದ್ದಾರೆ. ಜೂನ್ 22ರಂದು ಮಾಸ್ಕೋಗೆ ತೆರಳಲಿರುವ ರಾಜನಾಥ್ ಸಿಂಗ್ ಅಲ್ಲಿ ವಿವಿಧ ದೇಶಗಳ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಆದ್ರೆ ಈ ಭೇಟಿ ವೇಳೆ ಚೀನಾದ ನಾಯಕರೊಂದಿಗೆ ಯಾವುದೇ ಚರ್ಚೆ ನಡೆಸದಿರಲು ಭಾರತ ತಿರ್ಮಾನಿಸಿದೆ. ಹೀಗಾಗಿ ಮಾಸ್ಕೋ ಭೇಟಿ ಸಂದರ್ಭದಲ್ಲಿ ಯಾವುದೇ ಚೀನಾ ನಾಯಕರೊಂದಿಗೆ ರಾಜನಾಥ್ ಸಿಂಗ್ ಮಾತುಕತೆ ನಡೆಸುವುದಿಲ್ಲ. ಭಾರತದ ಈ ನಿರ್ಧಾರ ಮಹತ್ವದ್ದಾಗಿದೆ. ಯಾಕಂದ್ರೆ […]
ನವದೆಹಲಿ: ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾಗೆ ಭೇಟಿ ನೀಡಲು ಮುಂದಾಗಿದ್ದಾರೆ. ಜೂನ್ 22ರಂದು ಮಾಸ್ಕೋಗೆ ತೆರಳಲಿರುವ ರಾಜನಾಥ್ ಸಿಂಗ್ ಅಲ್ಲಿ ವಿವಿಧ ದೇಶಗಳ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಆದ್ರೆ ಈ ಭೇಟಿ ವೇಳೆ ಚೀನಾದ ನಾಯಕರೊಂದಿಗೆ ಯಾವುದೇ ಚರ್ಚೆ ನಡೆಸದಿರಲು ಭಾರತ ತಿರ್ಮಾನಿಸಿದೆ. ಹೀಗಾಗಿ ಮಾಸ್ಕೋ ಭೇಟಿ ಸಂದರ್ಭದಲ್ಲಿ ಯಾವುದೇ ಚೀನಾ ನಾಯಕರೊಂದಿಗೆ ರಾಜನಾಥ್ ಸಿಂಗ್ ಮಾತುಕತೆ ನಡೆಸುವುದಿಲ್ಲ.
ಭಾರತದ ಈ ನಿರ್ಧಾರ ಮಹತ್ವದ್ದಾಗಿದೆ. ಯಾಕಂದ್ರೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವಾಗ ಭಾರತ ಮತ್ತು ಚೀನಾಗಳೆರಡರ ಜತೆಯೂ ಆತ್ಮೀಯ ಸಂಬಂಧ ಹೊಂದಿರುವ ರಷ್ಯಾಗೆ ಭಾರತದ ರಕ್ಷಣಾ ಸಚಿವರ ಪ್ರವಾಸ ಹೆಚ್ಚು ಮಹತ್ವ ಪಡೆದಿದೆ.