ರಾಹುಲ್ ಗಾಂಧಿಗೆ ಇಂದು ಹ್ಯಾಪಿ ಬರ್ತ್​ಡೆ: 50 ವಸಂತ ಕಂಡ ಕಾಂಗ್ರೆಸ್ ನಾಯಕ

ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇಂದು 50ನೇ ಹ್ಯಾಪಿ ಬರ್ತ್​ಡೆ.ಈ ಸಂದರ್ಭದಲ್ಲಿ ಕೇಕ್ ಹಂಚಿ ಸಂಭ್ರಮಿಸುವುದು ಬೇಡ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. 1970ರ ಜೂನ್ 19ರಂದು ಜನಿಸಿದ ರಾಹುಲ್ ಗಾಂಧಿ ಅವಿವಾಹಿತರಾಗಿದ್ದಾರೆ. ಕಳೆದ ವರ್ಷ ಎಐಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಪಕ್ಷ ಅತ್ಯಂತ ಸಂಭ್ರಮದಿಂದ ರಾಹುಲ್ ಹುಟ್ಟುಹಬ್ಬ ಆಚರಿಸಿತ್ತು. ಆದ್ರೆ ಈ ಬಾರಿ ಕ್ರೂರಿ ಕೊರೊನಾ ಸೋಂಕು ಇಡೀ ದೇಶವನ್ನು ಭಾದಿಸುತ್ತಿದೆ, ಜೊತೆಗೆ ಇತ್ತೀಚೆಗೆ ಚೀನಾ ಗಡಿಯಲ್ಲಿ ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಇಂತಹ ಕರಾಳಛಾಯೆ ಇರುವಾಗ […]

ರಾಹುಲ್ ಗಾಂಧಿಗೆ ಇಂದು ಹ್ಯಾಪಿ ಬರ್ತ್​ಡೆ: 50 ವಸಂತ ಕಂಡ ಕಾಂಗ್ರೆಸ್ ನಾಯಕ
Follow us
ಸಾಧು ಶ್ರೀನಾಥ್​
|

Updated on:Jun 19, 2020 | 10:29 AM

ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇಂದು 50ನೇ ಹ್ಯಾಪಿ ಬರ್ತ್​ಡೆ.ಈ ಸಂದರ್ಭದಲ್ಲಿ ಕೇಕ್ ಹಂಚಿ ಸಂಭ್ರಮಿಸುವುದು ಬೇಡ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. 1970ರ ಜೂನ್ 19ರಂದು ಜನಿಸಿದ ರಾಹುಲ್ ಗಾಂಧಿ ಅವಿವಾಹಿತರಾಗಿದ್ದಾರೆ.

ಕಳೆದ ವರ್ಷ ಎಐಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಪಕ್ಷ ಅತ್ಯಂತ ಸಂಭ್ರಮದಿಂದ ರಾಹುಲ್ ಹುಟ್ಟುಹಬ್ಬ ಆಚರಿಸಿತ್ತು. ಆದ್ರೆ ಈ ಬಾರಿ ಕ್ರೂರಿ ಕೊರೊನಾ ಸೋಂಕು ಇಡೀ ದೇಶವನ್ನು ಭಾದಿಸುತ್ತಿದೆ, ಜೊತೆಗೆ ಇತ್ತೀಚೆಗೆ ಚೀನಾ ಗಡಿಯಲ್ಲಿ ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಇಂತಹ ಕರಾಳಛಾಯೆ ಇರುವಾಗ ಹುಟ್ಟುಹಬ್ಬದ ಸಂಭ್ರಮ ಸಲ್ಲದು ಎಂದು ಪಕ್ಷ ತಿಳಿಸಿದೆ.

Published On - 10:28 am, Fri, 19 June 20